Friday, April 26, 2024
spot_img
HomeChikballapurಸೂಕ್ತ ಚರಂಡಿ ರಸ್ತೆ ಇಲ್ಲದೆ  ಪೊಲೀಸರ ಕುಟುಂಬದವರು ಪರದಾಟ 

ಸೂಕ್ತ ಚರಂಡಿ ರಸ್ತೆ ಇಲ್ಲದೆ  ಪೊಲೀಸರ ಕುಟುಂಬದವರು ಪರದಾಟ 

ಪಾಲಾರ್ ಪತ್ರಿಕೆ | Palar Pathrike

ಶಿಡ್ಲಘಟ್ಟ : ನಗರದ ಅಜಾದ್ ನಗರದ ಪೊಲೀಸ್ ಕ್ವಾಟ್ರಸ್ ನಲ್ಲಿ ಸೂಕ್ತ ಚರಂಡಿ ರಸ್ತೆ ಇಲ್ಲದೆ  ಪೊಲೀಸರ ಕುಟುಂಬದವರು ಪರದಾಟ, ನಗರದ ಪೊಲೀಸ್ ಕ್ವಾಟ್ರಸ್‍ನಲ್ಲಿ ಮಳೆ ಬಂದರೆ ಮಳೆನೀರು ರಸ್ತೆಯಲ್ಲೆ ನಿಂತು ಪೊಲೀಸರು ಮಕ್ಕಳು ಹಾಗೂ ಮಹಿಳೆಯರು ದೈನಂದಿನ ಕಾರ್ಯಗಳಿಗೆ  ಸಂಚಾರಿಸಲು ಹರಸಾಹಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೊಲೀಸ್ ಕ್ವಾಟ್ರಸ್ ಸ್ಥಳೀಯ ಮಹಿಳೆಯರು ಅರೋಪಿಸಿದ್ದಾರೆ.
ನಗರದ ಅಜಾದ್ ನಗರದ  ಪೊಲೀಸ್ ಕ್ವಾಟ್ರಸ್ ಉದ್ಘಾಟನೆ ಗೊಂಡು 12-13 ವರ್ಷಗಳಾಗಿದ್ದು ಇಂದಿಗೂ ರಸ್ತೆಗೆ ಒಂದು ಚರಂಡಿ ಇಲ್ಲ, ಸಿಸಿ ರಸ್ತೆ ಅಥವಾ ಡಾಂಬರು ರಸ್ತೆಯನ್ನು ಕಾಣದೆ ಇಂದಿಗೂ ಮಣಿನ ರಸ್ತೆಯಲ್ಲೆ ಒಡಾಡುವ ಪರಿಸ್ಥಿತಿ ಇದೆ. 
ಮಳೆ ಬಂದರೆ ಮಳೆ ನೀರು ರಸ್ತೆಯಲ್ಲೆ ನಿಂತು ಕೆಸರಿನ ಗದ್ದೆಗಳಾಗಿ ದ್ದು ಪೋಲೀಸರು 24 ಗಂಟೆಗಳು ಸೇವೆ ಸಲ್ಲಿಸುತ್ತರಾದರು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮೂಲ ಸೌಕರ್ಯಗಳು ಕಲ್ಪಿಸಲು ಮುಂದಾಗಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು 
ಮಕ್ಕಳನ್ನು ಶಾಲೆಗೆ ಕಳಿಸಲು ತೊಂದರೆ ಉಂಟಾಗಿದೆ    ದ್ವಿಚಕ್ರ ವಾಹನದಲ್ಲಿ ಮನೆಗಳಿಗೆ ಬರುವಾಗ ಹೋಗುವಾಗ ಸಮಯದಲ್ಲಿ ವಾಹನಗಳು ಜಾರಿ ಬಿದು ಅನೇಕರು ಗಾಯಗೊಂಡು ಅಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದಾರೆ. 
ಇಷ್ಠೆಲ್ಲಾ ತೊಂದರೆಗಳನ್ನು ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳಾಗಲಿ ಅಥವಾ ಸಂಬಂದಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದೆ ಇರುವುದು ಕಣ್ಣಿದ್ದು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ,
ರಸ್ತೆಯಲ್ಲಿ ನೀರು ನಿಲ್ಲುವುದೇ ಅಲ್ಲದೆ ಮನೆಗಳಿಗೂ ನೀರು ನುಗುತ್ತಿದೆ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಇಲ್ಲದೆ ರಸ್ತೆಯಲ್ಲೆ ನಿಂತು ಹಳ್ಳಗಲಾಗಿ ನೀರಿನಲ್ಲಿ ಲಾರ್ವಗಳು ಬೆಳೆದು ಸೊಳ್ಳೆಗಳು ಉತ್ಫತ್ತಿಯಾಗಿ ಮಕ್ಕಳಿಗೆ ರೋಗರುಜಿನಗಳು ಬರುವ ಆತಂಕದಲ್ಲಿ ಪೊಲೀಸ್ ಕ್ವಾಟ್ರಸ್‌ನಲ್ಲಿರು ವಂತಹ ಕುಟುಂಬಗಳು ಭಯದಿಂದ ಜೀವನ ನಡೆಸುತ್ತಿದ್ದಾರೆ,

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments