Friday, April 19, 2024
spot_img
HomeMandyaಮೈಕ್ರೋ ಅಬ್ಸರ್ವರ್ ಗಳಾಗಿ 797 ಮಂದಿ ನೇಮಕ: ಜಿಲ್ಲಾಧಿಕಾರಿ

ಮೈಕ್ರೋ ಅಬ್ಸರ್ವರ್ ಗಳಾಗಿ 797 ಮಂದಿ ನೇಮಕ: ಜಿಲ್ಲಾಧಿಕಾರಿ

ಪಾಲಾರ್ ಪತ್ರಿಕೆ | Palar Pathrike

ಮಂಡ್ಯ:  ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿರುವ 1798 ಮತಗಟ್ಟೆಗಳ ಪೈಕಿ ಕೆಲವು ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಗಮನಿಸಿ ವರದಿ ನೀಡಲು 797 ಮಂದಿ ಮೈಕ್ರೋ ಅಬ್ಸರ್ವರ್ ಗಳನ್ನು ನೇಮಕ ಮಾಡಲಾಗಿದೆ ಎಂದು  ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಮಳವಳ್ಳಿ-63, ಮದ್ದೂರು-63, ಮೇಲುಕೋಟೆ-49, ಮಂಡ್ಯ-67, ಶ್ರೀರಂಗಪಟ್ಟಣ-72, ನಾಗಮಂಗಲ- 58, ಕೆ.ಆರ್ ಪೇಟೆ- 56 ಮತಗಟ್ಟೆಗಳನ್ನು ಗುರುತಿಸಿ ಮೈಕ್ರೋ ಅಬ್ಸರ್ವರ್ ಗಳನ್ನು ಮತಗಟ್ಟೆಗೆ ನೇಮಕ ಮಾಡಲಾಗಿದೆ ಇವರುಗಳಿಗೆ ಮೈಕ್ರೋ ಅಬ್ಸರ್ವರ್ ಗಳಾಗಿ ನೇಮಕ ಮಾಡಿರುವ 797 ಮಂದಿಗೂ ಮೇ 3 ರಂದು ತರಬೇತಿ ನೀಡಲು ಕ್ರಮವಹಿಸಲಾಗಿದೆ ಎಂದರು.

ಚುನಾವಣಾ ಘೋಷಣೆಯಾದ ನಂತರ  ಮಾರ್ಚ್ 29 ರಿಂದ ಏಪ್ರಿಲ್ 17 ರವರೆಗೆ  ರೂ.47,41,453 ನಗದು, ರೂ.71,77,476 ಮೌಲ್ಯದ 28,683.14 ಲೀಟರ್ ಮದ್ಯ, ರೂ.5,550 ಮೌಲ್ಯದ 0.555 ಗ್ರಾಂ ಡ್ರಗ್ಸ್ ಸೇರಿದಂತೆ ರೂ.12,23,170 ಮೌಲ್ಯದ 22,027 ಇನ್ನಿತರರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 37,439 ಮತದಾರರು, 23,068 ವಿಶೇಷ ಚೇತನ ಮತದಾರರ ಸೇರಿದಂತೆ ಒಟ್ಟು 60,507 ಮತದಾರರಿದ್ದು, ಈ ಪೈಕಿ 56,916 ಮಂದಿಗೆ ನಮೂನೆ 12ಡಿ ವಿತರಿಸಲಾಗಿದೆ. ಅವರು ಅಂಚೆ ಮತಪತ್ರ ಮೂಲಕ ಮತದಾನ ಮಾಡಲು ಸಮ್ಮತಿ ನೀಡಲು ನಾಳೆ ಕೊನೆ ದಿನಾಂಕವಾಗಿರುತ್ತದೆ ಎಂದರು.

ಹೊಸದಾಗಿ ನಮೂನೆ 6 ರ ಮೂಲಕ ಅರ್ಜಿ ಸಲ್ಲಿಸಿದ 66,981 ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ಅಂಚೆ ಮೂಲಕ ವಿತರಿಸಲು ಕ್ರಮವಹಿಸಲಾಗಿದೆ.

ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಪ್ರಕ್ರಿಯೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಸಂಬಂಧ ಏಪ್ರಿಲ್ 18 ರಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಸ್ಟರ್ ಟ್ರೈನರ್ ಗಳ ಮುಖಾಂತರ ತರಬೇತಿ ಅಯೋಜಿಸಲಾಗಿದೆ. ಎಲ್ಲರೂ ತಪ್ಪದೇ ತರಬೇತಿಯಲ್ಲಿ ಭಾಗವಹಿಸಬೇಕು. ಅನಧಿಕೃತ ಗೈರು ಹಾಜರಿಯಾದಲ್ಲಿ ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಏಪ್ರಿಲ್ 17 ರವರೆಗೆ ಮಂಡ್ಯ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 18 ಅಭ್ಯರ್ಥಿಗಳು ಸೇರಿದಂತೆ ಒಟ್ಟು 22 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್ 24 ಕೊನೆದಿನವಾಗಿರುತ್ತದೆ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ  ಸೂಕ್ಷ್ಮ, ಕ್ಲಿಷ್ಟಕರ ಮತ್ತು ದುರ್ಬಲ ಮತಗಟ್ಟೆಗಳನ್ನು ಒಳಗೊಂಡಂತೆ ಪ್ರತಿಶತ 50ರಷ್ಟು ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಅಳವಡಿಸಲು ಕ್ರಮವಹಿಸಲಾಗಿದೆ.

ಮಳವಳ್ಳಿ-134, ಮದ್ದೂರು-127, ಮೇಲುಕೋಟೆ-129, ಮಂಡ್ಯ-127, ಶ್ರೀರಂಗಪಟ್ಟಣ-125, ನಾಗಮಂಗಲ- 129, ಕೆ.ಆರ್ ಪೇಟೆ- 129 ಸೇರಿದಂತೆ ಒಟ್ಟು 900 ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಶೇಕ್ ತನ್ವಿರ್ ಆಸಿಫ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಅಬಕಾರಿ ಉಪ ಅಧಿಕ್ಷಕರಾದ ಕಿರಣ್ ಡಿ.ಜಿ, ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಹೆಚ್ ನಿರ್ಮಲ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments