Saturday, April 27, 2024
spot_img
HomeBangaloreಸರಕಾರದ ನೂತನ ಮಾರ್ಗಸೂಚಿ ಪಾಲನೆ ಕಡ್ಡಾಯ: ಕೆ.ಶ್ರೀನಿವಾಸ್ಮೂರನೆ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ

ಸರಕಾರದ ನೂತನ ಮಾರ್ಗಸೂಚಿ ಪಾಲನೆ ಕಡ್ಡಾಯ: ಕೆ.ಶ್ರೀನಿವಾಸ್ಮೂರನೆ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ

ದೇವನಹಳ್ಳಿ: ಸರಕಾರ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಅದರ ಪ್ರಕಾರ ವಿಕೆಂಡ್ ಕರ್ಪೂ್ಯ ಮತ್ತು ನೈಟ್ ಕರ್ಪೂ್ಯ ಜಾರಿಯಲ್ಲಿರುತ್ತದೆ ಈ ಸಂಬAಧÀ ಎಸ್ಪಿಯವರ ಜೊತೆ ಮಾತುಕತೆ ಮಾಡಲಾಗಿದ್ದು ಹೆಚ್ಚು ತಂಡಗಳನ್ನು ರಚನೆ ಮಾಡಿ ರಾತ್ರಿವೇಳೆ ವಾಹನಗಳು ಹಾಗು ಸಾರ್ವಜನಿಕರ ಓಡಾಟವನ್ನು ನಿರ್ಬಂಧÀ ಮಾಡುವಂತೆ ಸೂಚಿಸಿದ್ದು 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಗ್ರಾಮಾಂತರ ಜಿಲ್ಲೆಯಲ್ಲಿ ಎರಡು ದೇವಾಲಯಗಳಿದ್ದು ಗಾಟಿ ಸುಬ್ರಮಣ್ಯ ಹಾಗು ಶಿವಗಂಗೆ ದೇವಾಲಯಗಳಲ್ಲಿ ಇದೆ ತಿಂಗಳು ಎರಡು ದೇವಾಲಯಗಳಲ್ಲಿ ಪ್ರಮುಖ ಜಾತ್ರೆಗಳು ನಡೆಯಬೇಕಿತ್ತು ಅದನ್ನು ನಿರ್ಬಂದ ಮಾಡಲಾಗಿದೆ. ದೇವಾಲಯಗಳಲ್ಲಿ ದರ್ಶನಕ್ಕೆ ಒಂದು ಬಾರಿಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು. ಸಾಂಪ್ರದಾಯಿಕ ಜಾತ್ರೆಗೆ ಮಾತ್ರ ಅವಕಾಶ ನೀಡಲಾಗಿದ್ದು ಸಾರ್ವಜನಿಕರ ಪ್ರವೇಶ ನಿರ್ಬಂದ ಮಾಡಲಾಗಿದೆ.

ಕೆಂಪೇಗೌಡ ಅಂತರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಹೆಚ್ಚುಪ್ರಕರಣಗಳು ಪತ್ತೆಯಾಗಿತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿ ಸರಕಾರ ಗೋವಾ, ಮಹಾರಾಷ್ಟç ಮತ್ತು ಕೇರಳ ಪ್ರಯಾಣಿಕರನ್ನು ಹೆಚ್ಚಿನ ರೀತಿಯಲ್ಲಿ ತಪಾಸಣೆಗೊಳಪಡಿಸಿ ಪಾಸಿಟಿವ್ ಬಂದAತಹವರನ್ನು ಆಸ್ಪತ್ರೆಗೆ ದಾಖಲಿಸಿ 8 ದಿನ ಕ್ವಾರಂಟೈನ್ ಮಾಡಲಾಗುತ್ತಿದೆ.

15 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನ್ ಪ್ರಾರಂಭವಾಗಿದ್ದು ಜಿಲ್ಲೆಯಲ್ಲಿ ಎರಡು ದಿನದಲ್ಲಿ 9862 ಮಕ್ಕಳಿಗೆ ವ್ಯಾಕ್ಸಿನ್ ಮಾಡಲಾಗಿದೆ. 5 ದಿನಗಳಲ್ಲಿ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಕೊನೆ ಎರಡು ದಿನ ಶಾಲೆಬಿಟ್ಟಂತಹ ಮಕ್ಕಳನ್ನು ಗುರುತಿಸಿ ವಿಶೇಷ ಅಭಿಯಾನ ಮಾಡಿ ಲಸಿಕೆ ನೀಡಲಿದ್ದೇವೆ. ಪ್ರಸ್ತುತ ಶಾಲೆಯಲ್ಲಿ ವ್ಯಾಸಂಗಮಾಡುತ್ತಿರುವ ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗುತ್ತಿದ್ದು. ಶಾಲೆಯಿಂದ ಹೊರಗುಳಿದವರ ಮಾಹಿತಿ ಶಿಕ್ಷಣ ಇಲಾಖೆಯವರು ನೀಡಲಿದ್ದಾರೆ. ಹಾಗು ಶಾಲೆಗೆ ಹೋಗದವರನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ನೀಡಲಿದ್ದು ಅವರನ್ನು ಗುರುತಿಸಿ ಲಸಿಕೆ ನೀಡಲಾಗುವುದು.

18 ವರ್ಷ ಮೇಲ್ಪಟ್ಟವರಿಗೆ ಜಿಲ್ಲೆಯಲ್ಲಿ ಮೊದಲನೇ ಡೋಸ್ ಶೇ.96 ಎರಡನೇ ಡೊಸ್ ಶೇ.84.4 ಪ್ರಗತಿ ಸಾದಿಸಿದ್ದು ಉಳಿದವರನ್ನು ಗುರುತಿಸಿ ಅವರಿಗೂ ಸಹ ಶೀಘ್ರವಾಗಿ ಲಸಿಕೆ ನೀಡಿ ಶೇ.100ರ ಗುರಿ ತಲುಪಲಿದ್ದೇವೆ.

ಮೂರನೆ ಅಲೆ ಎದುರಿಸಲು ಸಕಲ ಸಿದ್ದತೆ: ಗ್ರಾಮಾಂತರ ಜಿಲ್ಲೆಯಲ್ಲಿ ಖಾಸಗಿ ಹಾಗು ಸರಕಾರಿ ಆಸ್ಪತ್ರೆಗಳು ಸೇರಿ 2300 ಬೆಡ್‌ಗಳನ್ನು ಗುರುತಿಸಿದ್ದೇವೆ. 40 ಐಸಿಯು ಬೆಡ್, 25 ಮಕ್ಕಳ ಬೆಡ್, ಮಕ್ಕಳಿಗಾಗಿ ಆಕಾಶ್ ಅಸ್ಪತ್ರೆ ಹಾಗು ಎಂ.ವಿ.ಜೆ ಮೆಡಿಕಲ್ ಕಾಲೇಜುಗಳಲ್ಲಿ ಮೀಸಲಿಟ್ಟಿದ್ದೇವೆ. 640 ಆಕ್ಸಿಜನ್ ಕಾನ್ಸಂಟ್ರೇಟರ್ ರೆಡಿಯಿದ್ದು ಅದರ ಅವಶ್ಯತೆ ಬಂದಾಗ ಬಳಕೆಮಾಡಲಾಗುವುದು. ಕೊರೊನ ಮೂರನೆ ಅಲೆ ಎದುರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು

ಇದೆ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ಹಾಗು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments