Monday, April 29, 2024
spot_img
HomeMandyaರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ ನನ್ನ ಮತ ನನ್ನ ಭವಿಷ್ಯ- ಒಂದು ಮತದ ಶಕ್ತಿ- ಜಾಗೃತಿ...

ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ ನನ್ನ ಮತ ನನ್ನ ಭವಿಷ್ಯ- ಒಂದು ಮತದ ಶಕ್ತಿ- ಜಾಗೃತಿ ಸ್ಪರ್ಧೆ

ಮಂಡ್ಯ: ಭಾರತ ಚುನಾವಣಾ ಆಯೋಗವು ರಾಷ್ಟ್ರೀಯ ಮತದಾರರ ದಿನ-2022ರ ಅಂಗವಾಗಿ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯನ್ನು ಆಯೋಜಿಸಿದೆ.
ಚುನಾವಣೆ ಮತ್ತು ಚುನಾವಣಾ ಆಯೋಗಕ್ಕೆ ಸಂಬಂಧಿಸಿದಂತೆ ಐದು ವಿಭಾಗಗಳಲ್ಲಿ ರಸಪ್ರಶ್ನೆ, ವೀಡಿಯೊ ತಯಾರಿಕೆ, ಗಾಯನ, ಭಿತ್ತಿಚಿತ್ರ ವಿನ್ಯಾಸ ಹಾಗೂ ಘೋಷವಾಕ್ಯ ಬರೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದ ಸಾರ್ವಜನಿಕರು, ಹವ್ಯಾಸಿಗಳು, ವೃತ್ತಿಪರರು ಹಾಗೂ ಸಾಂಸ್ಕøತಿಕ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಆರ್‍ಜೆ ದಿವ್ಯಾ ಪ್ರಭು ಪ್ರಕಟಣೆಯಲ್ಲಿ ಕೋರಿದ್ದಾರೆ.
ಬಹುಮಾನ: ಪ್ರತಿ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದ ವಿಜೇತರಿಗೆ ಅತ್ಯಾಕರ್ಷಕ ನಗದು ಬಹುಮಾನ ನೀಡಲಾಗುತ್ತದೆ.
ಸ್ಪರ್ಧೆ ಕುರಿತು ಹೆಚ್ಚಿನ ವಿವರಗಳು, ಮಾರ್ಗಸೂಚಿಗಳು, ನಿಯಮಗಳು ಹಾಗೂ ಷರತ್ತುಗಳಿಗೆ ಸ್ಪರ್ಧೆಯ ವೆಬ್‍ಸೈಟ್ ವಿಳಾಸ voter-contest@eci.gov.in ವೀಕ್ಷಿಸಲು ಕೋರಲಾಗಿದೆ. ಭಾಗವಹಿಸುವವರು ವಿವರಗಳೊಂದಿಗೆ ನಮೂದುಗಳನ್ನು ಮಾರ್ಚ್ 15, 2022ರೊಳಗೆ voಣeಡಿ-ಛಿoಟಿಣesಣ@eಛಿi.gov.iಟಿ ಗೆ ಇಮೇಲ್ ಮಾಡಲು ಕೋರಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments