Sunday, September 24, 2023
spot_img
HomeBangalore Ruralದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಸಮಾವೇಶ

ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಸಮಾವೇಶ


ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ: ರಾಜ್ಯ ಮತ್ತು ಕೇಂದ್ರ ಸರಕಾರದ ಸಾದನೆಗಳನ್ನು ಹೇಳುವುದು ಬಹಳಷ್ಟು ಇದೆ. ಈಗಾಗಲೇ ಬಿಜೆಪಿಯ ಪ್ರತಿ ಮುಖಂಡರು, ಕಾರ್ಯಕರ್ತರು ವಿಧಾನಸಭಾ ಕ್ಷೇತ್ರದಲ್ಲಿ ಮನೆಮನೆಗೆ ಬಿಜೆಪಿ ಕರಪತ್ರಗಳನ್ನಿಡಿದು ಮನೆಮನೆಗೆ ತೆರಳಿ ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕೇಶ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ಬಿಜೆಪಿ ಜಿಲ್ಲಾ ರೈತಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ನುಡಿಯುವುದರ ಮೂಲಕ ಅವರು ಮಾತನಾಡಿದರು. ಈಗಾಗಲೇ ಬಿಜೆಪಿ ಪಕ್ಷದ ಪ್ರತಿ ಮುಖಂಡರು ಮನೆಮನೆಗೆ ಕರಪತ್ರಗಳನ್ನು ತಲುಪಸಿದ್ದು, ನಿಮ್ಮ ಜೊತೆ ಇರುವ ಜನರನ್ನು ಗೌರವಿಸಬೇಕಿದೆ. ಈ ಹಿಂದೆ ಶಾಸಕರಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಚಂದ್ರಣ್ಣ, ಪಿಳ್ಳಮುನಿಶಾಮಪ್ಪ ಆಗ ಮಾಡಿರುವ ಕೆಲಸಗಳನ್ನು ಈ ಬಾರಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಾಗ ಅವರೆಲ್ಲರ ಅನುಭವ ಗೆದ್ದಂತಹ ಅಭ್ಯರ್ಥಿ ಆ ಕೆಲಸಗಳನ್ನು ಮನೆಬಾಗಿಲಿಗೆ ತಲುಪಿಸುವ ಕೆಲಸ ಆಗುತ್ತದೆ. ಭಾರತೀಯ ಜನತಾ ಪಾರ್ಟಿಗೆ ಅವಕಾಶ ಕೊಟ್ಟಿಲ್ಲ. ಈ ಬಾರಿ ಭಾರತೀಯ ಜನತಾ ಪಾರ್ಟಿ ದೇಶ ಮತ್ತು ರಾಜ್ಯದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನಗರಕ್ಕೆ ಸೀಮಿತಗೊಂಡಿದ್ದ ಬಿಜೆಪಿ ಪಕ್ಷ ಇದೀಗ ಪ್ರತಿ ಹಳ್ಳಿಯಲ್ಲೂ ಗುರ್ತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಅಭ್ಯರ್ಥಿಯನ್ನು ಗೆಲ್ಲಲು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಸಮಾವೇಶದ ಅಧ್ಯಕ್ಷತೆಯನ್ನು ಬೆಂಗಳೂರು ಗ್ರಾಮಾಂತರ ರೈತಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಂ.ರವಿಕುಮಾರ್ ವಹಿಸಿದ್ದರು. ಸಮಾವೇಶದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಮುಖಂಡರು ಆಗಮಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಲವಾರು ಬಿಜೆಪಿ ನಾಯಕರು ಮತ್ತು ಮುಖಂಡರು ರೈತ ಗೀತೆ ಹಾಡುವುದರ ಮೂಲಕ ರೈತರಿಗೆ ಗೌರವಸಮಪಿಸಿದರು. ಈ ವೇಳೆಯಲ್ಲಿ ಒಬಿಸಿ ರಾಜ್ಯ ಮುಖಂಡ ನರೇಂದ್ರಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಮಾಜಿ ಶಾಸಕರುಗಳಾದ ಜಿ.ಚಂದ್ರಣ್ಣ, ಪಿಳ್ಳಮುನಿಶಾಮಪ್ಪ, ಮುಖಂಡ ಓಬದೇನಹಳ್ಳಿ ಮುನಿಯಪ್ಪ, ರಾಜ್ಯ ಎಸ್‌ಸಿ ಮೋರ್ಚಾ ಖಜಾಂಚಿ ಎ.ಕೆ.ಪಿ. ನಾಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಬಯಪ್ಪ ಮಾಜಿ ಅಧ್ಯಕ್ಷ ಎಸ್.ಎಲ್.ಎನ್.ಅಶ್ವತ್‌ನಾರಾಯಣ್, ದೇ.ಸು.ನಾಗರಾಜ್, ಜಿಲ್ಲೆಯ ನಾಲ್ಕು ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments