Friday, March 29, 2024
spot_img
HomeChamarajanagarಆರಕ್ಷಕನಿಗೆ ಕೆಲಸದೊತ್ತಡದಿಂದಾಯ್ತಾ ಹೃದಯಘಾತ.!? ಅಗತ್ಯ ಸಿಬ್ಬಂದಿ ನಿಯೋಜನೆ ಮಾಡದ ಮೇಲಾಧಿಕಾರಿಗಳು!

ಆರಕ್ಷಕನಿಗೆ ಕೆಲಸದೊತ್ತಡದಿಂದಾಯ್ತಾ ಹೃದಯಘಾತ.!? ಅಗತ್ಯ ಸಿಬ್ಬಂದಿ ನಿಯೋಜನೆ ಮಾಡದ ಮೇಲಾಧಿಕಾರಿಗಳು!

ಪಾಲಾರ್ ಪಾತ್ರಿಕೆ | Palar Pathrike

ಚಾಮರಾಜನಗರ: ಕೆಲಸದ ಒತ್ತಡ ಹೆಚ್ಚಾದಷ್ಟು ಮಾನಸಿಕ ಖಿನ್ನತೆಗೊಳಗೋದು ಸಾಮಾನ್ಯ. ಆದರಂತೆ ಸಾಕಷ್ಟು ಒತ್ತಡದಿಂದ  ಹೃದಯಘಾತವಾಯ್ತೆ ಎಂಬ ಚರ್ಚೆಗಳು ಗಡಿಜಿಲ್ಲೆ ಚಾಮರಾಜನಗರ ಪೊಲೀಸ್ ವಲಯದಲ್ಲಿ ಆರಂಭವಾಗಿದೆ.ಠಾಣೆಗಳಲ್ಲಿ  ಸಾಕಷ್ಟು ಸಿಬ್ಬಂದಿಗಳಿದ್ದಾರೆ..ಕೆಲವೆಡೆ ಹಿಂದಿನ ಎಸ್ಪಿ ಅವರ ಆದೇಶದಂತೆ ಹೆಚ್ಚುವರಿ ಒಒಡಿ ಹುದ್ದೆಗಳು ಲಭ್ಯವಾಗಿದೆ. ಅಲ್ಲಿಗೆ ನಿಗದಿ ಮೀರಿ ಠಾಣೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ‌. ಹೀಗಿರುವಾಗ ಕೆಲ ಔಟ್ ಪೊಸ್ಟ್ ಗಳಲ್ಲಿ ನಿಗದಿತ ಆರಕ್ಷಕರ ನಿಯೋಜಿಸದೆ ಅಲ್ಪ ಸಿಬ್ಬಂದಿಗೆ ಹೆಚ್ಚಿನ ಹೊರೆ ವಹಿಸಿ ಹಗಲು ರಾತ್ರಿ ಎನ್ನದೆ ದಿನವಿಡಿ ಕೆಲಸ ಮಾಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಮೊನ್ನೆಯಷ್ಟೆ ಗುಂಡ್ಲುಪೇಟೆ ತಾಲ್ಲೋಕಿನ ಕಬ್ಬಳ್ಳಿ ಔಟ್ ಪೊಸ್ಟ್ ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದ ಮುಖ್ಯಪೇದೆ ರಾಜಗೋಪಾಲ್ ಬೆಳಿಗ್ಗೆಯೆ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ವಿಪರ್ಯಾಸವೆಂದರೆ ಔಟ್ ಪೊಸ್ಟ್ ಅಲ್ಲಿ ಒಬ್ಬರು ಮುಖ್ಯಪೇದೆ ಹಾಗೂ ಮೂರ್ನಾಲ್ಕು ಪೇದೆಗಳ ನಿಯೋಜನೆ ಸಾಮಾನ್ಯ‌.ಆದರೆ ಇಲ್ಲಿ ಮುಖ್ಯಪೇದೆ, ಪೇದೆ ಇಬ್ಬರನ್ನ ನಿಯೋಜಿಸಿದ್ದಾರೆ. ರಜೆ ಕೇಳಿದರೂ ರಜೆ ಸಿಗಲಿಲ್ಲ: ಮುಖ್ತಪೇದೆ ಹಗಲು ರಾತ್ರಿ ಎನ್ನದೆ ಔಟ್ ಪೊಸ್ಟ್ ಅಲ್ಲಿ ೨೪ ಗಂಟೆಗಳ ಕಾಲ ಎಷ್ಟೊ ದಿನ ಕರ್ತವ್ಯ ಮಾಡಿದ್ದಾರೆ. ಅಗತ್ಯ ರಜೆ ಕೋರಿದರೂ ಕೊಡದೆ  ಮೇಲಾದಿಕಾರಿಗಳು ಸತಾಯಿಸುತ್ತಿದ್ದರು ಅಷ್ಟೆ ಅಲ್ಲ  ವಾರಂಟ್ ಕರ್ತವ್ಯದಲ್ಲಿದ್ದ ಅವರನ್ನ ಔಟ್ ಪೊಸ್ಟ್ ನಿಯೋಜಿಸಿದ್ದರು. ಬೇಗೂರು ಪಿಎಸ್ಐ ಜಗದೀಶ್ ದೂಳಶೆಟ್ಟಿ ಎಂಬುವವರ ಕಿರುಕುಳದಿಂದ ಬೇಸತ್ತಿರೊ ಕೆಲವರ ಪೈಕಿ  ಬೇರೆ ಕಾರಣ ನೀಡಿ ಹಿಂದಿನ ಎಸ್ಪಿ ಶಿವಕುಮಾರ್ ಅವರಿಗೆ ಎಎಸ್ಐ ಒಬ್ಬರು ಸ್ವಯಂ ನಿವೃತ್ತಿ ಪತ್ರ ಬರೆದುಕೊಟ್ಟಿದ್ದಾರೆ ಎಂಬ ಅಂಶವೂ ಹೊರಬಂದಿದೆ.  ನೂತನ ಎಸ್ಪಿ ಪದ್ಮಿನಿ ಸಾಹು ಅವರ ವಿಚಾರ ಗಂಬೀರವಾಗಿ ಪರಿಗಣಿಸಿ ಔಟ್ ಪೊಸ್ಟ್ ನ ಸಿಬ್ಬಂದಿಗಳ ಕೊರತೆ ಹಾಗೂ ಸಿಬ್ಬಂದಿಗಳ ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಬೇಕಾಗಿದೆ. ಇಲ್ಲವಾದರೆ ಇದೆ ಸಿಬ್ಬಂದಿ ಕೊರತೆ ಹಾಗೂ ಹೆಚ್ಚುವರಿ ಕೆಲಸದೊತ್ತಡದಿಂದ ಮತ್ತಷ್ಟು ಸಿಬ್ಬಂದಿಗಳನ್ನ ಕಳೆದುಕೊಳ್ಳಬಹುದು‌.

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments