Friday, April 19, 2024
spot_img
HomeMandyaಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹಮಿಲನ ಕಾರ್ಯಕ್ರಮ

ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹಮಿಲನ ಕಾರ್ಯಕ್ರಮ

ಪಾಲಾರ್ ಪತ್ರಿಕೆ | Palar Pathrike

ಮಂಡ್ಯ : ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹಮಿಲನ ಕರ‍್ಯಕ್ರಮ ತಾಲೂಕಿನ ದುದ್ದ ಹೋಬಳಿ ಚಂದಗಾಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಶಂಕರಗೌಡ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಡಿ.ವಿ. ಸುವರ್ಣ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಗುರುಗಳು ಮತ್ತು ವಿದ್ಯಾರ್ಥಿಗಳ ನಡುವೆ ಪೂಜ್ಯ ಮನೋಭಾವ, ಅವಿನಾಭಾವ ಸಂಬAಧ ಇದ್ದಾಗ ಮಾತ್ರ ವಿದ್ಯಾರ್ಥಿಗಳು ಮುಂದೆ ಬರಲು ಉತ್ತಮ ಮಾರ್ಗದರ್ಶನವಾಗುತ್ತದೆ ಎಂದರು.
ನಾವು ಕಲಿತ ಶಾಲೆಯಲ್ಲಿ ವ್ಯಾಸಂಗ ಮಾಡಿ ೨೫ ವರ್ಷಗಳಾದರೂ, ನಮ್ಮ ಸ್ನೇಹ, ಗುರುಗಳ ನಡುವಿನ ಮಧು ಬಾಂಧವ್ಯ ಇದೆ. ಇದು ನಮ್ಮ ಬದುಕಿನ ಹಾಸುಹೊಕ್ಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಸಮಾಜದ ಸತ್ಪçಜೆಯಾಗಿ ರೂಪುಗೊಳ್ಳಲು ಗುರುಗಳ ಮಾರ್ಗದರ್ಶನ ಅತಿ ಮುಖ್ಯ ಎಂದು ತಿಳಿಸಿದರು.
ಇದೇ ವೇಳೆ ವಿದ್ಯೆ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸಿ ಅಭಿನಂದಿಸಲಾಯಿತು. ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹಿರಿಯ ಶಿಕ್ಷಕರಾದ ಶ್ರೀಧರಮೂರ್ತಿ, ಪಂಕಜಾಕ್ಷಿಘಿ, ವಿಜಯಲಕ್ಷಿö್ಮಘಿ, ಅನಸೂಯ, ಬೋರಮ್ಮಘಿ, ಪ್ರೌಢಶಾಲಾ ವಿಭಾಗದ ಶಿಕ್ಷಕರಾದ ಟಿ.ಸಿ. ಮಲ್ಲೇಶ್, ಬೋರೇಗೌಡ, ಪಂಚಲಿAಗೇಗೌಡ, ಸಿ.ಆರ್. ಯೋಗಾನರಸಿಂಹ, ವಿಜಯಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾದ ಜಯಶೀಲ, ಎಸ್‌ಎಸ್‌ಎಲ್‌ಸಿ ಸ್ನೇಹ ಬಳಗದ ಸಿ.ಜೆ. ಮೋಹನ್‌ಕುಮಾರ್, ಶಿಕ್ಷಕರಾದ ಸಿ.ಜೆ. ಜವರೇಗೌಡ ಹಾಗೂ ಸ್ನೇಹ ಬಳಗದ ಸದಸ್ಯರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments