Saturday, May 4, 2024
spot_img
HomeChikballapurShidlaghattaಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಏಳು ದಿನಗಳ ಬಟ್ಟೆ ಚೀಲ ತಯಾರಿ ತರಬೇತಿ

ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಏಳು ದಿನಗಳ ಬಟ್ಟೆ ಚೀಲ ತಯಾರಿ ತರಬೇತಿ

ಶಿಡ್ಲಘಟ್ಟ: ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಮಳ್ಳೂರು ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನ ವಿಕಾಸ ಕರ್ಯಕರ್ಮದನ್ವಯ  ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಏಳು ದಿನಗಳ ಬಟ್ಟೆ ಚೀಲ ತಯಾರಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಶಾಂತ್ ಮಾತನಾಡಿ,  ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ನಡೆದಿರುವ ಬಟ್ಟೆ ಚೀಲ ತಯಾರಿ ಕಾರ್ಯಕ್ರಮವು ಉಪಯುಕ್ತ ಕಾರ್ಯಕ್ರಮವಾಗಿದ್ದು ,ಇದು ಪರಿಣಾಮಕಾರಿಯಾಗಿ ಮುಂದುವರೆಯಬೇಕೆಂದು ಸದಸ್ಯರಿಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೂ ಪ್ರಮಾಣಪತ್ರ ಹಾಗೂ ಬಟ್ಟೆ ಚೀಲ ವಿತರಣೆ ಮಾಡಲಾಯಿತು.
ಈ  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ  ಪವಿತ್ರ, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ  ಪ್ರಶಾಂತ್ , ತಾಲೂಕಿನ ಯೋಜನಾಧಿಕಾರಿಗಳಾದ  ಪ್ರಕಾಶ್ ಕುಮಾರ್ , ಒಕ್ಕೂಟದ ಅಧ್ಯಕ್ಷರಾದ  ಮಂಜುಳಾ, ಮಹಿಳಾ ಸಂಘಟನೆಯ ಅಧ್ಯಕ್ಷರಾದ  ವನಿತಾ, ಅಂಗನವಾಡಿ ಶಿಕ್ಷಕಿಯಾದ  ರೂಪ,  ಮೇಲ್ವಿಚಾರಕರಾದ ಅನಿತಾ, ಜ್ಞಾನ  ವಿಕಾಸ ಸಮನ್ವಯಾಧಿಕಾರಿ ಸುಮಂಗಲ ,ಸೇವಾ ಪ್ರತಿನಿಧಿ ಮುನಿರಾಜು, ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments