Friday, April 26, 2024
spot_img
HomeRamnagarರಾಜ್ಯದಲ್ಲಿ ಛಲವಾದಿಗಳ ಸಂಘವನ್ನು ಸದೃಢಗೊಳಿಸಲು ಸಿದ್ದವಾದ ಛಲವಾದಿ ಮಹಾಸಭಾ

ರಾಜ್ಯದಲ್ಲಿ ಛಲವಾದಿಗಳ ಸಂಘವನ್ನು ಸದೃಢಗೊಳಿಸಲು ಸಿದ್ದವಾದ ಛಲವಾದಿ ಮಹಾಸಭಾ

ಪಾಲಾರ್ ಪತ್ರಿಕೆ | Palar Pathrike 

ರಾಮನಗರ: ರಾಜ್ಯದಲ್ಲಿ ಛಲವಾದಿಗಳ ಸಂಘವನ್ನು ಸದೃಢಗೊಳಿಸಲು ರಾಮನಗರ ಜಿಲ್ಲೆ ಮತ್ತು ನಾಲ್ಕೂ ತಾಲ್ಲೂಕುಗಳಲ್ಲಿ ಸಂಚರಿಸಿ ಛಲವಾದಿಗಳನ್ನು ಒಟ್ಟುಗೂಡಿಸಲು ಶ್ರಮಿಸುತ್ತೇನೆ ಎಂದು ಛಲವಾದಿ ಮಹಾಸಭಾ (ರಿ.), ತಾಲ್ಲೂಕು ಅಧ್ಯಕ್ಷ ಎನ್. ಗೋಪಿ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಮನಗರ ಜಿಲ್ಲಾ ಛಲವಾದಿ ಮಹಾಸಭಾ ಪದಾಧಿಕಾರಿಗಳ ನೇಮಕಾತಿ ಆದೇಶ ಪ್ರತಿ ವಿತರಣಾ ಸಮಾರಂಭದಲ್ಲಿ ರಾಮನಗರ ತಾಲ್ಲೂಕು ಅಧ್ಯಕ್ಷರಾಗಿ ನೇಮಕವಾದ ನಂತರ ಮಾತನಾಡಿದ ಅವರು, ಜಿಲ್ಲೆಯ ತಾಲ್ಲೂಕುಗಳಲ್ಲಿ ವಿವಿಧೆಡೆ ಚದುರಿ ಹೋಗಿರುವ ಛಲವಾದಿಗಳನ್ನು ಭೇಟಿ ಮಾಡಿ ಸಂಘವನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತಹ ಕೆಲಸವನ್ನು ಮಾಡಲು ಜಿಲ್ಲೆಯ ಅಧ್ಯಕ್ಷರಾದ ಬಿ. ಶೇಖರ್ ಮತ್ತು ಮೂರು ತಾಲ್ಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಡನೆ ಪ್ರವಾಸ ಮಾಡಿ ಛಲವಾದಿ ಮಹಾಸಭಾವನ್ನು ಸದೃಢಗೊಳಿಸಿ ರಾಜ್ಯದಲ್ಲಿ ಕೆ. ಶಿವರಾಂ ಅವರ ಕೈ ಬಲಪಡಿಸಲಾಗುವುದು ಎಂದು ಹೇಳಿದರು.

ರಾಮನಗರ ತಾಲ್ಲೂಕು ಅಧ್ಯಕ್ಷನಾಗಿ ನೇಮಕವಾಗಲು ಸಹಕರಿಸಿದ ನನ್ನ ಎಲ್ಲ ಸ್ನೇಹಿತರು ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಮತ್ತು ಮಾಗಡಿ, ಚನ್ನಪಟ್ಟಣ ಹಾಗೂ ಕನಕಪುರ ತಾಲ್ಲೂಕುಗಳ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪ್ರತಿಯನ್ನು ವಿತರಿಸಲಾಯಿತು. ಛಲವಾದಿ ಮಹಾಸಭಾದ ರಾಮನಗರ ಜಿಲ್ಲಾಧ್ಯಕ್ಷರಾಗಿ ಬಿ. ಶೇಖರ್, ಜಿಲ್ಲಾ ಗೌರವಾಧ್ಯಕ್ಷರಾಗಿ ಚನ್ನಪಟ್ಟಣದ ಅಕ್ಕೂರು ಶೇಖರ್, ಜಿಲ್ಲಾ ಉಪಾಧ್ಯಕ್ಷರುಗಳಾಗಿ ರಾಮನಗರದ ಲಿಂಗರಾಜು, ಎನ್. ಶ್ರೀಧರ್, ಬಿಡದಿಯ ರಮೇಶ್, ಮಾಗಡಿಯ ಕುಮಾರ್ ಮತ್ತು ವೀರಭದ್ರಯ್ಯ ಕನಕಪುರದ ಮಹದೇವಯ್ಯ ಅವರುಗಳು ನೇಮಕವಾದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಚನ್ನಪಟ್ಟಣದ ನಾಗರಾಜು, ಜಿಲ್ಲಾ ಖಜಾಂಚಿಯಾಗಿ ರಾಮನಗರ ಟೌನಿನ ಸಿದ್ದಾರ್ಥ, ಜಿಲ್ಲಾ ಜಂಟಿ ಕಾರ್ಯದರ್ಶಿಗಳಾಗಿ ಚನ್ನಪಟ್ಟಣದ ಎನ್.ಡಿ. ಸಿದ್ದರಾಮು, ಮಾಗಡಿಯ ಶಶಿಕಿರರ್ಣ ಎಂ.ವಿ, ಕನಕಪುರದ ಶ್ರೀನಿವಾಸ್, ರಾಮನಗರ ಕಿರಣ್‌ಬಾಲು, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ರಾಮನಗರದ ಚನ್ನಯ್ಯ, ಕೇಶವಮೂರ್ತಿ ಸಿಪಿಟಿ, ಕೆÊಲಾಂಚ ಗ್ರಾಮದ ಸಿದ್ದರಾಜು, ಮಾಗಡಿಯ ಗೋಪಾಲ್, ಮಾಗಡಿಯ ರಂಗಸ್ವಾಮಿ ಮತ್ತು ಗೋಪಾಲ್ ಅವರುಗಳು ನೇಮಕವಾದರು. ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಚನ್ನಪಟ್ಟಣದ ಪಾಪಣ್ಣ, ಬಸವಲಿಂಗಯ್ಯ, ರಾಮನಗರದ ವೆಂಕಟೇಶ್, ಶಿವಪ್ಪ, ಕನಕಪುರದ ಅಶೋಕ, ವಿಜಯಕುಮಾರ್, ಹಾರೋಹಳ್ಳಿಯ ಮೋಹನ್, ಮಾಗಡಿಯ ಕೆಂಚಪ್ಪ ಮತ್ತು ಗಂಗರಾಜು ಅವರುಗಳು ನೇಮಕವಾದರೆ, ಬಿಡದಿ ಹೋಬಳಿ ಘಟಕದ ಅಧ್ಯಕ್ಷರಾಗಿ ಸಿದ್ದಪ್ಪಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಸದಾಕುಮಾರ್, ಉಪಾಧ್ಯಕ್ಷರುಗಳಾಗಿ ಗಂಗಾಧರ್, ಪ್ರಸನ್ನ, ಗವಿಯಪ್ಪ ಮತ್ತು ರಮೇಶ್ ಅವರುಗಳಿಗೆ ಜಿಲ್ಲಾಧ್ಯಕ್ಷರಾದ ಬಿ. ಶೇಖರ್ ಅವರು ನೇಮಕಾತಿ ಅದೇಶ ಪ್ರತಿ ವಿತರಿಸಿದರು.

ಇದೇ ಸಂದರ್ಭದಲ್ಲಿ ರಾಮನಗರ ತಾಲ್ಲೂಕು ಅಧ್ಯಕ್ಷರಾಗಿ ನೇಮಕವಾದ ಎನ್. ಗೋಪಿ ಅವರನ್ನು ಸ್ನೇಹಿತರು, ಹಿತೈಷಿಗಳು ಸನ್ಮಾನಿಸಿ ಗೌರವಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments