Wednesday, April 24, 2024
spot_img
HomeChikballapur22 ಸಾವಿರ ಫಲಾನುಭವಿಗಳಿಗೆ ಉಚಿತ ನಿವೇಶನ ಹಂಚಿಕೆ ಅಂಗರೇಖನಹಳ್ಳಿ ವಿಶೇಷ ಗ್ರಾಮಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ....

22 ಸಾವಿರ ಫಲಾನುಭವಿಗಳಿಗೆ ಉಚಿತ ನಿವೇಶನ ಹಂಚಿಕೆ ಅಂಗರೇಖನಹಳ್ಳಿ ವಿಶೇಷ ಗ್ರಾಮಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಘೋಷಣೆ

ಪಾಲಾರ್ ಪತ್ರಿಕೆ | Palar Pathrike

ಚಿಕ್ಕಬಳ್ಳಾಪುರ: ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಏಕ ಕಾಲದಲ್ಲಿ 22 ಸಾವಿರ ನಿವೇಶನಗಳನ್ನು ವಸತಿ ರಹಿತರಿಗೆ ವಿತರಿಸುವ ಭಾಗ್ಯ ತಮಗೆ ಒದಗಿಬಂದಿದ್ದು, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಸ್ವಂತ ಸೂರು ಹೊಂದುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದರು.ತಾಲೂಕಿನ ಅಂಗರೇಖನಹಳ್ಳಿಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಪಂಗೆ 100 ಮನೆಗಳಂತೆ ನೀಡಲಾಗುತ್ತಿದ್ದು, ಅದೇ ರಿತಿಯಲ್ಲಿ ಪ್ರತಿ ಗ್ರಾಮದಲ್ಲಿಯೂ ನಿವೇಶನ ರಹಿತರನ್ನು ಗುರ್ತಿಸಿ ಎಲ್ಲರಿಗೂ ಉಚಿತವಾಗಿ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಎಲ್ಲರಿಗೂ ನಿವೇಶನ ಮತ್ತು ಮನೆ ನೀಡಲಾಗುವುದು ಎಂದು ಅವರು ಹೇಳಿದರು.
ನೀಡಿದ ಭರವಸೆಗಳು ಈಡೇರಿವೆ
ಕಳೆದ ಎರಡು ವರ್ಷಗಳ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ ಸಂತೃಪ್ತಿ ಇದೆ. ಆಗ ಕ್ಷೇತ್ರಕ್ಕೆ ಯಾವುದೇ ಮೂಲದಿಂದಲಾದರೂ ನೀರು ನೀಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಎಚ್ಎನ್ ವ್ಯಾಲಿ ಮೂಲಕ ಕ್ಷೇತ್ರದ ಎಲ್ಲ ಕರೆಗಳಿಗೆ ನೀರು ಹರಿಸಲಾಗಿದ್ದು, ಇದರ ಜೊತೆಗೆ ವರುಣನ ಕೃಪೆಯೂ ತೋರಿದ ಕಾರಣ ಜಿಲ್ಲೆ ಈಗ ಸಮೃದ್ಧಿಯಾಗಿದೆ ಎಂದರು.ಮತ್ತೊಂದು ಭರವಸೆ ಎಂದರೆ ಬಡವರಿಗೆ ಮುಂದಿನ ಚುನಾವಣೆ ಒಳಗೆ ನಿವೇಶನ ಮತ್ತು ಮನೆ ನೀಡುವುದಾಗಿ ಹೇಳಿದ್ದು, ಅದರಂತೆ ಪ್ರಸ್ತುತ ಕ್ಷೇತ್ರದಾದ್ಯಂತ 22 ಸಾವಿರ ನಿವೇಶನಗಳನ್ನು ನೀಡಲಾಗುತ್ತಿದೆ ಎಂದರು. ಇಷ್ಟು ಪ್ರಮಾಣದ ನಿವೇಶನಗಳಿಗೆ ಜಮೀನು ಗುರ್ತಿಸುವ ಜೊತೆಗೆ ಅವುಗಳನ್ನು ಬಡವರಿಗೆ ವಿತರಿಸಲು ಅಧಿಕಾರಿಗಳ ಸಹಕಾರ ಪ್ರಮುಖ ಪಾತ್ರ ವಹಿಸಿದೆ. ಈ ವಿಚಾರ ಸಂಪುಟ ಸಭೆಯಲ್ಲಿಯೇ ಆಶ್ಚರ್ಯ ತಂದ ವಿಚಾರವಾಗಿದೆ ಎಂದು ಹೇಳಿದರು.
ನಿವೇಶನಕ್ಕಿಂತ ಫಲಾನುಭವಿಗಳು ಕಡಿಮೆ!
ಅಂಗರೇಖನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ನಿವೇಶನ ರಹಿತರಿಗೆ ನಿವೇಶನಗಳನ್ನು ಉಚಿತವಾಗಿ ವಿತರಿಸಲು ಈಗಾಗಲೇ 479 ನಿವೇಶನಗಳನ್ನು ಗುರ್ತಿಸಲಾಗಿದೆ. ಆದರೆ ಈ ಗ್ರಾಪಂ ವ್ಯಾಪ್ತಿಯ ಕೇವಲ 252 ಕುಟುಂಬಗಳಿಗೆ ಮಾತ್ರ ನಿವೇಶನದ ಅಗತ್ಯವಿದೆ. ಹಾಗಾಗಿ ಇರುವ ನಿವೇಶನಗಳಿಗಿಂತ ಫಲಾನುಭವಿಗಳ ಕೊರತೆ ಇದೆ. ಪಿಡಿಒ ಅವರು ಕೂಡಲೇ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ, ಉಳಿದಿರುವ  ನಿವೇಶನ ರಹಿತರನ್ನು ಗುರ್ತಿಸಿ, ಅವರನ್ನೂ ಪಟ್ಟಿಯಲ್ಲಿ ಸೇರಿಸಿದರೆ ಮುಂದಿನ ಒಂದು ತಿಂಗಳಲ್ಲಿ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದರು.ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಗಳ ಹಕ್ಕುಪತ್ರ ಮತ್ತು ಮನೆಗಳನ್ನು ನಿರ್ಮಿಸಿಕೊಳ್ಳಲು ಆದೇಶಪತ್ರಗಳನ್ನು ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ವಿತರಿಸಲಾಗುವುದು. ಇದು ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಹಂಚಲಾಗುವುದು. ಈವರೆಗೆ ಯಾವುದೇ ಸರ್ಕಾರ ಅಥವಾ ನಾಯಕ ಮಾಡದ ಕೆಲಸ ಇದಾಗಿದ್ದು, ನಿಮ್ಮೆಲ್ಲರ ಹಿತವೇ ನನಗೆ ಮುಖ್ಯ ಎಂಬುದು ಇದರಿಂದ ಸಾಬೀತಾಗಲಿದೆ ಎಂದು ಸಚಿವರು ಹೇಳಿದರು.
ಮನೆ ಮನೆಗೆ ನಲ್ಲಿ ನೀರು
ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಹಾಗಾಗಿಯೇ ಸ್ವಚ್ಛ ಭಾರತ್ ಯೋಜನೆಯಡಿ ದೇಶದ 12 ಕೋಟಿ ಜನರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಅನುದಾನ ನೀಡಲಾಗಿದೆ. ಇದು ಮಹಿಳೆಯರ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಇದರಿಂದ ಮಹಿಳೆಯರು ನಾಗರಿಕ ಸಮಾಜದಲ್ಲಿ ಸ್ವಾಭಿಮಾನದಿಂದ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.ಅದೇ ಮಾದರಿಯಲ್ಲಿ ಉಜ್ವಲ ಯೋಜನೆಯಡಿ 8 ಕೋಟಿ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸ್ಟೌವ್ ವಿತರಿಸಲಾಗಿದೆ. ಇದರಿಂದ ಸೌದೆ ತಂದು ಅಡುಗೆ ಮಾಡಬೇಕಾದ ಸಮಸ್ಯೆಯಿಂದ ಮಹಿಳೆಯರು ಮುಕ್ತರಾಗಿ ಅಡುಗೆ ಅನಿಲದಿಂದ ಅಡುಗೆ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದರು.ಇವುಗಳ ಜೊತೆಗೆ ಪ್ರಸ್ತುತ ಮನೆ ಮನೆಗೆ ನಲ್ಲಿ ನೀರು ನೀಡುವ ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಮಾಡಲಾಗುತ್ತಿದೆ. ಇದರಿಂದ ಬಡವರು ದೂರದಿಂದ ನೀರು ಹೊತ್ತು ತರುವ ಸಮಸ್ಯೆಗೆ ತಡೆ ಬೀಳಲಿದೆ. ಈವರೆಗೆ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದ್ದ ಕಾರಣ ಎಲ್ಲ ಗ್ರಾಮಗಳಲ್ಲಿಯೂ ಈ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲ ಕಡೆಯೂ ನೀರು ಪುಷ್ಕಳವಾಗಿ ಇರುವುದರಿಂದ ಎಲ್ಲ ಗ್ರಾಮಗಳಿಗೂ ಈ ಯೋಜನೆ ನೀಡುವುದಾಗಿ ಸಚಿವರು ಹೇಳಿದರು.
ಗ್ಯಾಸ್ ಸ್ಟೌವ್ ಮತ್ತು ಕುಕ್ಕರ್ ಪಡೆಯಿರಿ!
ಜ.7ರಿಂದ ಚಿಕ್ಕಬಳ್ಳಾಪುರದಲ್ಲಿ ಉತ್ಸವ ನಡೆಯುತ್ತಿದ್ದು, ಒಂದು ವಾರದ ಕಾಲ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಇದಕ್ಕೆ ಪ್ರತಿ ಗ್ರಾಮದ ಎಲ್ಲರ ಸಹಕಾರ ಅಗತ್ಯವಿದೆ. ಜ.11ರಂದು ಊರ ಹಬ್ಬ ನಡೆಯಲಿದ್ದು, ಪ್ರತಿ ಗ್ರಾಮದಲ್ಲಿಯೂ ಸಂತಸ ವ್ಯಕ್ತಪಡಿಸುವ ದಿನವಾಗಬೇಕು ಎಂದು ಸಚಿವರು ಕರೆ ನೀಡಿದರು. ಅಲ್ಲದೆ ಜ.14ರಂದು ನಿಮ್ಮೆಲ್ಲರ ನೆಚ್ಚಿನ ರಂಗೋಲಿ ಸ್ಪರ್ಧೆ ಆಯೋಜಿಸಲಾಗುವುದು ಎಂದು ಹೇಳಿದರು.ಈ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಮಹಿಳಾ ಸ್ಪರ್ಧೆಗಳಿಗೂ ತಲಾ ಒಂದು ಗ್ಯಾಸ್ ಸ್ಟೌವ್ ಮತ್ತು ಕುಕ್ಕರ್ ನೀಡಲಾಗುವುದು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ, ಸ್ಟೌವ್ ಪಡೆಯುವಂತೆ ಸಚಿವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಕೃಷ್ಣಪ್ಪ, ಗ್ರಾಪಂ ಅಧ್ಯಕ್ಷ ಗಣೇಶ್, ಗ್ರಾಪಂ ಉಪಾಧ್ಯಕ್ಷ ಭವಾನಿ ರಾಘವೇಂದ್ರ, ನರಸರೆಡ್ಡಿ, ಶ್ರೀಧರ್, ಮಹೇಶ್, ಚನ್ನಕೇಶವಮೂರ್ತಿ, ರಾಮಾಂಜಿ, ಸೀತರೆಡ್ಡಿ, ಇಒ ಮಂಜುನಾಥ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ನರಸಿಂಹರಾಜು, ಗೋಪಾಲ್, ರವಿ, ಮೋಹನ್ ಸೇರಿದಂತೆ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments