Wednesday, May 8, 2024
spot_img
HomeBangalore Ruralಸರಕಾರಿ ಶಾಲಾ ಜಾಗ ಉಳಿವಿಗೆ ಗ್ರಾಮಸ್ಥರ ಹೋರಾಟ

ಸರಕಾರಿ ಶಾಲಾ ಜಾಗ ಉಳಿವಿಗೆ ಗ್ರಾಮಸ್ಥರ ಹೋರಾಟ

ಪಾಲಾರ್ ಪಾತ್ರಿಕೆ | Palar Pathrike

ದೇವನಹಳ್ಳಿ: ಸುಮಾರು 25 ವರ್ಷಗಳಿಂದ ಸರಕಾರಿ ಜಾಗದಲ್ಲಿ ಬಿಜ್ಜವಾರ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ಜಾಗವನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ. ವಾಸ್ತವದಲ್ಲಿ ಸರಕಾರಿ ಶಾಲಾ ಜಾಗವಾಗಿರುವುದರಿಂದ ಒತ್ತುವರಿಯಾಗಿರುವ ಜಾಗವನ್ನು ಸರಕಾರಿ ಶಾಲೆಗೆ ಉಳಿಸಿಕೊಡಬೇಕೆಂದು ಗ್ರಾಮಸ್ಥರು ಹೋರಾಟ ನಡೆಸಿದರು.
ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಪಂ ವ್ಯಾಪ್ತಿಯ ಬಿಜ್ಜವಾರ ಗ್ರಾಮದಲ್ಲಿರುವ ಸರ್ವೆ ನಂ.16ರಲ್ಲಿರವ ಸರಕಾರಿ ಜಾಗವು 6.35ಎಕರೆಯಷ್ಟು ಇದ್ದು, ಗ್ರಾಮದ ಬಲಾಢ್ಯ ಮುಖಂಡ ವಿ.ಕೃಷ್ಣಪ್ಪ ಎಂಬುವವರು ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ರಾಗಿ ಬೆಳೆಯನ್ನು ಬೆಳೆದು ಅಕ್ರಮವಾಗಿ ಲಪಟಾಯಿಸುತ್ತಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲವೆಂದು ಆಕ್ರೊಶ ವ್ಯಕ್ತಪಡಿಸಿದರು.
ಬಿಜ್ಜವಾರ ಗ್ರಾಮದ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ಮೊನ್ನೆಯಷ್ಟೇ ಈ ಜಾಗದ ಉಳಿವಿಗೆ ಜಿಲ್ಲಾಧಿಕಾರಿಗಳ ಬಳಿ ಹೋಗಲಾಗಿದೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಮೊಬೈಲ್ ಕರೆ ಮಾಡಿ ವಿಚಾರಿಸಿದಾಗ ಈ ಸಂಬAಧ ತಹಶೀಲ್ದಾರ್ ಅವರು ಗ್ರಾಮಸ್ಥರ ಪರವಾಗಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ಇದು ಸರಕಾರಿ ಜಾಗವಾಗಿದೆ ಶಾಲೆಗೆ ಮಂಜೂರಾಗಿರುತ್ತದೆ. ಅದರಲ್ಲಿ 6.35ಎಕರೆಯಷ್ಟು ಶಾಲಾ ಜಾಗವಾಗಿದೆ. ಉಳಿಕೆ 5.10ಗುಂಟೆ ಖಾಸಗಿಯವರಿಗೆ ಮಂಜೂರಾಗಿರುತ್ತದೆ. ವಿ.ಕೃಷ್ಣಪ್ಪ ಅವರಿಗೆ 1 ಎಕರೆ ಮಂಜೂರಿಯಾಗಿರುತ್ತದೆ. 53 ನಮೂನೆ ಅರ್ಜಿ ಹಾಕಿಕೊಂಡಿದ್ದೇನೆ ಎಂದು ಒಂದು ಎಕರೆಗೂ ಹೆಚ್ಚಿನ ಜಾಗವು ನಮ್ಮದು ಎಂದು ಹೋರಾಟ ಮಾಡುತ್ತಿದ್ದಾರೆ. ಈ ಸಂಬAಧ ಎಲ್‌ಎನ್‌ಡಿ ಶಾಖೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಯಾವುದೇ ಅರ್ಜಿ ಸಲ್ಲಿಸಿರುವ ಬಗ್ಗೆ ದಾಖಲೆ ಕಂಡುಬAದಿರುವುದಿಲ್ಲ. ಇಲ್ಲಿ ಉಳಿಕೆ ಜಾಗವೂ ಸಹ ಯಾವುದೂ ಇಲ್ಲ. ಕೂಡಲೇ ಸಂಬAಧಪಟ್ಟ ಕಂದಾಯ ಇಲಾಖಾಧಿಕಾರಿಗಳು ಸರಕಾರಿ ಜಾಗವನ್ನು ಉಳಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮವಹಿಸಿ, ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಲು ಈಗಾಗಲೇ ಸರ್ವೆಯರ್‌ನಿಂದ ಸರ್ವೆ ಕಾರ್ಯ ನಡೆದಿದೆ. ಒಂದು ದಿನದಲ್ಲಿ ಶಾಲಾ ಜಾಗದ ಒತ್ತುವರಿ ತೆರವುಗೊಳಿಸಲು ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ ಎಂದರು.
ಪ್ರಭಾರ ರಾಜಸ್ವನಿರೀಕ್ಷಕ ಕುಮಾರ್ ಮಾತನಾಡಿ, ಬಿಜ್ಜವಾರ ಗ್ರಾಮದ ಸರ್ವೆ ನಂ.16 ಗೋಮಾಳದ ಜಮೀನಾಗಿದೆ. ಸರಕಾರಿ ಫ್ರೌಢ ಶಾಲೆಗೆ ಜಿಲ್ಲಾಧಿಕಾರಿಗಳ ಆದೇಶಂತೆ 6.30 ಎಕರೆಯಷ್ಟು ಸರಕಾರಿ ಜಾಗವನ್ನು ಮಂಜೂರು ಮಾಡಲಾಗಿದೆ. ಸರಕಾರಿ ಶಾಲೆಗೆ ಖಾತೆಯೂ ಸಹ ಆಗಿದೆ. ವಿ.ಕೃಷ್ಣಪ್ಪ ಅವರು ಒತ್ತುವರಿ ಮಾಡಿಕೊಂಡಿರುವ ಸರ್ವೆ ನಡೆಸಲಾಗುತ್ತಿದೆ. ಸರ್ವೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಗ್ರಾಮಸ್ಥರ ಮನವಿ ಮೆರೆಗೆ ದೇವನಹಳ್ಳಿ ತಹಶೀಲ್ದಾರ್ ಅವರ ನಿರ್ದೇಶನದಂತೆ ಜಾಗದ ಅಳತೆ ಮಾಡಿ, ಒತ್ತುವರಿ ತೆರವುಗೊಳಿಸಿ, ಜಾಗವನ್ನು ಶಾಲೆಗೆ ಉಳಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಎಂಪಿಸಿಎಸ್ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ಜೋತಪ್ಪ, ಲಕ್ಷö್ಮಣ, ದೇವರಾಜು, ರಾಮಕೃಷ್ಣಪ್ಪ, ಮುನಿಶಾಮಪ್ಪ, ರಾಜಣ್ಣ, ಶ್ರೀನಿವಾಸ್, ಗ್ರಾಮಸ್ಥರು ಇದ್ದರು.
ಚಿತ್ರ: 13 ಡಿಹೆಚ್‌ಎಲ್ ಪಿ2
ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಪಂ ವ್ಯಾಪ್ತಿಯ ಬಿಜ್ಜವಾರ ಗ್ರಾಮದಲ್ಲಿರುವ ಸರ್ವೆ ನಂ.16ರಲ್ಲಿರವ ಸರಕಾರಿ ಗೋಮಾಳದ ಜಾಗದ ಉಳಿವಿಗೆ ಗ್ರಾಮಸ್ಥರು ಹೋರಾಟ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments