Saturday, May 4, 2024
spot_img
HomeChikballapurಬೀದಿ ಬದಿಯ ವ್ಯಾಪಾರಿಗಳ ದಿನಾಚರಣೆ

ಬೀದಿ ಬದಿಯ ವ್ಯಾಪಾರಿಗಳ ದಿನಾಚರಣೆ

ಶಿಡ್ಲಘಟ್ಟ: ಬೀದಿ ಬದಿಯ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಿಗುತ್ತಿಲ್ಲ ವ್ಯಾಪಾರಿಗಳಲ್ಲೂ ಜಾಗೃತಿ ಮೂಡಬೇಕಿದೆ ಆಗ ಮಾತ್ರ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಬೀದಿ ಬದಿ ವ್ಯಾಪಾತಿಗಳ ಸಂಘದ ರಾಜ್ಯಾದ್ಯಕ್ಷ ರಂಗಸ್ವಾಮಿ ತಿಳಿಸಿದರು.
ನಗರದ  ಕೋಟೆ ವೃತ್ತದಲ್ಲಿ ಕರ್ನಾಟಕ ರಾಜ್ಯ ಬೀದಿ ಬದಿಯ ವ್ಯಾಪಾರಿಗಳ ಸಂಘದಿಂದ ನಡೆದ ಬೀದಿ ಬದಿಯ ವ್ಯಾಪಾರಿಗಳ ದಿನಾಚರಣೆ ಕಾಠ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಾಪಾರಿಗಳಿಗೆ ಅನುಕೂಲಕರ ಅನೇಕ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ  ಅವುಗಳು ಎಲ್ಲ ಅರ್ಹರಿಗೂ ಸಿಗಲೆಂದು ಸಂಘವು ಶ್ರಮಿಸುತ್ತಿದೆ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ಅವರು ಮಾತನಾಡಿ, ಬೀದಿ ಬದಿಯ ವ್ಯಾಪಾರಿಗಳಿಗೆ ಅಗತ್ಯ ಎಲ್ಲಾ ನೆರವು ನೀಡುವ ಭರವಸೆ ನೀಡಿದರಲ್ಲದೆ ಬೀದಿ ಬದಿಯ ವ್ಯಾಪಾರಿಗಳ ದಿನಾಚರಣೆಯ ಶುಭಾಶಯವನ್ನು ಕೋರಿದರು.
ಮಾನವ ಹಕ್ಕುಗಳ ಕಮಿಟಿಯ ರಾಜ್ಯ ರಾಜ್ಯಾಧ್ಯಕ್ಷ ಸಂಸ್ಥಾಪಕ ಅಧ್ಯಕ್ಷ ಬೈರೇಗೌಡ ಮಾತನಾಡಿ, ಬೀದಿ ಬದಿ ವ್ಯಾಪಾರ ಮಾಡುವ ಯಾರೇ ಆಗಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ನಮ್ಮ ಕಮಿಟಿಯನ್ನು ಅಧ್ಯಕ್ಷ ಶ್ರೀರಾಮ್, ಸಂಪರ್ಕಿಸಿ ಸಾವಿರದಿಂದ 50 ಲಕ್ಷದವರೆಗು ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಶ್ರೀಕಾಂತ್, ಮಾನವ ಹಕ್ಕುಗಳ ಕಮಿಟಿ ಬೈರೇಗೌಡ, ಬಿಜೆಪಿ ಮಂಜುಳಮ್ಮ, ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಅಸ್ಲಂಪಾಷ, ಕಾರ್ಯ ನಿರ್ದೇಶಕ ಅಸ್ಲಂ, ಶಿಡ್ಲಘಟ್ಟ ತಾಲೂಕು ಕಾರ್ಯದರ್ಶಿ  ಇಲಿಯಾಜ್, ತಿಮ್ಮರಾಯಪ್ಪ, ಗೋಪಾಲ್, ಲಕ್ಷ್ಮಿ, ಸುರೇಶ್, ವೆಂಕಟರಾಯಪ್ಪ ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments