Monday, March 4, 2024
spot_img
HomeChikballapurಜನಪದ ಕಲೆ ಉಳಿದರೆ ಸಂಸ್ಕೃತಿ ಜೀವಂತ

ಜನಪದ ಕಲೆ ಉಳಿದರೆ ಸಂಸ್ಕೃತಿ ಜೀವಂತ

ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ: ಗ್ರಾಮೀಣ ಸೊಗಡನ್ನು ಮೇಳೈಸಿಕೊಂಡಿರುವ ಜನಪದ ಕಲೆಗಳು ಉಳಿದಾಗ ಮಾತ್ರ ನಮ್ಮ ಸಂಸ್ಕöÈತಿ ಮತ್ತು ಪರಂಪರೆ ಉಳಿಯುತ್ತದೆ ಎಂದು ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಗೌಡ ಅಭಿಪ್ರಾಯಪಟ್ಟರು.
ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಳ್ಳಿ ಜನಪದ ಸಹೃದಯ ಕಲಾವೇದಿಕೆ ವತಿಯಿಂದ ಆಯೋಜಿಸಿದ್ದ ಜನಪದ ಝೇಂಕಾರ ಕಾರ್ಯಕ್ರಮದಲ್ಲಿ ಜನಪದ ಕಲಾವಿದರನ್ನು ಅಭಿನಂದಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕöÈತಿಯನ್ನು ಬಿಂಬಿಸುವ ಜನಪದ ಕಲಾ ಸಂಪತ್ತನ್ನು ಉಳಿಸಿ, ಬೆಳೆಸುವ ಕಾರ್ಯ ಸರಕಾರ ಮತ್ತು ಸಂಘ-ಸAಸ್ಥೆಗಳಿAದ ಆಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಬಹಳ ಅರ್ಥಪೂರ್ಣವಾದದ್ದು, ಕಲೆಗಳನ್ನು ಪ್ರೋತ್ಸಾಹಿಸುವುದು ಮತ್ತು ಬೆಂಬಲಿಸುವುದು ಪ್ರತಿ ನಾಗರೀಕರ ಆದ್ಯ ಕರ್ತವ್ಯವಾಗಿದೆ. ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಲವು ಕಲಾವಿದರು ಇಂದು ರಾಜಕೀಯ ವ್ಯಕ್ತಿಗಳ ದಾಳಗಳಾಗಿ ಬಳಕೆಯಾಗುತ್ತಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದರು.
ಹಳ್ಳಿ ಜನಪದ ಸಹೃದಯ ಕಲಾವೇದಿಕೆ ಕಾರ್ಯದರ್ಶಿ ಕಲಾವಿದ ಹೊಸಳ್ಳಿ ವಾಸುದೇವ್ ಮಾತನಾಡಿ, ಮೇಲ್ವರ್ಗದವರ ಶಿಷ್ಟ ಕಲೆಗಳಿಗೆ ಸಿಗುತ್ತಿರುವ ಮಾನ್ಯತೆ ಕೆಳವರ್ಗದವರ ಸ್ವತ್ತಾದ ಜನಪದ ಕಲೆಗಳಿಗೆ ಸಿಗುತ್ತಿಲ್ಲ. ಆದರೆ ಜನಪದ ಕಲೆಗಳಿಗೆ ಸಾವಿಲ್ಲ. ಆಧುನಿಕ ರೀತಿ-ನೀತಿಗಳ ನಡುವೆ ಕಾಲಕ್ಕೆ ತಕ್ಕಂತೆ ಈ ಕಲೆಗಳು ತಮ್ಮ ಸ್ವರೂಪ ಬದಲಿಸಿಕೊಳ್ಳುತ್ತಿವೆ. ಇದರಿಂದಾಗಿ ಅಧ್ಯಯನಕಾರರಿಗೆ ಮೂಲ ಕಲೆಗಳ ಮಾಹಿತಿ ಕೊರತೆಯಿಂದ ಸಂಶೋಧನೆಗೆ ತೊಡಕಾಗುತ್ತಿದೆ. ಆದ್ದರಿಂದ ಸರಕಾರ ಮತ್ತು ಸಂಘ-ಸAಸ್ಥೆಗಳು ಜನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಾದ ಅನಿವಾರ್ಯವಾಗಿದೆ. ಕಲಾವಿದರಿಗೆ ಸರಕಾರ ನೀಡುವ ಪ್ರಶಸ್ತಿಗಳಲ್ಲಿ ತಾರತಮ್ಯ ಮಾಡದೆ ಜಾನಪದ ಕಲಾವಿದರಿಗೂ ಅಗತ್ಯ ಮನ್ನಣೆ ನೀಡುತ್ತಾ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಬಾಕ್ಸ್
ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕöÈತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ.

  • ಚಂದ್ರಪ್ಪ.ಎಸ್.ಸಿ | ಗೌರವಾಧ್ಯಕ್ಷರು, ಹಳ್ಳಿ ಜನಪದ
    ಇದೇ ಸಂದರ್ಭದಲ್ಲಿ ತಾಲೂಕಿನ ಹಿರಿಯ ಜನಪದ ಕಲಾವಿದರಾದ ಮುನಿಶಾಂಪ್ಪ, ರಾಜಣ್ಣ ಅವರನ್ನು ಗುರ್ತಿಸಿ ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಾಘವೇಂದ್ರ.ಬಿ.ಸಿ, ಉಪನ್ಯಾಸಕ ಮಂಜುನಾಥ್, ಅಧ್ಯಕ್ಷ ಎ.ಆನಂದ, ಕರವೇ ಸಂಘಟನೆಯ ಗೌರವಾಧ್ಯಕ್ಷ ಚಂದ್ರಶೇಖರ್, ಹಿರಿಯ ರಂಗಭೂಮಿ ಕಲಾವಿದ ಡಾ.ರಬ್ಬನಹಳ್ಳಿ ಕೆಂಪಣ್ಣ, ವಾದ್ಯಗೋಷ್ಠಿಯ ಕಿರಣ್, ಗಂಗಾಧರ್, ನಾಗರಾಜ್, ನಿರ್ಮಲ, ಕಲಾವಿದರು, ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಇತರರು ಇದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments