Friday, May 3, 2024
spot_img
HomeBangaloreಪೌರ ಕಾರ್ಮಿಕರ ಜೊತೆಯಲ್ಲಿ ಸಂಕ್ರಾಂತಿ ಸಂಭ್ರಮ ಸಾರ್ವಜನಿಕರಿಗೆ ಕಬ್ಬು, ಎಳ್ಳು ಬೆಲ್ಲ ವಿತರಣೆ

ಪೌರ ಕಾರ್ಮಿಕರ ಜೊತೆಯಲ್ಲಿ ಸಂಕ್ರಾಂತಿ ಸಂಭ್ರಮ ಸಾರ್ವಜನಿಕರಿಗೆ ಕಬ್ಬು, ಎಳ್ಳು ಬೆಲ್ಲ ವಿತರಣೆ

ಜಯನಗರ: ವಿನಾಯಕ ದೇವಸ್ಥಾನದ ಅವರಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಕ್ರಾಂತಿ ಉತ್ಸವ ಗೋವುಗಳ ಅಲಂಕಾರ ಪೂಜೆ ,ಪೊಂಗಲ್ ಸಂಭ್ರಮ ಮತ್ತು ಸಾರ್ವಜನಿಕರಿಗೆ ಕಬ್ಬು, ಎಳ್ಳು, ಬೆಲ್ಲ ವಿತರಣಾ ಕಾರ್ಯಕ್ರಮ. ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಎನ್.ನಾಗರಾಜ್ ರವರು ಗೋವುಗಳಿಗೆ ಪೂಜೆ ಸಲ್ಲಿಸಿ, ಸಂಕ್ರಾಂತಿ ಉತ್ಸವಕ್ಕೆ ಚಾಲನೆ ನೀಡಿದರು.

ಪೌರ ಕಾರ್ಮಿಕರ ಜೊತೆಯಲ್ಲಿ ಸಂಕ್ರಾಂತಿ ಸಂಭ್ರಮ ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಎನ್.ನಾಗರಾಜ್ ರವರು  ಮಾತನಾಡಿ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿರವರ ನೇತೃತ್ವದಲ್ಲಿ ಶಾಸಕಿ ಸೌಮ್ಯ ರೆಡ್ಡಿರವರ ಸಹಕಾರದಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಜಯನಗರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಕ್ರಾಂತಿ ಉತ್ಸವ ಅಚರಿಸಲಾಗುತ್ತಿದೆ.  ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ಧವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಪೊಂಗಲ್ ಎಂದರೆ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಅಡುಗೆ ಮಾಡಿ ಬಂಧು ಬಾಂದವರ ಜೊತೆಯಲ್ಲಿ ಒಟ್ಟಾಗಿ ಸೇರಿ ಅಚರಣೆ ಮಾಡುವುದಾಗಿದೆ.

ವರ್ಷದ ಮೊದಲ ಹಬ್ಬವಾಗಿರೋ ಸಂಕ್ರಾಂತಿಯನ್ನು ಜಯನಗರದಲ್ಲಿ ವಿಭಿನ್ನವಾಗಿ ಆಚರಿಸಲಾಗಿದೆ. ಗೋವುಗಳಿಗೆ ಅಲಂಕಾರ ಹಾಗು ಪೂಜೆ ಮಾಡಿ ನೂರಾರು ಪೌರಕಾರ್ಮಿಕರಿಗೆ ಎಳ್ಳು, ಬೆಲ್ಲ ಹಾಗು ಕಬ್ಬನ್ನು ಹಂಚಲಾಗಿದೆ. ಚನ್ನಪಟ್ಟಣದ ರೈತರಿಂದಲೇ ಬಿದ್ದು ಕಬ್ಬು ಖರೀದಿಸಿ ಸುಮಾರು 13ಲಾರಿಗಳಲ್ಲಿ ತರೆಸಲಾಗಿದ್ದ ಕಬ್ಬನ್ನು ಜಯನಗರದ ಜನತೆಗೆ  ಮಾಜಿ ಬಿ.ಬಿ.ಎಂ.ಪಿ ಸದಸ್ಯರಾದ ಎನ್.ನಾಗರಾಜ್ ಹಂಚಿದ್ರು. ನಮ್ಮ ರಾಜ್ಯದಲ್ಲಿ ಹಬ್ಬಕ್ಕೆ ಅವುಗಳದ್ದೇ ಆದ ಪ್ರಾಮುಖ್ಯತೆ ಇದೆ. ಇಂದು ವರ್ಷದ ಮೊದಲ ಹಬ್ಬವನ್ನು ಜನರ ಜೊತೆ ಆಚರಿಸಿದ್ದು ಸಂತೋಷವಾಗಿದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments