Saturday, April 27, 2024
spot_img
HomeRamnagarಸರ್ವಜ್ಞನ ಒಂದೊಂದು ವಚನ ಒಂದೊಂದು ಶಕ್ತಿ; ಹರೀಶ್ ಎಂ. ಎನ್

ಸರ್ವಜ್ಞನ ಒಂದೊಂದು ವಚನ ಒಂದೊಂದು ಶಕ್ತಿ; ಹರೀಶ್ ಎಂ. ಎನ್

ರಾಮನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಸರ್ವಜ್ಞ ಜಯಂತಿ ಜಯಂತಿಯನ್ನು ಏರ್ಪಡಿಸಲಾಗಿತ್ತು.

ಇಡೀ ಜಗತ್ತಿನ ಸೃಷ್ಟಿಕರ್ತ ಶಿವನ ವರ ಪ್ರಸಾದದಿಂದ ಜನಿಸಿದ ಸರ್ವಜ್ಞ ಮಹಾನ್ ಜ್ಞಾನಿ. ವಚನ ಸಾಹಿತ್ಯದಲ್ಲಿ ತನ್ನ ತ್ರಿಪದಿ ಸಾಲುಗಳಿಂದ ಲೋಕಕ್ಕೆ ಪ್ರಸಿದ್ದಿಯಾದವರು. ವಚನ ಸಾಹಿತ್ಯದಲ್ಲಿ ಸಿದ್ದಂತಗಳಾಗಿ ಬಾಳಿದ ಮಹಾನ್ ಜ್ಞಾನಿ ಎಂದರು.

ಅರ್ಪಿತಾ ಚಾರಿಟಬಲ್ ಟ್ರಸ್ಟ್ ಹಾಗೂ ನಂದಗೋಕುಲ ವೃದ್ಧಾಶ್ರಮ ಸಂಸ್ಥಾಪಕ ಡಾ ಎನ್.ವಿ ಲೋಕೇಶ್ ಮಾತನಾಡಿ ಸರ್ವಜ್ಞ ಎಂಬುದು ಒಂದು ಹೆಸರಲ್ಲ ಅದೊಂದು ಸರ್ವವನ್ನು ತಿಳಿದ ಕೃತಿ, ಸರ್ವವನ್ನು ತಿಳಿದವನು *ಎಂದರ್ಥ,* ಇವರು ತ್ರಿಪದಿಗಳು, ರಾಷ್ಟ್ರೀಯ, ರಾಜ್ಯ ಮಟ್ಟದಲ್ಲೂ ಜನರ ಮನೆ ಮನೆಯ ಬಾಯಿ ಮಾತಾಗಿದೆ ಎಂದರು. ಅವರ ವಚನಗಳು ಜನರ ಬಾಯಿಯಲ್ಲಿ ಲೋಕ ರೂಢಿಯಾಗಿ ಇಂದಿಗೂ ಜೀವಂತವಾಗಿದೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಬಿ.ಪಿ ರೇಣುಕಪ್ಪ, ಗೀತಾ ಗಾಯನ ನಡೆಸಿ ಸರ್ವಜ್ಞನ ವಚನ ಕುರಿತು ಅದರ ಮಹತ್ವ ತಿಳಿಸಿಕೊಟ್ಟರು.

ಕಾರ್ಯಕ್ರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳಾದ ನಾಗೇಶ್, ನಿತನ್ ಹಾಗೂ ಎಬಿಸಿಡಿ ಡಾನ್ಸ್ ಅಕಾಡೆಮಿಯ ರೇಣುಕಾ ಪ್ರಸಾದ್. ಬಿಡದಿಯ ನಿವೃತ್ತ ಶಿಕ್ಷಕ ಹಾಗೂ ವಚನ ಗಾಯಕ ರೇಣುಕಪ್ಪ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ನಾಗೇಂದ್ರ , ಶ್ರೀನಿವಾಸ್ ಇತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments