Friday, March 29, 2024
spot_img
HomeChikballapurಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣ ಕಲುಷಿತಗೊಂಡಿದೆ

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣ ಕಲುಷಿತಗೊಂಡಿದೆ

ಪಾಲಾರ್ ಪತ್ರಿಕೆ | Palar Pathrike

ಶಿಡ್ಲಘಟ್ಟ: ಕೋಲಾರ ಚಿಕ್ಕಬಳ್ಳಾಪುರಜಿಲ್ಲೆಯ ರಾಜಕಾರಣ ಕಲುಷಿತಗೊಂಡಿದೆ.ಇದು ಶುದ್ಧವಾಗಬೇಕಾದರೆ ಎರಡೂ ಜಿಲ್ಲೆಗಳಹೆಣ್ಣು ಮಕ್ಕಳು ಕಾಸು ತೆಗೆದುಕೊಂಡುಓಟು ಹಾಕುವುದಿಲ್ಲ. ನಮ್ಮ ಮತಗಳನ್ನುಮಾರಿಕೊಳ್ಳುವುದಿಲ್ಲ ಎಂಬ ಶಪಥ ಮಾಡುವಮೂಲಕ ನೂತನ ಆಂದೋಲನ ಶುರುಮಾಡಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಶ್ರೀ ನಗರೇಶ್ವರ ಮಂಟಪದಲ್ಲಿ  ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದಮಹಿಳಾ ಸ್ವಸಹಾಯ ಸಂಘಗಳು ಹಾಗೂರೈತರಿಗೆ ಕೆಸಿಸಿ ಮತ್ತು ಮದ್ಯಮಾವಧಿ ಸಾಲವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿಮಾತನಾಡಿದರು.
ನೀವು ಯಾವುದೇ ವ್ಯಕ್ತಿಯನ್ನು ಆಯ್ಕೆಕೋಲಾರದುಡ್ಡಿಗೆ ಗೌರವ ಚಿಕ್ಕಬಳ್ಳಾಪುರಜಿಲ್ಲೆಯ ಬಡ್ಡಿ ರಹಿತ ಸಾಲ ಪಡೆದಿರುವಸುಮಾರು 6 ಲಕ್ಷ 70 ಸಾವಿರ ಹೆಣ್ಣುಮಕ್ಕಳುಕಾಸು ತೆಗೆದುಕೊಂಡು ಓಟು ಹಾಕುವುದಿಲ್ಲಎಂಬ ಶಪಥ ಮಾಡಿಬೇಕು. ಬೇಕಾದವರಿಗೆಓಟು ಹಾಕುವ ಸ್ವಾತಂತ್ರ್ಯವನ್ನು ಸಂವಿದಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಮಗೆಲ್ಲಕಲ್ಪಿಸಿದ್ದಾರೆ. 1500 ಅಡಿ ಆಳದ ಕೊಳವೆಬಾವಿನೀರು ತೆಗೆದು ವ್ಯವಸಾಯ ಮಾಡಿ ಜೀವನ ಸಾಗಿಸಿದ ನಾವುಗಳುನಿಜವಾದ ಸ್ವಾಭಿಮಾನಿಗಳು. ಇಂತಹ ಸ್ವಾಭಿಮಾನವನ್ನು ಚುನಾವಣೆ ಸಮಯದಲ್ಲಿ 500-1000 ರೂಗೆ ಮಾರಿಕೊಳ್ಳಬೇಡಿ ಎಂದರು.
ಸಾರಾಯಿ ಬೇಡ ಎಂದು ಹೊರಾಟ ಮಾಡಿದಕೀರ್ತಿ ಮಹಿಳೆಯರದ್ದು, ಹಾಗಾಗಿ ಪ್ರತಿಯೊಬ್ಬಹೆಣ್ಣು ಮಗುವು ರಾಜಕಾರಣ ಶುದ್ಧಗೊಳಿಸಲುಆಂದೋಲನ ಮಾಡುವ ಮೂಲಕಸಿಡಿದೇಳಬೇಕು. ದೇಶದ ಗಡಿ ಕಾಯುವ ಸೈನಿಕಹಾಗೂ ಬೆಳೆ ಬೆಳೆಯುವ ರೈತನನ್ನು ನಾವುಉಳಿಸಿಕೊಂಡಾಗ ಮಾತ್ರ ದೇಶ ಉಳಿಯುತ್ತದೆಎಂದರು.
ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎ.ನಾಗರಾಜ್,ನಿರ್ದೇಶಕ ನಾಗನಾಳ ಸೋಮಣ್ಣ ಟೌನ್ ರೇಷ್ಮೆಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ,ಅಧ್ಯಕ್ಷ ಬಿ.ನಾರಾಯಣಸ್ವಾಮಿ,ಉಪಾಧ್ಯಕ್ಷೆ ಶೋಭಾರಾಣಿ, ಡಿಸಿಸಿ ಬ್ಯಾಂಕ್ವ್ಯವಸ್ಥಾಪಕ ಆನಂದ್, ಟೌನ್‌ ಎಸ್‌ಎಫ್‌ಸಿಎಸ್ಕಾರ್ಯನಿರ್ವಹಣಾಧಿಕಾರಿ ದೇವಿಕ, ಟೌನ್ಎಸ್‌ಎಫ್‌ಸಿಎಸ್‌ ನಿರ್ದೇಶಕರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments