Sunday, April 28, 2024
spot_img
HomeBangaloreರೈತರಿಂದ 50 ಮೂಟೆ ರಾಗಿ ಖರೀದಿಮಾಡಲು ಸಚಿವರೊಂದಿಗೆ ಚರ್ಚಿಸುತ್ತೇನೆ: ನಿಸರ್ಗ ನಾರಾಯಣಸ್ವಾಮಿ

ರೈತರಿಂದ 50 ಮೂಟೆ ರಾಗಿ ಖರೀದಿಮಾಡಲು ಸಚಿವರೊಂದಿಗೆ ಚರ್ಚಿಸುತ್ತೇನೆ: ನಿಸರ್ಗ ನಾರಾಯಣಸ್ವಾಮಿ

ದೇವನಹಳ್ಳಿ: ಸರ್ಕಾರ ರಾಗಿಗೆ ಕನಿಷ್ಠಬೆಲೆಯನ್ನು ನಿಗದಿ ಮಾಡಿ ರೈತರಿಂದ 20 ಕ್ವಿಂಟಾಲ್ ರಾಗಿ ಖರೀದಿಸುವಂತೆ ಸಕಾರ ಆದೇಶಮಾಡಿದೆ. ದೇವನಹಳ್ಳಿ ತಾಲ್ಲೂಕು ಬಯಲು ಪ್ರದೇಶವಾಗಿದ್ದು ಈ ಭಾಗದ ರೈತರು ಹೆಚ್ಚಾಗಿ ರಾಗಿಬೆಳೆದಿದ್ದಾರೆ ಆದರೆ ಸರಕಾರ ಒಬ್ಬರೈತರಿಂದ ಇಂತಿಷ್ಟೇ ರಾಗಿ ಖರೀದಿಮಾಡಬೇಕೆಂದು ನಿಗದಿಮಾಡಿರುವುದನ್ನು ಪುನರ್ ಪರಿಶೀಲನೆ ಮಾಡಿ ಈ ಹಿಂದೆ ಇದ್ದ ರಾಗಿ ಖರೀದಿಯನ್ನೇ ಮುಂದುವರಿಸಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಶಾಸಕ ನಿಸರ್ಗ ನಾರಾಯಣಸ್ವಮಿ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಎರಡನೆ ಮಹಡಿಯಲ್ಲಿರುವ ರಾಗಿ ಖರೀದಿ ನೊಂದಣೆ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೆ ನದಿ ಮೂಲಗಳಿಲ್ಲದಿರುವುದರಿಂದ ಮಳೆಯಾದಾರಿತ ರಾಗಿಬೆಳೆಯನ್ನು ಅವಲಂಬಿಸಿದ್ದು ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಗ್ರಾಮಾಂತರ ಜಿಲ್ಲೆಯ ಪ್ರತಿ ರೈತರಿಂದ ಕನಿಷ್ಠ 50 ಮೂಟೆ ರಾಗಿಯನ್ನು ಖರೀದಿ ಮಾಡಿಕೊಳ್ಳುವಂತೆ ಸಚಿವರಲ್ಲಿ ಮನವಿಮಾಡುತ್ತೇನೆ. ನಾನು ಈಗಾಗಲೇ ಸಚಿವರ ಅಪ್ತಸಹಾಯಕರೊಂದಿಗೆ ಮಾತನಾಡಿದ್ದೇನೆ. ಸಂಬAದಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಒಂದುವೇಳೆ ರೈತರಿಂದ ರಾಗಿ ಖರೀದಿಸದಿದ್ದರೆ ಮುಂದಿನ ಅದಿವೇಶನದಲ್ಲಿ ಗಮನಸೆಳೆಯುವ ಕೆಲಸ ಮಾಡುತ್ತೇನೆ. ಮೂರು ದಿನಗಳಿಂದ 902 ರೈತರು ನೊಂದಣೆ ಮಾಡಿಸಿದ್ದಾರೆ. ಸಕಾಲಕ್ಕೆ ರೈತರ ಖಾತೆಗಳಿಗೆ ಹಣವರ್ಗಾವಣೆಯಾಗಲಿದೆ ಇಲ್ಲವಾದರೆ ರೈತರ ಪರ ಸರಕಾರದ ಮೇಲೆ ಒತ್ತಡೆ ಹೇರಲು ನಾನು ಸಿದ್ದನಿದ್ದೇನೆ. ಸರಕಾರ ಪ್ರಸ್ತುತ ಸಣ್ಣ ರೈತರಿಂದ ರಾಗಿಖರೀದಿಸಲು ಅವಕಾಶ ನೀಡಿದೆ. ಎರಡನೆ ಆದ್ಯತೆ ದೊಡ್ಡರೈತರಿಗೆ ಅವಕಾಶ ಮಾಡಿಕೊಡುವುದಾಗಿ ಸರಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದರು.

ಇದೆ ವೇಳೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ಪಕ್ಷದ ಅನೇಕ ಮುಖಂಡರು ರೈತರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments