Thursday, April 25, 2024
spot_img
HomeChikballapurShidlaghattaಮಿಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಜನರ ಕುಂದು ಕೊರತೆಗಳು ಆಲಿಸಿದ...

ಮಿಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಜನರ ಕುಂದು ಕೊರತೆಗಳು ಆಲಿಸಿದ ಕಾಂಗ್ರೆಸ್ ಮುಖಂಡ ಆಂಜಿನಪ್ಪ ಪುಟ್ಟು



ಪಾಲಾರ್ ಪತ್ರಿಕೆ | Palar Patrik


 ಶಿಡ್ಲಘಟ್ಟ : ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೊಬಳಿ  ಮಿಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದನಹೊಸಹಳ್ಳಿ, ರಂಗೇನಹಳ್ಳಿ, ದೊಡ್ಡಗುಟ್ಟಹಳ್ಳಿ, ಗುರ್ರಂಪಲ್ಲಿ, ಕಟ್ಟಿಕಪಲ್ಲಿ ಸೇರಿದಂತೆ ಮತಿತ್ತರರ ಹಳ್ಳಿಗಳಲ್ಲಿ ಮನೆ ಮನೆಗೆ ಆಂಜಿನಪ್ಪ ಪುಟ್ಟು ಕಾರ್ಯಕ್ರಮದಡಿಯಲ್ಲಿ   ಸಮಾಜಸೇವಕ ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡ ಆಂಜಿನಪ್ಪಪುಟ್ಟುರವರು ಮನೆ ಮನೆಗೆ ಬೇಟಿ ನೀಡಿ ಜನರ ಕಷ್ಟ ಸುಖ, ಸಮಸ್ಯೆಗಳನ್ನು ಅಲಿಸಿ, ಮುಂಬರುವ 2023 ರ ವಿಧಾನಸಭೆ ಚುನಾವಣೆಯಲ್ಲಿ ತನಗೆ ಬೆಂಬಲ ನೀಡುವಂತೆ ಮನವಿ  ಮಾಡಿದರು.
ಈ  ಸಂದರ್ಭದಲ್ಲಿ ಮಾತನಾಡಿದ ಅಂಜಿನಪ್ಪಪುಟ್ಟುರವರು  ತಾನೂ ಕಳೆದ ಒಂಬತ್ತು ವರ್ಷಗಳಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ  ಉಚಿತ ಆರೋಗ್ಯ ತಪಾಸಣಾ ಶಿಬಿರ, ಕಣ್ಣಿನ ತಪಾಸಣಾ ಶಿಬಿರ ನಡೆಸುವುದರ ಮೂಲಕ ಸಾವಿರ ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ, ಮಹಿಳೆಯರ ಸ್ವಾಲಂಭಿ ಜೀವನಕ್ಕಾಗಿ ಟೈಲರಿಂಗ್ ಮಿಷನ್ ಗಳ ವಿತರಣೆ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಬಡವರ ಅನುಕೂಲಕ್ಕಾಗಿ ಉಚಿತ ಸಾಮೂಹಿಕ ವಿವಾಗಳು, ಆರೋಗ್ಯ ಚಿಕಿತ್ಸೆಗೆ ಹಾಗೂ ಮದುವೆ ಮುಂಜಿ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯಾಸ್ತ ಹಾಗೂ ವಿಶೇಷವಾಗಿ ಕೋರೋನಾ ಕಷ್ಟ ಕಾಲದಲ್ಲಿ ಕ್ಷೇತ್ರದಲ್ಲಿನ ಎಲ್ಲಾ ಮನೆಗಳಿಗೆ ಆಹಾರ ಪದಾರ್ಥಗಳ ಸಾಮಾಗ್ರಿಗಳನ್ನು ವಿತರಣೆ ಮಾಡುವುದರ ಮೂಲಕ  ನಿರಂತರವಾಗಿ ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತಾ ಕ್ಷೇತ್ರದಲ್ಲಿದ್ದು ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರುವುದರಿಂದ  ಮುಂಬರುವ 2023 ರ ವಿಧಾನಸಭೆ ಚುನಾವಣೆಗೆ ಸ್ಪರ್ದೆ ಮಾಡುವಂತೆ ಜನರಿಂದ  ಒತ್ತಡ ಬರುತ್ತಿರುವುದರ ಜೊತೆಗೆ ಉತ್ತಮ ಬೆಂಬಲ ಕೂಡ ಸಿಗುತ್ತಿದೆ, ಎಂದ ಅವರು ಚಿಲಕಲನೇರ್ಪು ಹೊಬಳಿ ಆಡಳಿತಾತ್ಮಕವಾಗಿ ಚಿಂತಾಮಣಿ ತಾಲೂಕಿಗೆ ಸೇರಿದ್ದು,  ಮತದಾನಕ್ಕೆ ಮಾತ್ರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಸೇರುವುದರಿಂದ ಈ ಭಾಗದಲ್ಲಿ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಚಿಲಕಲನೇರ್ಪು ಹೊಬಳಿಯಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿರುವ ಬಗ್ಗೆ ಜನತೆ ತಮ್ಮ ಅಲಿಳನ್ನು ತೋಡಿಕೊಳ್ಳುತ್ತಿದ್ದು, ತಾನೂ ಹಲವಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷಕ್ಕೆ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿಯುತ್ತಾ ಬರುತ್ತಿರುವುದರಿಂದ ಕಾಂಗ್ರೇಸ್ ಪಕ್ಷದ ವರಿಷ್ಟರು ನನಗೆ ಟಿಕೇಟ್ ನೀಡುವ ಭರವಸೆ ಇದ್ದು, ಒಂದು ವೇಳೆ ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ಸಿಗದಿದ್ದರೆ, ನಮ್ಮ ಮುಖಂಡರು, ಕಾರ್ಯಕರ್ತರು ಹಾಗೂ ಜನಾಭಿಪ್ರಾಯದಂತೆ ಚುನಾವಣೆಗೆ ಸ್ಪರ್ದೆ ಮಾಡುವುದಾಗಿ ತಿಳಿಸಿದ ಅವರು ಕ್ಷೇತ್ರದ ಜನತೆ ಈ ಬಾರಿ ಚುನಾವಣೆಯಲ್ಲಿ ತನಗೆ ಮತ ನೀಡಿ ಆಶಿರ್ವಾಧಿಸಿದರೆ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ  ಗ್ರಾಮಗಳ ಮುಖಂಡರು ಎಸ್ ಎನ್ ಕ್ರಿಯಾ ಟ್ರಸ್ಟ್ ಸದಸ್ಯರು  ಆಂಜಿನಪ್ಪ ಪುಟ್ಟು ಅಭಿಮಾನಿಗಳು ಭಾಗಿಯಾಗಿದ್ದರು.

.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments