Tuesday, April 30, 2024
spot_img
HomeRamnagarಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಬೇಡಿ ; ಸಿದ್ದರಾಜು

ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಬೇಡಿ ; ಸಿದ್ದರಾಜು

ರಾಮನಗರ: ಅಲೆಮಾರಿ/ ಅರೆಅಲೆಮಾರಿ ಜನಾಂಗದವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುವುದು, ಮೂಡನಂಬಿಕೆಗಳನ್ನು ಪಾಲಿಸುವುದು ಹಾಗೂ ಮಕ್ಕಳನ್ನು ಶಾಲೆಗೆ ಸೇರಿಸದೇ ಇರುವುದು ಹೆಚ್ಚಾಗಿ ಕಂಡುಬರುತ್ತದೆ, ಅಲೆಮಾರಿ/ ಅರೆಅಲೆಮಾರಿ ಜನಾಂಗದವರು ಮುಖ್ಯವಾಹಿನಿಗೆ ಬರಬೇಕಾದರೆ ಮಕ್ಕಳಿಗೆ ಶಿಕ್ಷಣ ನೀಡಿ  ಎಂದು ರಾಮನಗರ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಧಿಕಾರಿ ಸಿದ್ದರಾಜು ಅವರು ತಿಳಿಸಿದರು.
ರಾಮನಗರ ತಾಲ್ಲೂಕು ಪಂಚಾಯತ್, ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಇಂದು ರಾಮನಗರ ತಾಲ್ಲೂಕಿನ ಬಿಳಗುಂಬ ಗ್ರಾಮ ಪಂಚಾಯಿತಿಯ ಗೊಲ್ಲರದೊಡ್ಡಿ ಗ್ರಾಮದಲ್ಲಿ ಅಲೆಮಾರಿ / ಅರೆ ಅಲೆಮಾರಿ ಜನಾಂಗದವರಿಗೆ ಮೂಡನಂಬಿಕೆ ಹಾಗೂ ಕಂದಚಾರಗಳ ಪದ್ದತಿಯನ್ನು ಕೊನೆಗಾಣಿಸಲು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಬೇಡಿ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯದವರಿಗೆ ಶಿಕ್ಷಣ ಒದಗಿಸಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಸಿಗುವ ಸೌಲಭ್ಯಗಳನ್ನು ಉಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಲಕ್ಷಿö್ಮÃಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಶ್ವೇತಾ ಅವರು ಮಾತನಾಡಿ  ನಂಬಿಕೆ ಇರಬೇಕು ಆದರೆ ನಂಬಿಕೆ ಮೂಢನಂಬಿಕೆಗಳಾಗÀಬಾರದು. ಮೂಡನಂಬಿಕೆಗಳನ್ನು ಅನುಸರಿಸುವುದರಿಂದ ಕೆಲವು ಬಾರಿ ಜೀವಕ್ಕೆ ತೊಂದರೆಯಾಗುತ್ತದೆ. ಗರ್ಭಿಣಿಯರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆ ವತಿಯಿಂದ ಮಾನಸಿಕ ತೊಂದರೆ, ಮಧುಮೇಹ, ಕ್ಷಯ ರೋಗ ಹಾಗೂ ಸರ್ಕಾರದಿಂದ ಉಚಿತವಾಗಿ ಸಿಗುವ ಚಿಕಿತ್ಸೆ,  ಕುರಿತು ಮಾಹಿತಿ ತಿಳಿಸಿಕೊಟ್ಟರು. ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಪೌಷ್ಟಿಕಾಂಶ ಹಣ್ಣು ತರಕಾರಿ. ಸೊಪ್ಪು ಸೇವಿಸುವಂತೆ ಸಲಹೆ ನೀಡಿದರು.
ಮಹಿಳೆಯರ ವಯಕ್ತಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಮಕ್ಕಳ ಉತ್ತಮ ಬೆಳವಣಿಗೆಗೆ ಪೂರಕವಾದ ಪೌಷ್ಟಿಕ ಅಂಶವುಳ್ಳ ಆಹಾರ ಸೇವಿಸಬೇಕು. ಹಾಗಾದಾಗ ಮಾತ್ರ ಮಕ್ಕಳು ಆರೋಗ್ಯರಾಗಿರುತ್ತಾರೆ. ಎಲ್ಲರೂ ಆರೋಗ್ಯವಾಗಿದ್ದರೆ ಮಾತ್ರ ಆರೋಗ್ಯ ಸಮಾಜ ನಿರ್ಮಿಸಲು ಸಾಧ್ಯ, ಬಾಲ್ಯವಿವಾಹ ಹಾಗೂ ಬಾಲ್ಯಗರ್ಭಿಣಿಯಿಂದ ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಂದರು.  
 ಕೋವಿಡ್ ಮತ್ತು ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಮಾಸ್ಕ್ ಧರಿಸುವಂತೆ, ಸಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು.  ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ರಕ್ತ ಹೀನತೆ ತಡೆಯಲು ಮಕ್ಕಳಿಗೆ ರಕ್ತದ ಅಂಶ ಹೆಚ್ಚಿಸುವ ಮಾತ್ರೆಯನ್ನು ನೀಡಲಾಗುವುದು. ೧ ರಿಂದ ೧೮ ವರ್ಷದ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುವುದು ಎಂದರು
ಅಲೆಮಾರಿ/ ಅರೆ ಅಲೆಮಾರಿ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ನಾಮ ನಿರ್ದೇಸಿತ ಸದಸ್ಯ ಬಿ.ರಂಗನಾಥಪ್ಪ ಅವರು ಮಾತನಾಡಿ ಅಲೆಮಾರಿ ಸಮುದಾಯದಲ್ಲಿ ಒಟ್ಟು ೪೮ ವರ್ಗಗಳಿದ್ದು ಕರ್ನಾಟಕದ ಅರೆಅಲೆಮಾರಿ ಜನಸಮುದಾಯದಲ್ಲಿ ಶೇಕಡಾ ೧೨ರಷ್ಟು ಮತದಾರರು ಇದ್ದಾರೆ. ಸರ್ಕಾರದಿಂದ ಹಲವಾರು ಸೌಲಭ್ಯಗಳು ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯಕ್ಕಿದೆ. ಹಲವಾರು ವಿಶೇಷ ಕಲ್ಯಾಣ ಕಾರ್ಯಕ್ರಮಗಳು, ವ್ಯಾಪಾರ-ವಹಿವಾಟುಗಳಿಗೆ ಸಾಲ, ಸ್ತಿçà ಶಕ್ತಿ ಸಂಘ ಕಾರ್ಯಕ್ರಮಗಳಿವೆ. ಸೌಲಭ್ಯ ಪಡೆಯಲು ಮೊದಲು ಮತದಾರರ ಗುರುತಿನ ಚೀಟಿ ಪಡೆದುಕೊಳ್ಳಬೇಕು ಎಂದರು.
ತಾಲ್ಲೂಕು ವಿಸ್ತರಣಾಧಿಕಾರಿ ರವಿ ಮಾತನಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ ಅರೆಅಲೆಮಾರಿ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಿದರು. ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಹ ಧನ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿವೇತನ, ಮೂಲಭೂತ ಸೌಕರ್ಯಗಳು, ವಸತಿ ಸೌಲಭ್ಯ, ನಿವೇಶನ ಹಂಚಿಕೆ, ಜಮೀನು ಖರೀದಿ, ಮೂಢನಂಬಿಕೆ ಹಾಗು ಕಂಡಚಾರಗಳ ಸರ್ಕಾರದಿಂದ ಸೌಲಭ್ಯಗಳ ಸರ್ಕಾರದಿಂದ ದೊರಕುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ವಿವರವಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಗೊಲ್ಲ ಸಮುದಾಯದ ಮುಖಂಡ ರಮೇಶ್ ಜಿ.ಕೆ, ಮುಖಂಡ ಚಿಕ್ಕೆಗೌಡ,  ಬಿಳಗುಂಬ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಜಯರಾಮ್, ಆಶಾ ಕಾರ್ಯಕರ್ತರು ಊರಿನ ಗ್ರಾಮಸ್ಥರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments