Tuesday, April 30, 2024
spot_img
HomeBangalore Ruralತರಾತುರಿಯಲ್ಲಿ 25ನೇ ಕಸಾಪ ಜಿಲ್ಲಾ ಸಮ್ಮೇಳನ ಬೆರಳೆಣಿಕೆಯಷ್ಟು ಮಂದಿ ಭಾಗಿ

ತರಾತುರಿಯಲ್ಲಿ 25ನೇ ಕಸಾಪ ಜಿಲ್ಲಾ ಸಮ್ಮೇಳನ ಬೆರಳೆಣಿಕೆಯಷ್ಟು ಮಂದಿ ಭಾಗಿ

ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ: ಕನ್ನಡ ಸಾಹಿತ್ಯ ಪರಿಷತ್‌ನ 25ನೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಬೆರಳೆಣಿಕೆಯಷ್ಟು ಮಂದಿ ಭಾಗಿಯಾಗಿರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ನೋವಿನ ನುಡಿಗಳನ್ನು ನುಡಿದರು.
ದೇವನಹಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 25ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಮೈಸೂರು ಹನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ರಾಜ್ಯ ಡಾ.ಗಂಗೂಬಾಯಿ ಕುಲಪತಿ ಪ್ರೋ.ನಾಗೇಶ್.ವಿ.ಬೆಟ್ಟಕೋಟೆ ಅವರು ವಹಿಸಿಕೊಂಡಿದ್ದರು. ಭವನದ ಆವರಣದಲ್ಲಿ ಕನ್ನಡ ಪುಸ್ತಕ ಮಳಿಗೆ, ನರ್ಸರಿ, ಖಾದಿ ಬಟ್ಟೆ ಮಾರಾಟ ಸೇರಿದಂತೆ ವಿವಿಧ ಪುಸ್ತಕ ಮತ್ತು ಹಳೇ ನಾಣ್ಯಗಳ ಮಳಿಗೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ವಹಿಸಿದ್ದರು.
ವೇದಿಕೆ ಭಾಷಣದಲ್ಲಿ ಮಾತನಾಡಿದ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಮೆರವಣಿಗೆ, ಧ್ವಜಾರೋಹಣ, ಕವಿಗೋಷ್ಠಿ, ವಿಚಾರಗೋಷ್ಠಿಗಳು ಇರುತ್ತದೆ. ಇಷ್ಟೆಲ್ಲಾ ಕಾರ್ಯಕ್ರಮಳು ನಡೆಯುವ ಜಿಲ್ಲಾ ಸಮಾವೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ನಾಳೆಯೂ ಸಹ ಸಮ್ಮೇಳನವು ಸನ್ಮಾನ ಮತ್ತು ಸಮಾರೂಪ ಸಮಾರಂಭವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಮನಸ್ಸುಗಳು ಭಾಗಿಯಾಗುವುದರ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರುತ್ತೇನೆ ಎಂದ್ರು.
ಇದೇ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ನಂಜೇಗೌಡ, ಜಿಲ್ಲಾ ಕೋಶಾಧ್ಯಕ್ಷ ಕಸಾಪ ಮುನಿರಾಜ್‌ಅಪ್ಪಯ್ಯ, ಚಂದ್ರಶೇಕರ್, ಹಿತ್ತರಹಳ್ಳಿ ರಮೇಶ್, ಶ್ರೀನಿವಾಸ್ ಗೌಡ, ಶ್ರೀರಾಮಯ್ಯ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಸಾಪ ಪದಾಧಿಕಾರಿಗಳು ಇದ್ದರು.
ಚಿತ್ರ: 19 ಡಿಹೆಚ್‌ಎಲ್ ಪಿ2
ದೇವನಹಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 25ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷ ಪ್ರೊ.ನಾಗೇಶ್.ವಿ.ಬೆಟ್ಟಕೋಟೆ ಹಾಗೂ ತಾಲೂಕು ತಹಶೀಲ್ದಾರ್ ಶಿವರಾಜ್ ಉದ್ಘಾಟಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments