Tuesday, April 23, 2024
spot_img
HomeTumkurಡಾ|| ಬಿ.ಆರ್. ಅಂಬೇಡ್ಕರ್ ರವರು ಅನೇಕ ಕಷ್ಟಗಳನ್ನು ಎದುರಿಸಿ ವಿಶ್ವ ನಾಯಕರಾದರು -ಅರಕಲವಾಡಿ ನಾಗೇಂದ್ರ ತುಮಕೂರು

ಡಾ|| ಬಿ.ಆರ್. ಅಂಬೇಡ್ಕರ್ ರವರು ಅನೇಕ ಕಷ್ಟಗಳನ್ನು ಎದುರಿಸಿ ವಿಶ್ವ ನಾಯಕರಾದರು -ಅರಕಲವಾಡಿ ನಾಗೇಂದ್ರ ತುಮಕೂರು

ತುಮಕೂರು : ನಗರದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ರವರ 66ನೇ ಪರಿನಿವರ್ಣ ದಿನದ ಕಾರ್ಯಕ್ರಮದಲ್ಲಿ ಬಿ.ಎಸ್.ಪಿ ಜಿಲ್ಲಾ ಸಮಿತಿ ಹಾಗೂ ನಗರ ಸಮಿತಿ ಮತ್ತು ಎಲ್ಲಾ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಸೇರಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುಗಳಾದ ಬಿ.ಎಸ್.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ತುಮಕೂರು ಜಿಲ್ಲಾ ಉಸ್ತುವಾರಿಗಳಾದ ನಾಗೇಂದ್ರ ಸರ್ ರವರು ಅಂಬೇಡ್ಕರ್ ರವರ ಬಗ್ಗೆ ಮಾತನಾಡಿ ಎಲ್ಲಾ ಸಮುದಾಯಗಳ ವಿಮೋಚಕರು. ಇವರು ಈ ದೇಶದ ಪ್ರಥಮ ಕಾನೂನು ಮಂತ್ರಿಯಾಗಿ ಹಲವು ಕಾನೂನುಗಳು ಜಾರಿಗೆ ಬರಲು ಕಾರಣರಾದರು. ವಿಶೇಷವಾಗಿ ಈ ದೇಶದ ಆರಂಬದಲ್ಲಿ ಎಲ್ಲರಿಗೂ ಶಿಕ್ಷಣ, ಆಸ್ತಿ, ಓಟು ಪಡೆಯುವಂತ ಹಕ್ಕುಗಳು ಇರಲಿಲ್ಲ. ಆದರೆ ಲಂಡನ್‌ನಲ್ಲಿ ನಡೆದ 3 ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿ ಈ ದೇಶದಲ್ಲಿ ಎಲ್ಲಾ ಜಾತಿ ಜನಾಂಗದ ಪ್ರಜೆಗಳಿಗೆ ಸಾರ್ವಜನಿಕ ಸ್ಥಳಗಳಾದ ಕೆರೆ, ಕಟ್ಟೆ, ಬಾವಿ, ದೇವಾಲಯಗಳ ಪ್ರವೇಶ ಅವಕಾಶ ಕಲ್ಪಿಸಿಕೊಟ್ಟರು ಮತ್ತು ಈ ದೇಶದಲ್ಲಿ ಎಸ್.ಸಿ./ಎಸ್.ಟಿ/ಓ.ಬಿ.ಸಿ ಹಾಗೂ ಎಲ್ಲಾ ಜನಾಂಗದ ವ್ಯಕ್ತಿಗಳು ಎಂ.ಎಲ್.ಎ, ಎಂ.ಪಿ., ಪ್ರಧಾನಿ, ಮುಖ್ಯಮಂತ್ರಿ ರಾಷ್ಟçಪತಿ, ಉಪರಾಷ್ಟçಪತಿ, ಸಭಾಧ್ಯಕ್ಷರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆಗಲು ಇವರು ತಂದುಕೊಟ್ಟ ಓಟಿನ ಹಕ್ಕು, ಶಿಕ್ಷಣದ ಹಕ್ಕು ಹಾಗೂ ರಾಜಕೀಯ ಸಮಾನತೆಯೇ ತುಂಬ ಮುಖ್ಯ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ ಜೆ.ಸಿ. ಮಾತನಾಡಿ ಡಾ|| ಬಿ.ಆರ್. ಅಂಬೇಡ್ಕರ್‌ರವರು ಈ ದೇಶದ ಶಕ್ತಿ ತಾನು ಎಲ್ಲಾ ನೋವುಗಳನ್ನು ಉಂಡು ನಮಗೆ ಒಳ್ಳೆಯ ಊಟವನ್ನು ಬಡಿಸಿ ಹೋದರು. ಈ ದೇಶದಲ್ಲಿ ಕಾರ್ಮಿಕ ಕಾಯ್ದೆಗಳು, ಪಿ.ಟಿ.ಸಿ.ಎಲ್. ಕಾಯ್ದೆಗಳು, ದಲಿತರು ಹಾಗೂ ಬಹುಜನರ ಉದ್ಧಾರಕ್ಕೆ ಹಲವು ಸುಧಾರಣೆಗಳನ್ನು ಜಾರಿಗೆ ತಂದರು. ನಮ್ಮ ಸಂವಿಧಾನವನ್ನು ಬರೆಯುವುದರ ಮೂಲಕ ಸಂವಿಧಾನದ ನಿರ್ಮಾತೃ ಸಂವಿಧಾನದ ಪಿತಾಮಹ ಎಂದು ಹೆಸರು ಗಳಿಸಿದರು. “ಸಂವಿಧಾನದಲ್ಲಿ ಮೀಸಲಾತಿಯನ್ನು ಅಳವಡಿಸುವುದರ ಮೂಲಕ ಮೀಸಲಾತಿ ಎನ್ನುವುದು ಬಡತನ ನಿವಾರಣೆ ಕಾರ್ಯಕ್ರಮವಲ್ಲ ಅದು ಒಂದು ಪ್ರಾತಿನಿಧ್ಯ ಎಂದರು” ನಾನು ಬಹಳ ಕಷ್ಟಪಟ್ಟು ಹೋರಾಟದ ವಿಮೋಚನಾ ರಥವನ್ನು ಎಳೆದುತಂದು ಇಲ್ಲಿಗೆ ನಿಲ್ಲಿಸಿದ್ದೇನೆ. ಸಾಧ್ಯವಾದರೆ ಮುನ್ನೆಡೆಸಿ ಇಲ್ಲ ಅಂದರೆ ಅಲ್ಲೆ ಬಿಟ್ಟುಬಿಡಿ ಯಾವುದೇ ಕಾರಣಕ್ಕೂ ಈ ವಿಮೋಚನಾ ರಥವನ್ನು ಹಿಂದಕ್ಕೆ ಹೋಗಲು ಬಿಡಬೇಡಿ ಎಂದು ತನ್ನ ಅನುಯಾಯಿಗಳಿಗೆ ಅಂತಿಮ ಸಂದೇಶವನ್ನು ಕೊಟ್ಟರು. ಬಿ.ಎಸ್.ಪಿ. ನಗರಾಧ್ಯಕ್ಷ ದಿನೇಶ್‌ಬಾಬು ಮಾತನಾಡಿ ಡಾ|| ಬಿ.ಆರ್. ಅಂಬೇಡ್ಕರ್‌ರವರು ನಮ್ಮ ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಲವು ಬಡತನ ನಿವಾರಣಾ ಕಾರ್ಯಕ್ರಮಗಳ ಸುಧಾರಕರು ಎಂದರು. ಬಿ.ಎಸ್.ಪಿ. ಹಿರಿಯ ನಾಯಕರಾದ ಕೆ.ಸಿ. ಹನುಮಂತರಾಯ ಮಾತನಾಡಿ ಡಾ|| ಅಂಬೇಡ್ಕರ್ ರವರು ರಾಷ್ಟçನಾಯಕರು ಎಂದರು. ಈ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿಗಳು ತುಮಕೂರು ಉಸ್ತುವಾರಿಗಳು ಶೂಲಯ್ಯರವರು, ಜಿಲ್ಲಾ ಉಸ್ತುವಾರು ರುದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಹೆಚ್.ಎನ್. ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಜಿ.ಎಸ್, ಜಿಲ್ಲಾ ಕಾರ್ಯದರ್ಶಿ ನಾಗೇಂದ್ರ, ಪಾವಗಡ ತಾಲ್ಲೂಕು ಅಧ್ಯಕ್ಷರಾದ ಹನುಮಂತರಾಯ ಮಂಗಳವಾಡ, ಪಾವಗಡ ಉಸ್ತುವಾರಿ ತಿಪ್ಪೇಸ್ವಾಮಿ, ಸಿರಾ ನಗರಾಧ್ಯಕ್ಷರಾದ ಚಾಂದಪಾಷ, ವಕೀಲರಾದ ದಾಸಪ್ಪ, ಸಿರಾ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜು, ಇತರೆ ಬಿ.ಎಸ್.ಪಿ. ಕಾರ್ಯಕರ್ತರು ಇದ್ದರು. ಜೈ ಭೀಮ್..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments