Tuesday, June 6, 2023
spot_img
HomeChikballapurಉಚಿತ ‌ನಿವೇಶ ಮಂಜೂರು

ಉಚಿತ ‌ನಿವೇಶ ಮಂಜೂರು


ಪಾಲಾರ್ ಪಾತ್ರಿಕೆ | Palar pathrike

ಗುಡಿಬಂಡೆ : ಗ್ರಾಮದಲ್ಲಿ ವಾಸವಿರುವ ಬಡ ಕೂಲಿ ಕಾರ್ಮಿಕರು ವಾಸ ಮಾಡಲು ಉಚಿತ ‌ನಿವೇಶ ಮಂಜೂರು ಮಾಡುವುದು, ಗ್ರಾಮದ ಸ್ಮಾಶನಕ್ಕೆ ಜಾಗ ಮಂಜೂರು ಮಾಡುವುದು ಸೇರಿ ಒಟ್ಟು 36 ಅರ್ಜಿಗಳನ್ನು  ತಹಶಿಲ್ದಾರರ್ ಸಿಗ್ಬತ್ ವುಲ್ಲಾಗೆ ನೀಡಿದರು.
ಶನಿವಾರ ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಇಡ್ರಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಉಚಿತ ನಿವೇಶನ, ಸ್ಮಾಶನಕ್ಕೆ ಜಾಗ, ಚರಂಡಿ ಸ್ವಚ್ಚತೆ, ಸಿ.ಸಿ.ರಸ್ತೆಗಳು ಹಾಕಿಸುವುದು, ಗ್ರಾಮಠಾಣ ಜಾಗ ಗುರುತಿಸುವುದು, ಕ್ರೀಡಾಂಗಣಕ್ಕೆ ಜಾಗ ನೀಡುವುದು ಸೇರಿ ಅನೇಕ ಮೂಲಭೂತ ಸವಲತ್ತುಗಳನ್ನು ನೀಡಬೇಕೆಂದು ಗ್ರಾಮಸ್ಥರು ತಹಶಿಲ್ದಾರರ್ ಗೆ ಮನವಿ ಪತ್ರ ನೀಡಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ತಹಶಿಲ್ದಾರರ್ ಸಿಗ್ಬತ್ ವುಲ್ಲಾ ಮಾತನಾಡಿ, ಸರಕಾರ ಅನುಷ್ಠಾನಕ್ಕೆ ತಂದಿರುವ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆಗೆ ಎಂಬ ಕಾರ್ಯಕ್ರಮದಿಂದ  ತಮ್ಮ ಗ್ರಾಮಕ್ಕೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಬಂದಿದ್ದು, ತಮ್ಮ ಸಮಸ್ಯೆಗಳು ಇದ್ದರೆ ಸ್ಥಳದಲ್ಲೆ ಪರಿಹರಿಸಲಾಗುವುದು ಹಾಗೂ ಇನ್ನು ಕೆಲ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ತಿಳಿಸಿದರು, ಈಗಾಗಲೇ ೩ ನೇ ಭಾರಿ ಈ ಗ್ರಾಮಕ್ಕೆ ಭೇಟಿ ನೀಡಿ ಹಲವು ಸಮಸ್ಯೆಗಳನ್ನು ಬಗೆಹರಿಸಲಾಗಿದೆಂದು ತಿಳಿಸಿದರು.
ನಂತರ ತಾ.ಪಂ ಇ.ಒ.  ಬಿ. ಬಿಂದು  ಮಾತನಾಡಿ, ಇಡ್ರಹಳ್ಳಿ ಗ್ರಾಮದಲ್ಲಿ ಚರಂಡಿ,ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆಂದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತಿ ಸೇರಿ ಇತರೆ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿರುವ ಸವಲತ್ತುಗಳನ್ನು ಸಭೆಯಲ್ಲಿ ತಿಳಿಸಿದರು.

ಈ ವೇಳೆ ಉಲ್ಲೋಡು ಗ್ರಾ.ಪಂ.  ಅಭಿವೃದ್ಧಿ ಅಧಿಕಾರಿ ವಿ ಶ್ರೀನಿವಾಸ್,  ಅಧ್ಯಕ್ಷ ವೈ.ಎಸ್ ಬೈರಾರೆಡ್ಡಿ, ಉಪಾಧ್ಯಕ್ಷೆ ಮುದ್ದುಗಂಗಮ್ಮ,  ತೋಟಗಾರಿಕೆ ಇಲಾಖೆಯ ದಿವಾಕರ್, ರೇಷ್ಮೆ ಮುನಿಸ್ವಾಮಿ, ಕೃಷಿ ಇಲಾಖೆಯ ಮಾನಸ, ಶಿಕ್ಷಣ ಇಲಾಖೆಯ ಜಿ.ವಿ ಗಂಗರತ್ನಮ್ಮ, ಗ್ರಾಮಲೆಕ್ಕಾಧಿಕಾರಿ ಲಕ್ಷ್ಮೀನಾರಾಯಣ, ಗ್ರಾಮ ಪಂಚಾಯತಿ ಸದಸ್ಯರಾದ ಅಶ್ವತ್ಥಪ್ಪ, ಮಂಜುಳ ರಮೇಶ್ ಬಾಬು, ಪ್ರಮೀಳಮ್ಮ ಮಂಜುನಾಥ್, ಲಕ್ಷ್ಮಮ್ಮ, ಶ್ಯಾಮಲಾ ಸಂತೋಷ್, ವೆಂಕಟರಾಮಪ್ಪ, ಗ್ರಾಮಸ್ಥರಾದ ಸೋಣ್ಣಪ್ಪರೆಡ್ಡಿ, ರಾಮಕೃಷ್ಣಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments