Wednesday, May 1, 2024
spot_img
HomeChamarajanagarಜಿಲ್ಲೆಯಲ್ಲಿ 11975 ಪ್ರಕರಣಗಳು ಇತ್ಯರ್ಥ: ನಗರದಲ್ಲಿ ನ್ಯಾ.ಬಿ.ಎಸ್.ಭಾರತಿ

ಜಿಲ್ಲೆಯಲ್ಲಿ 11975 ಪ್ರಕರಣಗಳು ಇತ್ಯರ್ಥ: ನಗರದಲ್ಲಿ ನ್ಯಾ.ಬಿ.ಎಸ್.ಭಾರತಿ

 ಪಾಲಾರ್ ಪತ್ರಿಕೆ| Palar Pathrike

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಲೋಕಾ ಅದಾಲತ್ ಅಲ್ಲಿ  9.77.91.840 ರೂ ವರೆಗಿನ 11975 ಪ್ರಕರಣಗಳು ಇತ್ಯರ್ಥಗೊಂಡಿದೆ ಎಂದು ಜಿಲ್ಲಾ ನ್ಯಾಯಾದೀಶೆ ಬಿ.ಎಸ್‌.ಭಾರತಿ ಅವರು ಪತ್ರಿಕಾಘೊಷ್ಟಿಯಲ್ಲಿ ಹೇಳಿದರಯ. 
 ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎಡಿಆರ್ ಕಟ್ಟಡ ಸಭಾಂಗಣದಲ್ಲಿ  ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಪತ್ರಿಕಾಘೊಷ್ಟಿಯಲ್ಲಿ ಈ ವಿಚಾರ ತಿಳಿಸಿದರು. 
ಚಾಮರಾಜನಗರ 6401, ಕೊಳ್ಳೇಗಾಲ 3207, ಗುಂಡ್ಲುಪೇಟೆ 1902 ಹಾಗೂ ಯಳಂದೂರು ನ್ಯಾಯಾಲಯದಲ್ಲಿ  465 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಒಟ್ಟು ಜಿಲ್ಲೆಯಲ್ಲಿ 11975 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.
ನ್ಯಾಯಾಲಯದಲ್ಲಿ  ಒಟ್ಟು 6,56,86,617 ರೂ ವರೆಗಿನ 1621 ಪ್ರಕರಣಗಳು ‌ಹಾಗೂ 3,21,05,223 ರೂ ವರೆಗಿನ 10354  ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ ಎಂದರು.
ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣಗಳು ವಿಲೇವಾರಿ ಆಗಿರುವುದರಿಂದ ಜನ ಸಾಮಾನ್ಯರಿಗೆ ಅನುಕೂಲದ ಜೊತೆಗೆ ನ್ಯಾಯಾಲಯಗಳ ಮೇಲೆ ಹೊರೆ ತಗ್ಗಿದೆ.ಲೋಕ್ ಅದಾಲತ್ ಯಶಸ್ವಿಗೆ ಶ್ರಮಿಸಿದ ಚಾಮರಾಜನಗರ ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳಿಗೆ, ವಕೀಲರಿಗೆ, ನ್ಯಾಯಾಲಯದ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.ಪತ್ರಿಕಾಘೊಷ್ಟಿಯಲ್ಲಿ ಸದಸ್ಯ ಕಾರ್ಯದರ್ಶಿ ಶ್ರೀದರ್ ಹಾಗೂ ವಕೀಲ ಸಂಘದ ಅದ್ಯಕ್ಷ ಇಂದುಶೇಖರ್ ಹಾಜರಿದ್ದರು‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments