Saturday, May 4, 2024
spot_img
HomeRamnagarಪೌಷ್ಟಿಕ ಆಹಾರ ಸೇವಿಸಿ ಉತ್ತಮ ಆರೋಗ್ಯ ಪಡೆಯಿರಿ

ಪೌಷ್ಟಿಕ ಆಹಾರ ಸೇವಿಸಿ ಉತ್ತಮ ಆರೋಗ್ಯ ಪಡೆಯಿರಿ

ರಾಮನಗರ: ದಿನನಿತ್ಯದ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿರಬೇಕಾದರೆ ಉತ್ತಮ ಪೌಷ್ಠಿಕ ಅಂಶವುಳ್ಳ ಆಹಾರವನ್ನು ಸೇವಿಸಬೇಕು ಎಂದು ಮಹಿಳಾ ರ‍್ಕಾರಿ ಪ್ರಥಮ ರ‍್ಜೆ ಕಾಲೇಜು ಪ್ರಾಂಶುಪಾಲರು ಸಾವಿತ್ರಮ್ಮ ಅವರು ತಿಳಿಸಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಮನಗರ, ಜಿಲ್ಲಾ ಕ್ಷಯರೋಗ ರ‍್ಮೂಲನಾಧಿಕಾರಿಗಳ ಕಛೇರಿ ರಾಮನಗರ ಇವರ ಸಂಯಕ್ತ ಆಶ್ರಯದಲ್ಲಿ ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟಿçÃಯ ಯುವ ಸಪ್ತಾಹ ಆಚರಣೆ ಪ್ರಯುಕ್ತ ವಿದ್ರ‍್ಥಿಗಳಿಗೆ ಪೌಷ್ಟಿಕ ಆಹಾರದ ಮಹತ್ವ ಮತ್ತು ಕ್ಷಯ ರೋಗ ನಿಯಂತ್ರಣ ಕುರಿತ ಅರಿವು ರ‍್ಯಕ್ರಮವನ್ನು ಆಯೋಜಿಸಲಾಗಿತ್ತು.

ರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ದಿನ ಆರೋಗ್ಯ ಇಲಾಖೆಯ ವತಿಯಿಂದ ಪೌಷ್ಟಿಕ ಆಹಾರ ಮತ್ತು ಕ್ಷಯ ರೋಗ ನಿಯಂತ್ರಣ ಕುರಿತು ಅರಿವು ಮೂಡಿಸುವ ರ‍್ಯಕ್ರಮ ನಡೆಸಿದ್ದು ವಿದ್ರ‍್ಥಿಗಳು ಮಾಹಿತಿಯನ್ನು ತಿಳಿದುಕೊಂಡು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ ಎಸ್ ಗಂಗಾಧರ್ ಜಿ ಮಾತನಾಡಿ ಪೌಷ್ಟಿಕ ಆಹಾರದ ಸೇವನೆಯಿಂದ ದೇಹದ ಬೆಳವಣಿಗೆ, ರೋಗನಿರೋಧಕ ಶಕ್ತಿ ವೃದ್ದಿ, ದೇಹದ ಸಮತೋಲನ ಕಾಪಾಡಿಕೊಳ್ಳಬಹುದು. ಜೊತೆಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪೌಷ್ಟಿಕ ಆಹಾರ ಸೇವನೆ ಅವಶ್ಯಕವಾಗಿರುತ್ತದೆ. ಆದ್ದರಿಂದ ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ , ವಿಟಮಿನ್ , ಖನಿಜಾಂಶಗಳು, ರ‍್ಬೊಹೈಡ್ರೇಡ್ಸ್, ಅಂಶಗಳು ಇರಬೇಕು. ಜೊತೆಗೆ ಸ್ಥಳೀಯವಾಗಿ ಸಿಗುವಂತಹ ಸೊಪ್ಪು, ತರಕಾರಿ, ಹಣ್ಣುಗಳು, ಹಾಲಿನ ಉತ್ಪನ್ನಗಳು, ಮೊಟ್ಟೆ, ಮಾಂಸ , ಸಿರಿಧಾನ್ಯಯುಕ್ತ ಆಹಾರವನ್ನು ಸೇವನೆ ಮಾಡಬೇಕು ಇದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಸಲಹೆ ನೀಡಿದರು

ಜಿಲ್ಲಾ ಕ್ಷಯರೋಗ ಸಂಯೋಜಕರು ವಿಶ್ವನಾಥ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕಿಗಿAತಲೂ ಹೆಚ್ಚಾಗಿ ಕ್ಷಯರೋಗದ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಪ್ರತೀ 03 ನಿಮಿಷಕ್ಕೊಮ್ಮೆ 02 ಕ್ಷಯ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಈ ಉದ್ದೇಶದಿಂದ ರ‍್ಕಾರ “ಟಿಬಿ ಸೋಲಿಸಿ ದೇಶ ಗೆಲ್ಲಿಸಿ” ಎಂಬ ಘೋಷವಾಕ್ಯದೊಂದಿಗೆ ಅಭಿಯಾನವನ್ನು ಪ್ರಾರಂಭಿಸಿ ಎಲ್ಲಾ ಹಂತಗಳಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ವ್ಯಕ್ತಿ ಎರಡು ವಾರಕ್ಕೂ ಹೆಚ್ಚು ಕೆಮ್ಮು. ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಸಂಜೆ ವೇಳೆ ಜ್ವರ, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು ಇತ್ಯಾದಿ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರನ್ನು ಸರ‍್ಕಿಸಬೇಕು ಎಲ್ಲಾ ರ‍್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಇದರ ಬಗ್ಗೆ ಜಾಗರೂಕರಾಗಿ ಕ್ಷಯ ಮುಕ್ತ ಸಮಾಜ ರ‍್ಮಿಸಲು ವಿದ್ರ‍್ಥಿಗಳು ಸಹಕರಿಸುವಂತೆ ಸಲಹೆ ನೀಡಿದರು.

ಈ ರ‍್ಯಕ್ರಮದಲ್ಲಿ ಉಪನ್ಯಾಸಕರಾದ ಡಾ|| ಹೇಮಾ ನಾಯಕ್, ಸಿ ಪಿ ಕೃಷ್ಣ, ಬೀರಯ್ಯ ,ಹಾಗೂ ವಿದ್ರ‍್ಥಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments