Saturday, April 27, 2024
spot_img
HomeRamnagarಉತ್ತಮ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ : ಸತೀಶ್. ಕೆ

ಉತ್ತಮ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ : ಸತೀಶ್. ಕೆ

ರಾಮನಗರ: ಆರೋಗ್ಯಕರ ಜೀವನಕ್ಕೆ ವ್ಯಯಾಮ, ಕ್ರೀಡೆ, ನಿರಂತರವಾಗಿ  ಅವಶ್ಯಕವಾಗಿದ್ದು, ಕೆಲಸದ ಒತ್ತಡದಲ್ಲಿ  ಕಾರ್ಯ ನಿರ್ವಹಿಸುವ  ಸರ್ಕಾರಿ ನೌಕರರು  ಆರೋಗ್ಯದ ಕಡೆ  ಹೆಚ್ಚಿನ ಗಮನ  ಹರಿಸಬೇಕು ಎಂದು ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ್ ಕೆ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ರಾಮನಗರ ಸರ್ಕಾರಿ ನೌಕರರ  ಸಂಘ  ವತಿಯಿಂದ ಇಂದು “ರಾಜ್ಯ ಸರ್ಕಾರಿ ನೌಕರರ ರಾಮನಗರ ತಾಲ್ಲೂಕು ಮಟ್ಟದ  ಕ್ರೀಡಾ ಕೂಟದಲ್ಲಿ ೨೦೨೨” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ರಾಮನಗರ ಜಿಲ್ಲೆಯ ಸರ್ಕಾರಿ ನೌಕರರು ಕ್ರೀಡಾ ಕೂಟಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಪದಕ ಗಳಿಸುತ್ತರೆ. ಕಳೆದ  ಬಾರಿ ನಡೆದ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ೧೩ ಪದಕ  ಪಡೆದಿದ್ದು ಈ ಬಾರಿ ಇನ್ನೂ ಹೆಚ್ಚು ಪದಕ ನಿರೀಕ್ಷಿಸೋಣ ಎಂದು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
ವಯಸ್ಸಾಗುತ್ತಿದ್ದಂತೆ ಮಧುಮೇಹ, ರಕ್ತದಒತ್ತಡ   ಇಂದು ಸಾಮಾನ್ಯ ಕಾಯಿಲೆಗಳಾಗಿವೆ,  ಸರ್ಕಾರಿ  ನೌಕರರು ಒಂದು ಕ್ರೀಡೆಯನ್ನು ಹವ್ಯಾಸವಾಗಿ ರೂಡಿಸಿಕೊಳ್ಳುವುದು ಉತ್ತಮ. ಕ್ರೀಡಾಪಟುಗಳು ಸೋಲು ಗೆಲುವನ್ನು ಸರಿಸಮನಾಗಿ  ಸ್ವೀರಿಸಬೇಕು ಎಂದರು.
ರಾಮನಗರ  ನಗರ ಸಭೆ ಅಧ್ಯಕ್ಷೆ ಬಿ. ಸಿ ಪಾರ್ವತಮ್ಮ ಮಾತನಾಡಿ ಕ್ರೀಡೆಯು ಮನರಂಜನ ಕ್ಷೇತ್ರವಾಗಿದ್ದು , ಕ್ರೀಡೆಯಲ್ಲಿ ಯಾವುದೇ ರೀತಿಯ  ರಾಜಕೀಯ  ಹಸ್ತಕ್ಷೇಪ  ಬೇಡ. ಎಲ್ಲರೂ ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಿ ಎಂದರು
ಸರ್ಕಾರಿ ನೌಕರರ  ಸಂಘದ  ನಿಕಟ ಪೂರ್ವ ಅಧ್ಯಕ್ಷ  ಆರ್ ಕೆ ಭೈರಲಿಂಗಯ್ಯ ಮಾತನಾಡಿ  ಇತ್ತೀಚಿನ ದಿನಗಳಲ್ಲಿ ಕಚೇರಿಗಳಲ್ಲಿ ೪ ಜನ ಮಾಡುವ  ಕೆಲಸವನ್ನು  ಒಬ್ಬ ಸರ್ಕಾರಿ ನೌಕರ  ಮಾಡುವಂತಹ ಸಮಸ್ಯೆ  ಎದುರಿಸುತ್ತಿದ್ದು,  ಕೆಲಸದ ಒತ್ತಡದಲ್ಲಿ ಸಿಲುಕಿರುವ  ಪ್ರತಿಯೊಬ್ಬ ಸರ್ಕಾರಿ ನೌಕರನಿಗೂ  ಮನರಂಜನೆ ಅವಶ್ಯಕವಾದುದ್ದು ಒತ್ತಡದಿಂದ ಮುಕ್ತಿ ಪಡೆಯಲು ವೇದಿಕೆ ಅವಶ್ಯಕ ಎಂದರು.
ಕ್ರೀಡೆಯಿAದ  ಉತ್ತಮ  ಅರೋಗ್ಯ ಪಡೆಯಬಹುದಾಗಿದ್ದು ವ್ಯಕ್ತಿಯು ಆರೋಗ್ಯವಾಗಿದ್ದರೆ ಮಾತ್ರ ಉತ್ತಮ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ನೌಕರರು ಬಹುತೇಕ  ಸ್ಪರ್ಧೆಗಳಲ್ಲಿ ನೇರವಾಗಿ  ತರಭೇತಿ ಪಡೆಯುವ  ಹವ್ಯಾಸ ಬೆಳಸಿಕೊಳ್ಳಬೇಕು  ಎಂದರು.
ಕಾರ್ಯಕ್ರಮದಲ್ಲಿ ರಾಮನಗರ  ತಾಲ್ಲೂಕು ತಹಸೀಲ್ದಾರ್ ವಿಜಯಕುಮಾರ್ ಎಮ್, ಕಾರ್ಯನಿರ್ವಾಹಕ  ಅಧಿಕಾರಿ ಶಿವಕುಮಾರ್, ಕ್ಷೇತ್ರ ಶಿಕ್ಷಣಧಿಕಾರಿ  ಕುಮಾರಸ್ವಾಮಿ, ರಾಮನಗರ ನಗರಸಭೆ  ಆಯುಕ್ತ ನಂದಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್, ಯುವಜನ, ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ  ಸಹಾಯಕ ನಿರ್ದೇಶಕಿ  ಜಯಲಕ್ಷ್ಮಿ, ದೈಹಿಕ  ಶಿಕ್ಷಣ ವಿಷಯ ಪರಿವಿಕ್ಷಕ ಶ್ರೀನಿವಾಸ್ ಹಾಗೂ ನೌಕರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments