Sunday, April 28, 2024
spot_img
HomeBangalore Ruralಏಳೆಂಟು ವರ್ಷವಾದರೂ ಲಕ್ಷದೀಪೋತ್ಸವ ಮಾಡಲು ಸಹಕಾರ ನೀಡಲಾಗುವುದು : ಶಾಸಕ ಎಲ್.ಎನ್.ನಾರಾಯಣಸ್ವಾಮಿ

ಏಳೆಂಟು ವರ್ಷವಾದರೂ ಲಕ್ಷದೀಪೋತ್ಸವ ಮಾಡಲು ಸಹಕಾರ ನೀಡಲಾಗುವುದು : ಶಾಸಕ ಎಲ್.ಎನ್.ನಾರಾಯಣಸ್ವಾಮಿ

ಪಾಲಾರ್ ಪತ್ರಿಕೆ | Palar Pathrike 

ದೇವನಹಳ್ಳಿ: ರಾಜ್ಯದ ಎಲ್ಲಾ ದಾನಿಗಳಿಂದ ಲಕ್ಷದೀಪೋತ್ಸವಕ್ಕೆ ಆರ್ಥಿಕ ಬಲ ತುಂಬಿದ್ದಾರೆ. ಸಹೋದರ ಭಾವನೆಯಿಂದ ಎಲ್ಲವನ್ನೂ ಸಾಧ್ಯವಾಗಿಸಿದ್ದಾರೆ. ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪೋಲಿಸ್ ಇಲಾಖೆಯಿಂದ ರಕ್ಷಣೆ ಸೇರಿದಂತೆ ಎಲ್ಲರ ಸಹಕಾರದಿಂದ ಉತ್ತಮ ರೀತಿಯಲ್ಲಿ ಲಕ್ಷದೀಪೋತ್ಸವ ನಡೆದಿದೆ. ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಕೋಟೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಲಕ್ಷದೀಪೋತ್ಸವದ ಯಶಸ್ಸಿನ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಇತಿಹಾಸ ಪುಟಗಳಲ್ಲಿ ಲಕ್ಷದೀಪೋತ್ಸವ ಉಳಿಯುವಂತೆ ಆಗಿದೆ. ಕೇವಲ ಇಪ್ಪತ್ತು ದಿವಸದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಕನಿಷ್ಟಪಕ್ಷ ಎರಡು ತಿಂಗಳ ಒಳಗಾಗಿ ಇಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಸ್ವಯಂಸೇವಕರೂ ಸಹ ಯಾವುದೇ ಕುಂದುಕೊರತೆಯಾಗದೆ ಉತ್ತಮ ಕೆಲಸವನ್ನು ಮಾಡಿದ್ದಾರೆ. ಲಕ್ಷದೀಪೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಯಾಗದೆ ಶಾಂತಿಯಾಗಿ ನೆಮ್ಮದಿಯಾಗಿ ಲಕ್ಷದೀಪೋತ್ಸವ ನಡೆಯಲು ಪೋಲಿಸರ ಸಹಕಾರ ಅತಿಹೆಚ್ಚು ಆಗಿದೆ.ಡಿ.೧ ರಿಂದ ೮ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು ಎಲ್ಲಾ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆದಿದೆ. ವೇಣುಗೋಪಾಲಸ್ವಾಮಿ ಶಕ್ತಿಯಿಂದ ಲಕ್ಷದೀಪೋತ್ಸವ ಅದ್ದೂರಿಯಾಗಿ ನಡೆದಿದೆ. ಇನ್ನು ಮುಂದೆ ಏಳೆಂಟು ವರ್ಷಕ್ಕೆ ಲಕ್ಷದೀಪೋತ್ಸವ ಮಾಡಲು ಸಹಕಾರ ನೀಡುತ್ತೇನೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಉತ್ತಮ ಸಹಕಾರ ನೀಡಿರುವುದಕ್ಕೆ ಅಭಿನಂದಿಸುತ್ತೇನೆ. ಇದರಲ್ಲಿ ಯಾವುದೇ ರಾಜಕಾರಣ ಮಾಡದೆ ಎಲ್ಲರೂ ಒಗ್ಗಟ್ಟಿನಿಂದ ಜೊತೆಗೂಡಿ ಲಕ್ಷದೀಪೋತ್ಸವವನ್ನು ಮಾಡಲಾಗಿದೆ. ಜಾತಿ ಜನಾಂಗ ಪಕ್ಷಾತೀತವಾಗಿ ಎಲ್ಲರ ಸಹಕಾರದಿಂದ ವೇಣುಗೋಪಾಲಸ್ವಾಮಿ ಲಕ್ಷದೀಪೋತ್ಸವ ಯಶಸ್ವಿಯಾಗಿ ನಡೆದಿದೆ. ಭಗವಂತನ ಪ್ರೇರಣೆಯಿದ್ದರೆ ಒಂದೇ ದಿನದಲ್ಲಿ ಎಲ್ಲವೂ ಸಹಕಾರ ಮಾಡಿದ್ದೇವೆ ಎಂದು ಹೇಳಿದರು.
ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಲಕ್ಷದೀಪೋತ್ಸವವು ಲೋಕಕಲ್ಯಾಣಕ್ಕಾಗಿ, ಕ್ಷೇತ್ರ ಸುಭೀಕ್ಷೆಯಾಗಿರಲಿ, ಧರ್ಮಕಾರ್ಯ, ದೈವಕಾರ್ಯ ನಿರಂತರವಾಗಿ ನಡೆಯುವಂತೆ ಆಗಿದೆ. ಲಕ್ಷದೀಪೋತ್ಸವಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದೇವೆ. ಸ್ವಯಂಸೇವಕರ ಕಾರ್ಯ ಶ್ಲಾಘನೀಯ. ಎಲ್ಲರೂ ತನು, ಮನ, ಧನ ನೀಡಿದ್ದಾರೆ. ಎಲ್ಲರಿಗೂ ಅಭಿನಂದಿಸುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ ಉತ್ತಮ ಜನ ಲಕ್ಷದೀಪೋತ್ಸವಕ್ಕೆ ಸೇರಿದ್ದರು. ಇಂತಹ ಕಾರ್ಯಕ್ರಮಗಳ ಮೂಲಕ ಶಾಶ್ವತವಾಗಿ ಉಳಿಯುವ ಕೆಲಸ ಆಗಿದೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಎರಡು ಮೂರು ಸಭೆಗಳನ್ನು ಮಾಡಲಾಗಿತ್ತು. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ತಾವು ಶಾಸಕರಾಗಿದ್ದ ವೇಳೆಯಲ್ಲಿ ಅದ್ದೂರಿಯಾಗಿ ಲಕ್ಷದೀಪೋತ್ಸವವನ್ನು ಮಾಡಲಾಗಿತ್ತು. ಎಂದು ಹೇಳಿದರು.
ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿಶಾಸಕರ ಕನಸು ಲಕ್ಷದೀಪೋತ್ಸವ ಮಾಡುವುದಾಗಿತ್ತು. ಅದು ಈಗ ನನಸಾಗಿದೆ. ಕಡಿಮೆ ಅವಧಿಯಲ್ಲಿ ಅದ್ದೂರಿ ಕಾರ್ಯಕ್ರಮ ಮೂಡಿಬಂದಿz ಎರಡುವರೆ ಕೋಟಿ ವೆಚ್ಚದಲ್ಲಿ ಲಕ್ಷದೀಪೋತ್ಸವವನ್ನು ಪಕ್ಷಾತೀತವಾಗಿ ಮಾಡಲಾಗಿದೆ. ೆ ಎಂದು ಹೇಳಿದರು.
ಈ ವೇಳೆಯಲ್ಲಿ ಉಪವಿಭಾಗಾಧಿಕಾರಿ ತೇಜಸ್ ಕುಮಾರ್, ತಹಶೀಲ್ದಾರ್ ಶಿವರಾಜ್, ಜಿಪಂ ಉಪಕಾರ್ಯದರ್ಶಿ ಡಾ.ನಾಗರಾಜ್, ತಾಪಂ ಇಓ ವಸಂತ್ ಕುಮಾರ್, ಅಂತಾರಾಷ್ಟಿçÃಯ ವಿಮಾನ ನಿಲ್ದಾಣ ಸಂಚಾರಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಲಕ್ಷö್ಮಣ್ ನಾಯಕ್, ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ, ಅಂತಾರಾಷ್ಟಿçÃಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಅಶ್ವಥನಾರಾಯಣ್, ಪುರಸಭಾ ಮಾಜಿ ಅಧ್ಯಕ್ಷ ಎ.ಎನ್.ವಸಂತ್ ಬಾಬು, ಪುರಸಭಾ ಸದಸ್ಯರಾದ ಎನ್.ರಘು, ಜಿ.ಎ.ರವೀಂದ್ರ, ಪುರಸಭಾ ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ಕುಮಾರ್,
ಟೌನ್ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ, ಮುಖಂಡರಾದ ಜಿ.ಪುಟ್ಟಣ್ಣ, ಎನ್.ನಾಗೇಶ್ ಬಾಬು, ಗೋಪಾಲಕೃಷ್ಣ, ಎಸ್.ಆರ್.ವಿಜಯಕುಮಾರ್, ಅಮರನಾರಾಯಣ್, ಶ್ರೀರಾಮಯ್ಯ, ಭಾಸ್ಕರ್, ನಾರಾಯಣ್, ಮತ್ತಿತರರು ಇದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments