Tuesday, April 30, 2024
spot_img
HomeRamnagarತಂಬಾಕು ವಸ್ತುಗಳಿಂದ ಯುವಕರು ದೂರವಿರಿ

ತಂಬಾಕು ವಸ್ತುಗಳಿಂದ ಯುವಕರು ದೂರವಿರಿ

ರಾಮನಗರ: ತಂಬಾಕು ಸೇವನೆ ಒಂದು ಕೆಟ್ಟ ಚಟವಾಗಿದ್ದು, ತಾಂಬಕಿನ ದುಷ್ಪರಿಣಾಮಗಳ ಬಗ್ಗೆ ತಿಳಿದಿದ್ದರು  ಯುವಕರು ತಂಬಾಕಿಗೆ ವ್ಯಸನಿಗಳಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ತಾಂಬುಕು ವಸ್ತುಗಳಿಂದ ಯುವಕರು ದೂರ ಇರಬೇಕು  ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮಾಗಡಿ, ಇವರ ಸಂಯುಕ್ತ ಆಶ್ರಯದಲ್ಲಿ ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ರಾಷ್ಟಿçÃಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ಕೋಟ್ಪಾ – ೨೦೦೩ ಕಾಯ್ದೆ ಅನುಷ್ಠಾನ ಕುರಿತು ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು  ಮಾತನಾಡಿದರು.  ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳಿಗಿಂತ ಅಸಾಂಕ್ರಾಮಿಕ ರೋಗಗಳಿಂದ ಸಾವು – ನೋವು ಹೆಚ್ಚಾಗುತ್ತಿದ್ದು ಇದಕ್ಕೆ ತಂಬಾಕು ಉತ್ಪನ್ನಗಳ ಸೇವನೆ ಮುಖ್ಯ ಕಾರಣವಾಗಿದೆ.  ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಅರಿವು ಮೂಡಿಸವ ಮೂಲಕ ತಂಬಾಕು ಮುಕ್ತ ಸಮಾಜ ನಿರ್ಮಿಸ ಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಸಂಯೋಜಕ, ಡಾ. ಮಧು ಎಸ್.ಮಠ್, ಮಾತನಾಡುತ್ತಾ ಒಂದು ಸಿಗರೇಟಿನಲ್ಲಿ ಸುಮಾರು ೪೦೦೦ ಕ್ಕಿಂತ ಹೆಚ್ಚು ರಾಸಾಯನಿಕಗಳಿದ್ದು, ಅದರಲ್ಲಿ ೨೦೦ ರಾಸಾಯನಿಕಗಳು ವಿಷಕಾರಿ ಮತ್ತು ೬೦ ಕ್ಯಾನ್ಸರ್ ಖಾಯಿಲೆ ಉಂಟುಮಾಡುವ ರಾಸಾಯನಿಕವಾಗಿರುತ್ತವೆ. ತಂಬಾಕಿನಲ್ಲಿ ನಿಕೋಟಿನ್ ಎಂಬ ರಾಸಾಯನಿಕ ಅಂಶವಿದ್ದು ಇದರ ಸೇವಿಸಲು ಪ್ರಾರಂಭಿಸಿದರೆ ಚಟವಾಗಿ ಅದನ್ನು ಬಿಡಲು ಕಷ್ಟ ಸಾದ್ಯ ಎಂದರು.
 ಪ್ರತಿ ವರ್ಷ ವಿಶ್ವದಾದ್ಯಂತ ೬.೬ ಮಿಲಿಯನ್ಸ್ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಇವರಲ್ಲಿ ಶೇಕಡ ೨೨% ಕ್ಯಾನ್ಸರ್, ೯೦% ಗಂಟಲು, ೪೨% ಸ್ವಾಶಕೋಶಕ್ಕೆ ಸಂಬAಧಪಟ್ಟ ಖಾಯಿಲೆಯಿಂದ ಸಾಯುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು ೨೫೦೦ ಮತ್ತು ಪ್ರತಿ ವರ್ಷ ಸುಮಾರು ೧೦ ಲಕ್ಷ ಭಾರತಿಯರು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳಿಂದ ಸಾಯುತ್ತಿದ್ದಾರೆ. ವಯಸ್ಕರು ಭಾರತದಲ್ಲಿ ಶೇಕಡ ೨೮.೬%, ಕರ್ನಾಟಕದಲ್ಲಿ ೨೨.೮% ತಂಬಾಕು ಸೇವನೆ ಮಾಡುತ್ತಿದ್ದು ಮನೆ –ಮನೆ ಭೇಟಿ ಸಂದರ್ಭದಲ್ಲಿ ಅರಿವು ಮೂಡಿಸಿ ಯುವ ಪೀಳಿಗೆಯನ್ನ ತಂಬಾಕು ಸೇವನೆಯಿಂದ ಮುಕ್ತಗೊಳಿಸ ಬೇಕೆಂದು ಸಲಹೆ ನೀಡಿದರು.  

ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್, ಮಾತನಾಡುತ್ತಾ ಕೋಟ್ಪಾ – ೨೦೦೩ ರ ಕಾಯ್ದೆ ಅಡಿಯಲ್ಲಿ ಬರುವ ಸೆಕ್ಷನ್-೪, ಸೆಕ್ಷನ್-೫, ಸೆಕ್ಷನ್-೬ಎ, ೬ಬಿ, ಸೆಕ್ಷನ್-೭ ರ ನಿಯಮಗಳ ಬಗ್ಗೆ ತಿಳಿಸಿ ಅನುಷ್ಠಾನ ಗೊಳಿಸುವಂತೆ ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಂಗನಾಥ್ ರವರು ಮಾತನಾಡುತ್ತಾ ಆಶಾ ಕಾರ್ಯಕರ್ತೆಯರು ಮನೆ – ಮನೆ ಭೇಟಿ ನೀಡುವ ಸಂದರ್ಭದಲ್ಲಿ ತಂಬಾಕು ಉತ್ಪನ್ನಗಳ ಸೇವನೆಗಳಿಂದ ಉಂಟಾಗುವ ದುಷ್ಪರಿಣಾಮಗಳು ಜೊತೆಗೆ ಕೋವಿಡ್ ಸೋಂಕು ನಿಯಂತ್ರಿಸಲು ಸಾರ್ವಜನಿಕರು ಮುಂಜಾಗೃತ ಕ್ರಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸುವುದು ಜೊತೆಗೆ ಲಸಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.

ಕಾರ್ಯಗಾರದಲ್ಲಿ  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಸ್ವಾಮಿ, ಜಿಲ್ಲಾ ಎಸ್.ಬಿ.ಸಿ.ಸಿ ಸಂಯೋಜಕರಾದ ಸುರೇಶ್ ಬಾಬು,  ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಮಂಜುಳ, ಎಸ್.ಟಿ.ಎಸ್. ಶಿವಣ್ಣ, ಆಶಾ ಮೇಲ್ವಿಚಾರಕಿ ಶ್ರೀದೇವಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments