Thursday, May 23, 2024
spot_img
HomeChamarajanagarಬಿಜೆಪಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪಕ್ಷ: ನಿವೃತ್ತ ಐಎಫ್‌ಎಸ್ ಅಧಿಕಾರಿ ರಾಜು

ಬಿಜೆಪಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪಕ್ಷ: ನಿವೃತ್ತ ಐಎಫ್‌ಎಸ್ ಅಧಿಕಾರಿ ರಾಜು

ಪಾಲಾರ್ ಪತ್ರಿಕೆ | Palar Pathrike

ಚಾಮರಾಜನಗರ: ಭಾರತೀಯ ಜನತಾ ಪಕ್ಷವು ಇತಿಹಾಸ ಇರುವ ರಾಷ್ಟ್ರೀಯ ಪಕ್ಷವಾಗಿದ್ದು ದೇಶದ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದು ನಿವೃತ್ತ ಐಎಫ್ಎಸ್ ಅಧಿಕಾರಿ ರಾಜು ಹೇಳಿದರು
ನಗರದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿಗೆ ತೆರಳಿ ನೂತನ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ನಾರಾಯಣ್ ಪ್ರಸಾದ್ ಅವರನ್ನು ಗೌರವಿಸಿ ಮಾತನಾಡಿದ ಅವರು ಕಳೆದ 5 ವರ್ಷಗಳಿಂದ ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ನನ್ನ ಭಾಗ್ಯ ಎಂದರು
ಬಿ.ಜೆ.ಪಿ ಅಧಿಕಾರಕ್ಕೆ ಬಂದ ನಂತರ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಯಾವುದೇ ಪಕ್ಷ ಬೆಳೆಯ ಬೇಕಾದರೆ ಅದರ ಗುರಿ ಜನರ ಅಭಿವೃದ್ದಿಯಾಗಿರಬೇಕು ಈ ನಿಟ್ಡಿನಲ್ಲಿ ಕಳೆದ 10 ವರ್ಷದಲ್ಲಿ ಭಾರತೀಯ ಜನತಾ ಪಕ್ಷ ಶ್ರಮಿಸುತ್ತಿದೆ ಎಂದರು
ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರಾಗಿರುವ ನಾರಯಣ್ ಪ್ರಸಾದ್ ಅವರು ಪರಿಸರ ಪ್ರೇಮಿಯಾಗಿದ್ದಾರೆ ಅವರು ರೋಟರಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಆರಣ್ಯ ಹಾಗು ಪರಿಸರ ಸಂರಕ್ಷಣೆ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಇವರ ಅವಧಿಯಲ್ಲಿ ಉತ್ತಮ ಕೆಲಸಗಳಾಗಿ ಪಕ್ಷ ಹಾಗು ಜಿಲ್ಲೆ ಅಭಿವೃದ್ಧಿ ಹೊಂದಲಿ ಎಂದು ಅವರು ಆಶಿಸಿದರು

.
ಗೌರವ ಸ್ವೀಕರಿಸಿದ ನಾರಾಯಣ್ ಪ್ರಸಾದ್ ಮಾತನಾಡಿ ಜಿಲ್ಲೆಯ ಅಭಿವೃದ್ದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಆರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ನಿರ್ವಹಿಸಿ ನಿವೃತ್ತರಾಗಿರುವ ರಾಜು ಅವರು ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಬಂಡಿಪುರ ಆರಣ್ಯದಲ್ಲಿ ರಾತ್ರಿಯ ವೇಳೆ ವಾಹನ ಸಂಚಾರ ನಿಷೇಧ ಮಾಡಲು ಇವರ ಪಾತ್ರ ಬಹಳವಿದೆ. ಎಷ್ಟೋ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆಯಾಗಿದ್ದಾರೆ ಇವರು ನಮ್ಮ ಪಕ್ಷದ ಕಾರ್ಯಕರ್ತರಾಗಿ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡರಾದ ನಗರ ಮಂಡಲ ಅಧ್ಯಕ್ಷ ರಾಜು, ಮಾಜಿ ನಗರ ಸಭಾ ಅಧ್ಯಕ್ಷ ಸುರೇಶ್‌ನಾಯಕ, ಮಹದೇವನಾಯಕ, ಮಾಜಿ ನಗರಸಭಾ ಸದಸ್ಯ ಶಿವಣ್ಣ ರಾಮಸಮುದ್ರ ಶಿವು, ಸಿದ್ದಯಪುರ ಶಿವರಾಜು, ದೇಶಿಗೌಡನಪುರ ಪರಶಿವಮೂರ್ತಿ, ಕೊಳ್ಳೇಗಾಲದ ಶೇಖರ್‌ಬುದ್ದ
ಮಾಜಿ ನಗರಸಭಾ ಸದಸ್ಯ ಬಸವರಾಜು ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments