Wednesday, May 1, 2024
spot_img
HomeBangaloreಬೂಸ್ಟರ್ ಲಸಿಕೆ ಹಾಕುವ ಕಾರ್ಯಕ್ಕೆ ಸಚಿವ ಡಾ.ನಾರಾಯಣಗೌಡ ಚಾಲನೆ

ಬೂಸ್ಟರ್ ಲಸಿಕೆ ಹಾಕುವ ಕಾರ್ಯಕ್ಕೆ ಸಚಿವ ಡಾ.ನಾರಾಯಣಗೌಡ ಚಾಲನೆ

ಮಂಡ್ಯ: ಕೋವಿಡ್ ಮಹಾಮಾರಿಯ ತಡೆಗಾಗಿ ಕೇಂದ್ರ ಸರ್ಕಾರವು ವಿಜ್ಞಾನಿಗಳ ನೆರವಿನಿಂದ ಸಂಶೋಧನೆ ಮಾಡಿಸಿ ಹೊರತಂದಿರುವ ಮೂರನೇ ಡೋಸ್ ನ ಲಸಿಕೆಯಾದ ಬೂಸ್ಟರ್ ಲಸಿಕೆ ಹಾಕುವ ಕಾರ್ಯಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಚಾಲನೆ ನೀಡಿದರು.
ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸುಷ್ರೂಶಕರು, ಪೌರಕಾರ್ಮಿಕರು ಹಾಗೂ ಆರೋಗ್ಯ ಸಿಬ್ಬಂಧಿಗಳಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಮಹತ್ವದ ಕಾರ್ಯಕ್ರಮವನ್ನು ತಾಲ್ಲೂಕಿನ ಹಿರಿಯ ಸಷ್ರೂಶಕರಾದ ಸೀತಮ್ಮ, ಐಸಿಟಿಸಿ ಕೌನ್ಸಿಲರ್ ಸತೀಶ್, ಪೌರಕಾರ್ಮಿಕ ಮುತ್ತಯ್ಯ, ಸುಷ್ರೂಶಕಿ ಲೀಲಮ್ಮ ಮತ್ತು ಫಾರ್ಮಸಿ ಅಧಿಕಾರಿ ಸತೀಶ್ ಬಾಬೂ ಅವರಿಗೆ ಕೊಡಿಸುವ ಮೂಲಕ ಚಾಲನೆ ನೀಡಿದ ಸಚಿವ ಡಾ.ನಾರಾಯಣಗೌಡ ಒಂದು ಮತ್ತು ಎರಡನೇ ಡೋಸ್ ಲಸಿಕೆಯನ್ನು ಪಡೆದಿರುವವರಿಗೆ ಹಂತಹಂತವಾಗಿ ಬೂಸ್ಟರ್ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಪ್ರಸ್ತುತ ಫ್ರಂಟ್ ಲೈನ್ ವಾರಿಯರ್ ಗಳಿಗೆ ಮೂರನೇ ಡೋಸ್ ಲಸಿಕೆಯಾಗಿ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲಾಗುತ್ತಿದೆ. ದಯಮಾಡಿ ಸಾರ್ವಜನಿಕ ಬಂಧುಗಳು ಕಡ್ಡಾಯವಾಗಿ ಒಂದು ಮತ್ತು ಎರಡನೇ ಡೋಸ್ ಲಸಿಕೆಯನ್ನು ಹಾರಿಸಿಕೊಂಡು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೋವಿಡ್ ಮಹಾಮಾರಿಯಿಂದ ಮುಕ್ತವಾದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ರಾಜ್ಯ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಸವಿವರು ಕೈಮುಗಿದು ಮನವಿ ಮಾಡಿದರು.
ಬೂಸ್ಟರ್ ಡೋಸ್ ಆದ 3ನೇ ಲಸಿಕೆಯನ್ನು ಹಾಕುವ ಸಮಾರಂಭದಲ್ಲಿ ಸಚಿವರ ಧರ್ಮಪತ್ನಿ ಶ್ರೀಮತಿ. ದೇವಕಿನಾರಾಯಣಗೌಡ, ತಹಶೀಲ್ದಾರ್ ಎಂ.ವಿ.ರೂಪ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಪುರಸಭೆಯ ಅಧ್ಯಕ್ಷೆ ಮಹಾದೇವಿನಂಜುಂಡ, ಸದಸ್ಯರಾದ ಗಿರೀಶ್, ಶಾಮಿಯಾನ ತಿಮ್ಮೇಗೌಡ, ಹೆಚ್.ಆರ್.ಲೋಕೇಶ್, ಮುಖ್ಯಾಧಿಕಾರಿ ಕುಮಾರ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಬಿಸಿಎಂ ಅಧಿಕಾರಿ ವೆಂಕಟೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಹೇಶ್, ಪೆÇೀಲಿಸ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್, ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ಕಿಕ್ಕೇರಿ ಕುಮಾರ್, ಸಾರಂಗಿ ಮಂಜುನಾಥಗೌಡ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments