Tuesday, April 30, 2024
spot_img
HomeMandyaಅಂಗವೈಕಲ್ಯದಿಂದ ಹಿಂದುಳಿಯದೆ ಗಟ್ಟಿ ಮನಸ್ಸು ಮಾಡಿಕೊಂಡು ಛಲದಿಂದ ಸಾಧನೆ ಮಾಡಿ ವಿಶ್ವ ವಿಖ್ಯಾತರಾಗಿ: ಡಾ.ಹೆಚ್.ಎನ್.ಗೋಪಾಲಕೃಷ್ಣ

ಅಂಗವೈಕಲ್ಯದಿಂದ ಹಿಂದುಳಿಯದೆ ಗಟ್ಟಿ ಮನಸ್ಸು ಮಾಡಿಕೊಂಡು ಛಲದಿಂದ ಸಾಧನೆ ಮಾಡಿ ವಿಶ್ವ ವಿಖ್ಯಾತರಾಗಿ: ಡಾ.ಹೆಚ್.ಎನ್.ಗೋಪಾಲಕೃಷ್ಣ

ಮಂಡ್ಯ:-ಅಂಗವಿಕಲರನ್ನು ವಿಕಲಚೇತನರೆಂದು ಕರೆಯಲಾಗುತ್ತಿತ್ತು,  ಈಗ ಅವರನ್ನು ವಿಶೇಷ ಚೇತನರು ಎಂದು ಕರೆಯುತ್ತೇವೆ ಏಕೆಂದರೆ ಅವರು ಯಾರಿಗೂ ಕಡಿಮೆ ಇಲ್ಲ ಅಂಗವೈಕಲ್ಯದಿಂದ ಹಿಂದುಳಿಯದೆ ಮನಸ್ಥಿತಿಯನ್ನು ಗಟ್ಟಿ ಮಾಡಿಕೊಂಡು ಛಲವನ್ನು ಬೆಳೆಸಿಕೊಂಡು ವಿಶ್ವದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿ ವಿಶ್ವ ವಿಖ್ಯಾತರಾಗಬಹುದೆಂದು ಹಲವಾರು ವಿಶೇಷ ಚೇತನರು ತೊರಿಸಿಕೊಟ್ಟಿದ್ದಾರೆ. ಅವರ ದಾರಿಯನ್ನು ಅನುಸರಿಸಿ ಸಾಧನೆ ಮಾಡಿ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಅವರು ತಿಳಿಸಿದರು.

ಅವರು ಇಂದು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಾಂಸ್ಕøತಿಕ ಹಾಗೂ ಸಂಗೀತ ಕ್ಷೇತ್ರದಲ್ಲಿ ಪಂಚಾಕ್ಷರ ಗವಾಯಿ ಹಾಗೂ ಪುಟ್ಟರಾಜು ಗವಾಯಿರವರು  ಉನ್ನತ ಸಾಧನೆ ಮಾಡಿರುವುದನ್ನು  ನೋಡಬಹುದು ಎಂದರು.

ಸರ್ಕಾರವು ವಿಶೇಷ ಚೇತನರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ತಂದಿದೆ.  ವಿಶೇಷ ಚೇತನರಾಗಿ ಬಡತನದ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಅವರ ಸಾಮಾಜಿಕ ಭದ್ರತೆಗಾಗಿ ಪಿಂಚಣಿ ವ್ಯವಸ್ಥೆಯನ್ನು ಮಾಡಿರುವುದು. ಕಣ್ಣು, ಕಾಲು, ಕೈ ಸೇರಿದಂತೆ  ದೇಹದ ವಿವಿಧ ರೀತಿಯ ತೊಂದರೆ ಇರಬಹುದು. ಅವರಿಗೆ ಜೀವನ ನಡೆಸಲು ಅನುಕೂಲವಾಗುವ ರೀತಿಯ ಸಾಧನಗಳನ್ನು  ಇಲಾಖೆಯಿಂದ ನೀಡಲಾಗುವುದು ಎಂದರು.

ಡಿ ದರ್ಜೆಯಿಂದ ಹಿಡಿದು ಐ.ಎ.ಎಸ್ ಅಧಿಕಾರಿಯವರೆಗೂ ಶೈಕ್ಷಣಿಕವಾಗಿ ಮತ್ತು ಉದ್ಯೋಗಗಳಲ್ಲಿ ವಿಶೇಷ ಚೇತನರಿಗೆ ಮೀಸಲಾತಿಗಳನ್ನು ಕಲ್ಪಿಸಿ ಅವರು ಎಲ್ಲರಂತೆ ಜೀವನವನ್ನು ನಡೆಸಲು ಸರ್ಕಾರವು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

ವಿಶೇಷ ಚೇತನರಿಗೆ ಅಂಗವೈಕಲ್ಯತೆ ಇರಬಹುದು.  ಆತ್ಮವಿಶ್ವಾಸ ಬೆಳಸಿಕೊಂಡರೆ ಯಾವ ಕಷ್ಟವನ್ನು ಬೇಕಾದರೂ ಮೆಟ್ಟಿ ನಿಂತು ಸಾಧನೆ ಮಾಡಬಹುದು ಎಂದರು.

ನಗರಸಭೆ ಅಧ್ಯಕ್ಷರಾದ ಹೆಚ್.ಎಸ್.ಮಂಜು ರವರು ಮಾತನಾಡಿ ವಿಕಲಚೇತನರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಬೇಕೆಂಬ ಅರ್ಥಪೂರ್ಣ ಗುರಿ ಸಾಧನೆಯ ಕೈಂಕರ್ಯಕ್ಕೆ ನಾಗರಿಕ ಸಮಾಜ ಕೈಜೋಡಿಸಬೇಕಿದೆ. ಏಕೆಂದರೆ, ಸಮಾನತೆ ಹಾಗೂ ಸಹಭಾಗಿತ್ವಕ್ಕೆ ಆದ್ಯತೆ ನೀಡುವ ಸಮಾಜದಲ್ಲಿ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂಬ ವಾಸ್ತವವನ್ನು ನಾವೆಲ್ಲರೂ ಅರಿಯಬೇಕಿದೆ ಎಂದರು.

ತಮ್ಮದಲ್ಲದ ತಪ್ಪಿಗೆ ಬದುಕಿನುದ್ದಕ್ಕೂ ನೋವು, ಸಂಕಟ, ಅನುಭವಿಸುತ್ತಿರುವ ವಿಕಲಚೇತನರಿಗೆ ಆತ್ಮ ಸ್ಥೈರ್ಯ ತುಂಬಬೇಕಿದೆ. ಸಾರ್ವಜನಿಕ ಜೀವನದಲ್ಲಿ ಎಲ್ಲರಂತೆ
ಇವರ ಜೀವನವನ್ನು ಕಟ್ಟಿಕೊಡಬೇಕಿದೆ. ಇತರರಿಗಿಂತ  ಭಿನ್ನರಲ್ಲ. ಸಾಧನೆಯ ಹಾದಿಯಲ್ಲಿ ವೈಕಲ್ಯ ಎಂದಿಗೂ ಅಡ್ಡಿ ಆಗುವುದಿಲ್ಲ ಎಂಬ ಮನೋಬಲವನ್ನು ಅವರಲ್ಲಿ ಹೆಚ್ಚಿಸಬೇಕಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಿಕಲಚೇತನರ ಸಾಧನ ಸಲಕರಣೆಗಳ ಪ್ರದರ್ಶನ ಮಳಿಗೆಯನ್ನು ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಧಾನಸಭಾ ಶಾಶಕರಾದ ಎಂ.ಶ್ರೀನಿವಾಸ್, , ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮೀರಾ ಶಿವಲಿಂಗಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ್ ಆರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳಾದ ಆರ್.ರೋಹಿತ್, ಪ್ರೇರಣ ಅಂಧರ ಹಾಗೂ ಅಂಗವಿಕಲರ ಸಂಸ್ಥೆಯ ಅಧ್ಯಕ್ಷರಾದ ರವಿ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments