Friday, April 26, 2024
spot_img
HomeChamarajanagarಕಲಿಕೆ, ಕಲಿಕಾ ಹಬ್ಬ ನಿರಂತರವಾಗಿರಲಿ- ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ

ಕಲಿಕೆ, ಕಲಿಕಾ ಹಬ್ಬ ನಿರಂತರವಾಗಿರಲಿ- ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ


ಪಾಲಾರ್ ಪಾತ್ರಿಕೆ | Palar Pathrike

ಚಾಮರಾಜನಗರ: ವೆಂಕಟಯ್ಯನಛತ್ರ ಗ್ರಾಮದಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ

ಪ್ರತಿಯೊಬ್ಬರ ಜೀವನದ ಬುನಾದಿಯಾದ ಕಲಿಕೆ ಮತ್ತು ಕಲಿಕಾ ಹಬ್ಬ ನಿರಂತರವಾಗಿರಬೇಕು ಎಂದು ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಹೇಳಿದರು.
ತಾಲ್ಲೂಕಿನ ವೆಂಕಟಯ್ಯನಛತ್ರ ಗ್ರಾಮದ ವೆಂಕಟರಮಣಸ್ವಾಮಿ ದೇವಸ್ಥಾನದ ಮುಂಭಾಗ ನಡೆದ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಲಿಕೆ ಅನ್ನೋದು ಜೀವನದ ಬುನಾದಿ ಜೀವನ ನಮಗೆ ಯಾವಾಗಲೂ ಕಲಿಸುತ್ತಲೇ ಇರುತ್ತದೆ, ಜೀವನ ಪ್ರಶ್ನೆ ಪತ್ರಿಕೆ ಕೊಟ್ಟು ನಮ್ಮ ಬಳಿ ಉತ್ತರ ಪಡೆಯುತ್ತದೆ ಕಲಿಕೆಯನ್ನು ಜೀವನದ ಗುರಿಯಾಗಿ ಇಟ್ಟುಕೊಳ್ಳಬೇಕು ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಾಗಿ ಕಲಿಕೆಯತ್ತಾ ಆಕರ್ಷಿತರಾಗಬೇಕು ಹೆಚ್ಚು ವಿಧ್ಯಾಭ್ಯಾಸ ಮಾಡಿದರೆ ಜೀವನದಲ್ಲಿ ನಾವು ಬಯಸಿದ್ದೆಲ್ಲಾ ಸಿಗುತ್ತದೆ ಮಕ್ಕಳು ಸರ್ಕಾರಿ ಶಾಲೆಗೆ ಆಯ್ಕೆಯಾಗಿ ಬರುವಂತಹ ಶಿಕ್ಷಕರ ಜಾಣ್ಮೆಯನ್ನು ನೀವು ಕರಗತಮಾಡಿಕೊಳ್ಳಬೇಕು ಎಂದು ತಿಳಿಸಿದರು. 
ವಿವಿಧ ಬಗೆಯ ಕಲಾತಂಡಗಳೊಂದಿಗೆ, ಎತ್ತಿನಗಾಡಿಯಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಶಾಲಾ ಮಕ್ಕಳು ವಿಶೇಷ ರೀತಿಯ ಉಡುಗೆ ತೊಟ್ಟು ಕಲಿಕಾ ಹಬ್ಬದಲ್ಲಿ ಸಂಭ್ರಮಿಸಿದರು.ಪ್ರಾಂಶುಪಾಲರಾದ ನಾಗೇಶ್, ಮುಖ್ಯ ಶಿಕ್ಷಕಿ ನಾಗರತ್ನ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಮಿತ್ ಕುಮಾರ್, ಎಸ್.ಡಿ.ಎಂ.ಸಿ.ನಂಜುಂಡಸ್ವಾಮಿ, ಶಿಕ್ಷಕರಾದ ಲೋಕೇಶ್, ಮಲ್ಲೇಶ್, ಕಿರಣ್ ರಾಜ್, ನಟರಾಜ್, ವೆಂಕಟಚಲ, ಮಂಜುಳ, ಸುಜಾತ, ಸಿ.ಆರ್.ಪಿ.ಮಾಲಿಂಗನಾಯಕ, ನಂದೀಶ್, ಶಿವಕುಮಾರ್, ಶಿರಾಮಯ್ಯ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments