Saturday, April 27, 2024
spot_img
HomeBangaloreಕಲಾವಿದರಿಗೆ ಹತ್ತು ಸಾವಿರ ಮಾಸಾಶನ ನೀಡಿ-ಬಿ.ಕೆ.ಎಸ್ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶಿವಪ್ಪ ಒತ್ತಾಯ

ಕಲಾವಿದರಿಗೆ ಹತ್ತು ಸಾವಿರ ಮಾಸಾಶನ ನೀಡಿ-ಬಿ.ಕೆ.ಎಸ್ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶಿವಪ್ಪ ಒತ್ತಾಯ

ದೇವನಹಳ್ಳಿ: ಕೊರೊನಾ ಅನೇಕ ಜನರ ಜೀವನವನ್ನು ಬಲಿ ತೆಗೆದುಕೊಂಡಿದೆ. ಕೊರೋನಾ ಆವರಿಸಿದಾಗಿನಿಂದ ಎಷ್ಟೋ ಕಲಾ ವಿದರ ಬದುಕು ಕರಾಳಮಯವಾಗಿದೆ. ಹಾಗೆ ಕರ್ನಾಟಕದಲ್ಲಿರುವ ಅನೇಕ ಕಲಾವಿದರ ಬದುಕು ಕೂಡಾ ಕರಾಳಮಯವಾಗಿದ್ದು ಕಲಾವಿದರೆ ಸರಕಾರ 10 ಸಾವಿರ ಮಾಸಾಶನ ನೀಡಬೇಕೆಂದು ಬಿ.ಕೆ.ಎಸ್ ಪ್ರತಿಷ್ಠಾನ ಅಧ್ಯಕ್ಷ  ಬಿ.ಕೆ.ಶಿವಪ್ಪ ಒತ್ತಾಯಿಸಿದ್ದಾರೆ.

ದೇವನಹಳ್ಳಿ ಪಟ್ಟಣದ ಪರ್ವತಪುರ ರಸ್ತೆಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಕಛೇರಿಯಲ್ಲಿ  ಏರ್ಪಡಿಸಿದ್ದ 83 ನೇ ಕನ್ನಡ ದೀಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊರೋನಾ ಕೇವಲ ಜೀವವನ್ನು ಬಲಿ ತೆಗೆದುಕೊಂಡಿಲ್ಲ. ಅದು ಬದುಕಿ ಉಳಿದವರ ಜೀವನವನ್ನು ಬಲಿ ತೆಗೆದುಕೊಂಡಿದೆ. ನಾಡಿನ ತುಂಬಾ ಅನೇಕ ಕಲಾವಿದರಿದ್ದಾರೆ. ಅದರಲ್ಲಿ ಜಾನಪದ ಕಲಾವಿದರು, ಸಂಗೀತ ಕಲಾವಿದರು, ರಂಗಭೂಮಿ ಕಲಾ ವಿದರು ಹೀಗೆ ಲಲಿತ ಕಲೆಗೆ ಸೇರಿದಂತ ಅನೇಕ ಕಲಾವಿದರು ಇಂದು ಕೊರೊನಾ ಹಾವಳಿಯಿಂದಾಗಿ ತಮ್ಮ ಬದುಕನ್ನು ದಿವಾಳಿ ಮಾಡಿಕೊಂಡಿದ್ದಾರೆ ಅವರಿಗೆ ಸರಿಯಾದ ಕೆಲಸವಿಲ್ಲ, ಕಾಯಕವಿಲ್ಲ ಹಾಡುವ ಕಾರ್ಯಕ್ರಮವಿಲ್ಲ, ಕೇಳುವುದಕ್ಕೆ ಜನಗಳಿಲ್ಲ, ಸಾಮಾಜಿಕ ಅಂತರ ಮತ್ತು ಜನ ಒಂದೆಡೆ ಗುಂಪುಗುಡಿ ಸೇರಬಾರದೆಂದು ನಿರ್ಬಂಧಗಳಿವೆ.ಈ ಎಲ್ಲಾ ಕಾರಣಕ್ಕಾಗಿ ಕಲಾವಿದರು ಮೂಲೆ ಗುಂಪಾಗಿದ್ದಾರೆ. ಅವರು ದಿನನಿತ್ಯ ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ.ದೇಶದ ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಿ ಸಾರುವವರು ಕಲಾವಿದರು.ಕೋವಿಡ್ ಕಾರಣದಿಂದಾಗಿ ಇಂತಹ ಕಲಾವಿದರ ಬದುಕು ಇಂದು ತುಂಬಾ ಶೋಚನೀಯವಾಗಿದೆ.ಸರ್ಕಾರ ಕಲಾವಿದರಿಗೆ ಪ್ರತೀ ತಿಂಗಳು ನೀಡುವ ಮಾಸಾಶನವನ್ನು ಹತ್ತು ಸಾವಿರ ರೂಪಾಯಿಗಳಿಗೆ ಏರಿಸಬೇಕು ಮತ್ತು ಮಾಸಾಶನ ಪಡೆಯಲು ಈಗಿರುವ 60 ವರ್ಷ ವಯಸ್ಸಿನ ಮಿತಿಯನ್ನು 40 ವರ್ಷಗಳಿಗೆ ಕಡಿತಗೊಳಿಸಬೇಕೆಂದು  ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಹಡಪದ ಮಾತನಾಡಿ ಶ್ರೀಮಂತ ಕಲಾವಿದರು ಆನ್‌ಲೈನ್ ಮೂಲಕ ಸಂಗೀತ ಕಾರ್ಯಕ್ರಮ ನೀಡುತ್ತಾರೆ. ಆದರೆ, ಬಡಕಲಾವಿದರು ಬೀದಿಗೆ ಬಂದು ಹಾಡುವಂತಿಲ್ಲ. ರಂಗಭೂಮಿಯ ಮೇಲೆ ನಿಂತು ಅಭಿನಯಿಸುವಂತಿಲ್ಲ. ಇಂದು ಚಿತ್ರರಂಗದ ಅನೇಕ ಕಲಾವಿದರು ಕೂಡಾ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ, ಉತ್ತರ ಕರ್ನಾಟಕದ ರಂಗಭೂಮಿಯ ಕಲಾವಿದರು ಇಂದು ಸರ್ಕಾರದ ಸಹಾಯಕ್ಕಾಗಿ ಹಂಬಲಿಸುತ್ತಿದ್ದಾರೆ.ಅವರಿಗೆ ಊಟ ಮತ್ತು ಉಪಚಾರಕ್ಕಿಂತ ಅವರ ಮನೆಗೆ ಕಟ್ಟಬೇಕಾದಂತಹ ಕರೆಂಟ್ ಬಿಲ್‌ಗಳು ಶಾಲಾ ಮಕ್ಕಳಿಗೆ ಕಟ್ಟಬೇಕಾದ ಫೀಸ್‌ಗಳು ಅನಾರೋಗ್ಯದಿಂದಾಗಿ ಕಟ್ಟಬೇಕಾದ ಬಿಲ್ಲುಗಳು ಅವರನ್ನು ಹೈರಾಣಗೊಳಿಸಿವೆ. ಆರ್ಥಿಕವಾಗಿ ಕಲಾವಿದರ ಬದುಕು ಇಂದು ದುಸ್ತರವಾಗಿದೆ.ಸರ್ಕಾರ ಇವರ ನೆರವಿಗೆ ಬರಬೇಕಾಗಿದೆ. ಆದರೂ ಕೇವಲ ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಕಲಾವಿದರ ಬಗ್ಗೆ ನೆರವು ನೀಡುವುದಾಗಿ ಘೋಷಣೆ ಮಾಡುತ್ತಾರೆ. ಆದರೆ ಹೊರಗಡೆ ಬಂದು ನೋಡಿದಾಗ ನಿಜ ಸ್ಥಿತಿ ಬೇರೆಯಿದೆ. ಇಲ್ಲಿ ಕಲಾವಿದರು ನಿತ್ಯ ಶೋಷಣೆಗೆ ಒಳಗಾಗುತ್ತಿದ್ದಾರೆ. ರಂಗಭೂಮಿ ಕಲಾವಿದರು ನಾಟಕ ಥಿಯೇಟರ್‌ಗಳಿಗೆ ಹೋಗುವಂತಿಲ್ಲ. ಅಲ್ಲಿ ರಂಗ ಪ್ರದರ್ಶನ ಮಾಡು ವಂತಿಲ್ಲ. ಏಕೆಂದರೆ, ರಂಗಭೂಮಿಯ ನಟರು ಇಂದು ಮನೆಬಾಡಿಗೆ ಕಟ್ಟದೆ ಪರದಾಡುತ್ತಿದ್ದಾರೆ ಎಂದರು.

ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಮೋಹನ್ ಬಾಬು ಮಾತನಾಡಿ ನಾಡಿನ ಅನೇಕ ಕಲಾವಿದರು ಇಂದು ಸಂಗಟಿತರಾಗಿದ್ದಾರೆ ನಾಟಕ ಅಕಾಡೇಮಿಗಳಿವೆ ಸಂಗಿತ ಅಕಾಡೆಮಿಗಳಿವೆ, ಸರ್ಕಾರ ಇವರಿಗೋಸ್ಕರ ಏನಾದರು ತುರ್ತು ಸೌಲಭ್ಯಗಳನ್ನು ಒದಗಿಸಬೇಕಾಗಿದೆ, ಹಣಕಾಸಿನ ನೆರವಿಲ್ಲದೆ ಕಲಾವಿದರು ಬಡವರಾಗುತ್ತಿದ್ದಾರೆ.ಕೋರೊನಾ ನಿಯಂತ್ರಣಕ್ಕೆ ಬಾರದ್ದಿಲ್ಲ. ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಕಲಾವಿದರ ಬದುಕು ಮೂರಾಬಟ್ಟೆ ಯಾಗಿದೆ. ಅವರ ಹೊಟ್ಟೆಗೆ ಬಟ್ಟೆಗೆ ಏನು ಇಲ್ಲದಂತಾಗಿದೆ. ಕೂಡಲೇ, ಸರ್ಕಾರ ಇವರತ್ತ ಗಮನಹರಿಸಿ ಅವರ ಬದುಕನ್ನು ಹಸನ ಗೊಳಿಸುವ ತುರ್ತು ಅಗತ್ಯತೆ ಇದೆ ಎಂದರು.

ಇದೇ ಸಂಧರ್ಭದಲ್ಲಿ ಹಿರಿಯ ಕಲಾವಿದರಾದ ಬೈಚಾಪುರ ನಾರಾಯಣಸ್ವಾಮಿ ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಸಾಂಸ್ಕöÈತಿಕ ಕಲಾ ತಂಡದ ಮುಖ್ಯಸ್ಥರಾದ ಸನ್ಮಾನ್ಯ ಶ್ರೀ ಎಂ.ವಿ.ನಾಯ್ಡು ಮತ್ತು ತಂಡದವರಾದ ಮಹಾತ್ಮಾಂಜನೇಯ, ನಾಗರಾಜು, ನರಸಿಂಹಪ್ಪ ರಂಗಗೀತೆಗಳ ಗಾಯನ ನಡೆಸಿಕೊಟ್ಟರು.

ಇದೆ ವೇಳೆ ಕರವೇ ರಾಜ್ಯ ಗೌರವಾಧ್ಯಕ್ಷ ಚಂದ್ರಶೇಖರ್, ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ ಕಾರ್ಯದರ್ಶಿ ಸುಬ್ರಮಣಿ, ಗೋವಿಂದರಾಜು, ಮುಖಂಡರಾದ ವೆಂಕಟರಾಜು, ನಾಗರಾಜು, ರಾಮಣ್ಣ, ಬೈರೇಗೌಡ, ಶಿವಕುಮಾರ್, ಕೃಷ್ಣಪ್ಪ, ಕಿಶೋರ್, ಮೂರ್ತಿ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments