Thursday, April 25, 2024
spot_img
HomeChikballapurಹಸಿರಾಗಿರಲಿ ಜೀವನದ ಸಂಧ್ಯಾಕಾಲ

ಹಸಿರಾಗಿರಲಿ ಜೀವನದ ಸಂಧ್ಯಾಕಾಲ

ಪಾಲಾರ್ ಪತ್ರಿಕೆ | Palar Pathrike

ಚಿಂತಾಮಣಿ : ವಯಸ್ಸಾಗುತ್ತಾ ಸಾಗಿದಂತೆ ಬದುಕನ್ನು ಸರಳಗೊಳಿಸಿಗೊಂಡು ಜೀವನದ ಸಂಧ್ಯಾಕಾಲವನ್ನು ಹಸಿರಾಗಿಸಿಕೊಳ್ಳಬೇಕು ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ರವರು ಅಭಿಪ್ರಾಯಪಟ್ಟರು.
ಚಿಂತಾಮಣಿ ನಗರದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಮಾಸಿಕ ಸಭೆಯಲ್ಲಿ ಅತಿಥಿಗಳಾಗಿ ಭಾಗವಹಿಸಿ “ಬದುಕಿನ ಸಾರ್ಥಕತೆ” ಕುರಿತಾಗಿ ಪ್ರವಚನವನ್ನು ನೀಡುತ್ತಾ ಮಾತನಾಡಿದರು.
ವೃದ್ಧಾ÷್ಯಪ್ಯದಲ್ಲಿ ಮಾನಸಿಕವಾದ ಚಿಂತೆಗಳಿಗೆ ವ್ಯಥೆಪಡುವಂತಾಗುತ್ತದೆ. ಕೆಲವೊಮ್ಮೆ ಕುಟುಂಬದಲ್ಲಿರುವ ಸಮಸ್ಯೆಗಳು ಮನಸ್ಸಿಗೆ ಹೆಚ್ಚು ಗಾಸಿಯನ್ನುಂಟು ಮಾಡುತ್ತದೆ. ಕೌಟುಂಬಿಕ ಸಮಸ್ಯೆಗಳನ್ನು ತ್ಯಾಗ ಮತ್ತು ಪ್ರೀತಿಯಿಂದ ಪರಿಹರಿಸಿಕೊಳ್ಳಬೇಕು. ಹಿರಿಯರ ಅನುಭವ ಅಪಾರವಾದದ್ದು. ಅವರ ಅನುಭವದ ಸಾರವನ್ನು ಮುಂದಿನ ಪೀಳಿಗೆಗೆ ಹಂಚಬೇಕು. ನಿವೃತ್ತಿಯ ಜೀವನವು ಸುಖಮಯವಾಗಬೇಕಾದರೆ ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮನಸ್ಸನ್ನು ಶಾಂತವಾಗಿಟ್ಟುಕೊAಡು ಪ್ರಬುದ್ಧವಾದ ಆಲೋಚನೆಯನ್ನು ಮಾಡಬೇಕು ಎಂದು ಹೇಳುತ್ತಾ ಹಲವಾರು ಉದಾಹರಣೆಗಳ ಮೂಲಕ ಪ್ರವಚನವನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಾರಾಯಣಸ್ವಾಮಿರವರು ಮಾತನಾಡಿ 7ನೇ ವೇತನ ಆಯೋಗದ ಅಧ್ಯಕ್ಷರಾದ ಸುಧಾಕರರಾವ್ ರವರು ಕೇಳಿದ್ದ 10 ಪ್ರಶ್ನೆಗಳಿಗೆ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಭೈರಪ್ಪನವರು ಈಗಾಗಲೇ ಉತ್ತರಿಸಿದಾರೆ. ಈ ಬಾರಿ ಆಯೋಗವು ನಮ್ಮಲ್ಲಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದು, ಸರ್ಕಾರವು ಸಹ ಈ ಸಂಬAಧವಾಗಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ, ಸಭೆಗೆ ಮಾಹಿತಿಯನ್ನು ನೀಡಿದರು.
ಸ್ನೇಹಜೀವಿ ಕಲಾತಂಡದವರಿAದ ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಹನುಮಂತಯ್ಯನವರು ಪ್ರಾರ್ಥಿಸಿದರು, ಕಾರ್ಯದರ್ಶಿ ಎಸ್. ಆಂಜಿನಪ್ಪನವರು ಸ್ವಾಗತಿಸಿದರು. ಎ.ಎಸ್.ರಾಮಚಂದ್ರಮೂರ್ತಿ ರವರು ನಿರೂಪಿಸಿದರು. ಬಿ.ಪಿ.ಸಯ್ಯದ್ ಗಫಾರ್ ರವರು ವಂದನಾರ್ಪಣೆ ಮಾಡಿದರು. ಪ್ರವಚನಕಾರ ಆನಂದ್‌ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷಿ÷್ಮÃನಾರಾಯಣ, ತಾಲೂಕು ಗೌರವ ಅಧ್ಯಕ್ಷರಾದ ಚಂದ್ರಶೇಖರ ಬಾಬು ಉಪಸ್ಥಿತರಿದ್ದರು. ಚೈನ್ನೆöÊನ ರೈಲ್ವೆ ಆಸ್ಪತೆಯಲ್ಲಿ ವೈದ್ಯಾಧಿಕಾರಿಯಾಗಿರುವ ಚಿಂತಾಮಣಿ ಮೂಲದ ಡಾ||ನವೀನ್ ರವರು ಸಭಿಕರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು. ಮಾಸಿಕ ಸಭೆಯಲ್ಲಿ ನೂರಕ್ಕೂ ಹೆಚ್ಚು ನಿವೃತ್ತ ನೌಕರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments