Wednesday, May 1, 2024
spot_img
HomeChikballapurಸಾಧನೆಯ ಹಾದಿಯಲ್ಲಿ ಅಂಗವೈಫಲ್ಯ ಕಾರಣವಾಗಬಾರದು : ವಿ.ಶಾಂತಕುಮಾರ್ ೨ನೇ ವರ್ಷದ ವಿಕಲಚೇತನರ ವಾರ್ಷಿಕೋತ್ಸವ ಸಮಾರಂಭ

ಸಾಧನೆಯ ಹಾದಿಯಲ್ಲಿ ಅಂಗವೈಫಲ್ಯ ಕಾರಣವಾಗಬಾರದು : ವಿ.ಶಾಂತಕುಮಾರ್ ೨ನೇ ವರ್ಷದ ವಿಕಲಚೇತನರ ವಾರ್ಷಿಕೋತ್ಸವ ಸಮಾರಂಭ

ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ: ಸಾಧನೆಯ ಹಾದಿಯಲ್ಲಿ ಅಂಗವೈಫಲ್ಯ ಮುಖ್ಯ ಕಾರಣವಾಗಬಾರದು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ದೇವನಹಳ್ಳಿ ಪಟ್ಟಣದ ತಾಲೂಕು ಆಡಳಿತ ಕಚೇರಿಯ ಮುಂಭಾಗದಲ್ಲಿ ವಿಕಲಚೇತನರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ೨ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.ಅಂಗವೈಫಲ್ಯವಾಗಿದೆ ಎಂಬುವುದರ ಭಾವನೆಯನ್ನು ಬಿಡಬೇಕು. ನಾವೆಲ್ಲರೂ ಮನುಷ್ಯರೇ ಎಂಬ ಭಾವನೆಯಿಂದ ಬದುಕು ಕಟ್ಟಿಕೊಳ್ಳಬೇಕು. ಸಾಧನೆಗೆ ಅಂಗವಿಕಲತೆಯೊoದೇ ಕಾರಣವಾಗಬಾರದು. ಎಂತಹAತವರು ಎಂತೆAತಹ ಸಾಧನೆಯನ್ನು ಮಾಡಿದ್ದಾರೆ. ಎಲ್ಲರೂ ಚೆನ್ನಾಗಿಯೇ ಇದ್ದೇವೆ ಎಂಬ ಭಾವನೆಯಲ್ಲಿ ಜೀವನ ಮಾಡಬೇಕು. ಯಾವುದೇ ಯೋಚನೆ ಮಾಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು.
ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಇಂತಹ ಕಾರ್ಯಕ್ರಮವನ್ನು ಮಾಡುತ್ತಿರುವುದು ಶ್ಲಾಘನೀಯವಾದದ್ದು, ಸಾಧನೆ ಮಾಡಲು ಎಲ್ಲರೂ ದೃಢ ನಿರ್ಧಾರದಿಂದ ಮುನ್ನಡೆಯಬೇಕು. ವಿಶೇಷಚೇತನರ ಪರವಾಗಿ ಸರಕಾರಗಳು ಇರಬೇಕು. ಸಾಮಾಜಿಕ ಕಳಕಳಿ ಇರುವಂತಹ ಸಮಾಜಸುಧಾರಕರು, ಸಾಮಾಜಿಕ ಕಳಕಳಿಯುಳ್ಳವರು ವಿಕಲಚೇತನರಿಗೆ ಬೆನ್ನೆಲುಬಾಗಿರಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತಕುಮಾರ್ ಅವರ ಸುಪುತ್ರಿ ತ್ರಿಶಾಂತ್‌ಕುಮಾರಿ ಅವರ ಹುಟ್ಟುಹಬ್ಬದ ಅಂಗವಾಗಿ ನೆರೆದಿದ್ದ ವಿಕಲಚೇತನರಿಗೆ ಆಹಾರದ ದಿನಸಿಕಿಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ೨೦೨೩ರ ನೂತನ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು.
ಈ ವೇಳೆಯಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎಸ್.ರವಿಕುಮಾರ್, ಪುರಸಭಾಧ್ಯಕ್ಷೆ ಗೋಪಮ್ಮ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಟೌನ್ ಅಧ್ಯಕ್ಷ ಮುನಿನಂಜಪ್ಪ, ಮುಖಂಡ ಲಚ್ಚಿ, ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ, ಜಿಪಂ ಮಾಜಿ ಅಧ್ಯಕ್ಷೆ ಅನಂತಕುಮಾರಿ, ಗುತ್ತಿಗೆದಾರ ಬಚ್ಚೇಗೌಡ, ಗೌರಮ್ಮ ಶಾಂತಕುಮಾರ್, ವಿಕಲಚೇತನರ ಕ್ಷೇಮಾಭಿವೃದ್ಧಿ ಟ್ರಸ್ಟ್ನ ತಾಲೂಕು ಅಧ್ಯಕ್ಷ ಸುರೇಶ್, ಹಾಗೂ ಹಲವಾರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments