Sunday, April 28, 2024
spot_img
HomeBangaloreಜ 4 ರಿಂದ 6 ರವರೆಗೆ ವಿವಾಹ ವಸ್ತ್ರಾಭರಣ ಪ್ರದರ್ಶನ

ಜ 4 ರಿಂದ 6 ರವರೆಗೆ ವಿವಾಹ ವಸ್ತ್ರಾಭರಣ ಪ್ರದರ್ಶನ

ಬೆಂಗಳೂರು: ಹೈಲೈಫ್-ವಿವಾಹ ವಸ್ತ್ರಾಭರಣಗಳ ಅತ್ಯುತ್ತಮ ಸಂಗ್ರಹಗಳ ಪ್ರದರ್ಶನ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ನಡೆಯುತ್ತಿದೆ.

ಮದುವೆಗಳ ಈ ಪರ್ವಕಾಲದಲ್ಲಿ ವಧು ವರರಿಗಾಗಿನ ಭಾರತದ ಅತ್ಯುತ್ತಮ ವಸ್ತ್ರ, ಆಭರಣಗಳ ಮೂರು ದಿನಗಳ ಪ್ರದರ್ಶನ ಜ 4 ರಿಂದ 6 ರವರೆಗೆ ಆಯೋಜನೆಯಾಗಿದೆ.

ಭಾರತದ ಖ್ಯಾತ ಫ್ಯಾಷನ್ ತಜ್ಞರು, ವಿನ್ಯಾಸಗಾರರ ಅಪರೂಪದ ಕಲಾತ್ಮಕ ಸಂಗ್ರಹಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದು. ವಿವಾಹ ವಸ್ತ್ರ, ಗೌನ್, ವಧುವಿನ ಆಭರಣ ಹೀಗೆ ಮದುವೆಯ ಎಲ್ಲಾ ಅಗತ್ಯಗಳೂ ಒಂದೇ ಸೂರಿನಡಿ ಇಲ್ಲಿ ಲಭ್ಯ.

ದೇಶಾದ್ಯಂತ ಖ್ಯಾತ ಪ್ರದರ್ಶನಕಾರರು, ವಿನ್ಯಾಸಕಾರರು ವಿಶಿಷ್ಟ, ವಿನೂತನ ಸಂಗ್ರಹಗಳನ್ನು ಇಲ್ಲಿ ಪ್ರದರ್ಶಿಸಿದ್ದು ಇದು ನೋಡುಗರ ಮನಸೂರೆಗೊಳ್ಳಲಿದೆ.

ಭಾರತದ ಅತಿದೊಡ್ಡ ಮತ್ತು ಆಕರ್ಷಕ ವೈವಾಹಿಕ ವಸ್ತ್ರಾಭರಣಗಳ ಪ್ರದರ್ಶನವಿದೆ ಎಂದು ಹೈಲೈಫ್ ಪ್ರದರ್ಶನದ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಅಬಿ ಪಿ. ಡಾಮ್ನಿಕ್ ಹೇಳಿದ್ದಾರೆ.

ವಧು ವರರ ಅಗತ್ಯ ವಿನ್ಯಾಸಗಳಿಗೆ ಹೈಲೈಫ್ ಪ್ರದರ್ಶನ ಸಮಗ್ರ ವೇದಿಕೆ ಒದಗಿಸಲಿದ್ದು ನಿಮ್ಮ ಬಯಕೆಯ ವಸ್ತ್ರ, ಆಭರಣ ಮತ್ತಿತರ ವಸ್ತುಗಳನ್ನು ಒಂದೆಡೆ ಖರೀದಿಸಬಹುದಾಗಿದೆ.

ಜ 4 ರಿಂದ 6 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ತಾಜ್ ವೆಸ್ಟ್ ಎಂಡ್ ನಲ್ಲಿ ಶಾಪಿಂಗ್ ಮಾಡಿ. ವಿವಾಹ ಋತುವಿನಲ್ಲಿ ಹೈಲೈಫ್ ಶಾಪಿಂಗ್ ನ ವಿಶಿಷ್ಟಾನುಭೂತಿ ಪಡೆಯಿರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments