Tuesday, April 23, 2024
spot_img
HomeRamnagarಮಹಿಳೆಯನ್ನ ಸಮಾಜದಲ್ಲಿ ದ್ವಿತೀಯ ದರ್ಜೆ ಪ್ರಜೆಯಾಗಿ ನೋಡಲಾಗುತ್ತಿದೆ

ಮಹಿಳೆಯನ್ನ ಸಮಾಜದಲ್ಲಿ ದ್ವಿತೀಯ ದರ್ಜೆ ಪ್ರಜೆಯಾಗಿ ನೋಡಲಾಗುತ್ತಿದೆ

ಪಾಲಾರ್ ಪತ್ರಿಕೆ | Palar Pathrike

ಕನಕಪುರ: ಸಂವಿಧಾನ ದತ್ತವಾಗಿ ಎಲ್ಲಾ ರೀತಿಯ ಹಕ್ಕುಗಳಿಗೆ ಮಹಿಳೆಯೂ ಅರ್ಹಳಾಗಿದ್ದರೂ ಸಮಾಜದಲ್ಲಿ ಆಕೆಯನ್ನು ದ್ವಿತೀಯ ದರ್ಜೆ ಪ್ರಜೆಯಾಗಿ ನೋಡಲಾಗುತ್ತಿದೆ ಎಂದು ಬೆಂಗಳೂರು ಕಾಲೇಜಿನ ಉಪನ್ಯಾಸಕಿ ದೀಪಹಾವೇರಿ ಬೇಸರ ವ್ಯಕ್ತಪಡಿಸಿದರು.

ಶಿವನಹಳ್ಳಿ ಕಿತ್ತೂರು ರಾಣಿ ವಸತಿ ಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಅಂತರ ರಾಷ್ಟಿçÃಯ ಮಹಿಳಾ ದಿನಾಚರಣೆ ಹಾಗು ಮಹಿಳಾ ಸಾಧಕಿಯರಿಗೆ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ದೇಶದ ಸ್ವತಂತ್ರಪೂರ್ವದಲ್ಲಿ ಹಾಗು ಸ್ವಾತಂತ್ರ ನಂತರದಲ್ಲಿಯೂ ಮಹಿಳೆ ದೇಶದ ವಿವಿಧ ಕ್ಷೇತ್ರಗಳಿಗೆ ಅನೇಕ ಕೊಡುಗೆಗಳನ್ನು ನೀಡುತ್ತಿದ್ದಾಳೆ ಕೂಡ. ಭಾರತಾಂಬೆಯ ಹೆಸರಿನಿಂದ ಹಿಡಿದು ದೇಶದ ಬಹುತೇಕ ಪುಣ್ಯ ಸ್ಥಳಗಳು ಸ್ತಿçÃಯರ ಹೆಸರಿನಿಂದಲೇ ಕರೆಯಲ್ಪಡುವ ಮೂಲಕ ಮಹಿಳೆಗೆ ಗೌರವ ಸೂಚಿಸಿವೆ. ಇಂತಹ ಶಾಂತಿಪ್ರಿಯ ಹಾಗು ಸ್ತಿçÃಯರ ಬಗ್ಗೆ ಅಪಾರ ಗೌರವ ಹೊಂದಿರುವ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಸಮಾನತೆ ಕಾಣಬೇಕು ಎನ್ನುವ ನಿಟ್ಟಿನಲ್ಲಿ ಸ್ವತಂತ್ರ ಪೂರ್ವದಲ್ಲಿಯೇ ಬುದ್ಧ, ಬಸವ, ಅಂಬೇಡ್ಕರ್‌ರAತಹ ಮಹಾಪುರುಷರು ಮಹಿಳೆಯನ್ನು ಸಮನಾಗಿ ಕಾಣಲು ಪ್ರಯತ್ನ ಮಾಡಿದ್ದರು ಎಂದರು.

ಕಸಪಾ ತಾಲೂಕು ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಹೆಣ್ಣುಮಕ್ಕಳನ್ನು ಮುಂದೆ ತರುವ ನಿಟ್ಟಿನಲ್ಲಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಪ್ರಾಥಮಿಕ ಹಂತದಲ್ಲಿಯೆ ಹೆಣ್ಣುಮಕ್ಕಳಿಗೆ ಗುಣಮಟ್ಟದ ವಿದ್ಯೆ ನೀಡಬೇಕೆಂಬ ದಿಸೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಪ್ರಾರಂಭ ಮಾಡಲಾಗಿದೆ. 20 ಮಕ್ಕಳಿಂದ ಪ್ರಾರಂಭವಾದ ಈ ಶಾಲೆಯಲ್ಲಿ ಇಂದು 300 ಮಕ್ಕಳು ಕಲಿಯುವಂತಾಗಿದೆ. ಬಡಮಕ್ಕಳು ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆಯಬೆಕು. ಇದರಿಂದ ತಮ್ಮ ಕುಟುಂಬದ ಬಡತನವನ್ನು ದೂರ ಮಾಡಿಕೊಂಡು ಉತ್ತಮ ಜೀವನ ಸಾಗಿಸಬೇಕು. ಬಡವರು ಬಡವರಾಗಿಯೇ ಇರಬಾರದು. ಬಡವರು ಆರ್ಥಿಕವಾಗಿ ಸ್ವಾವಲಂಬಿಗಳಾದರೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣ ಇಲ್ಲದವರ ಬದುಕು ಕತ್ತಲೆಯಲ್ಲಿ ಬದುಕು ಸಾಗಿಸಿದಂತಹ ಸ್ಥಿತಿಯಂತಾಗುತ್ತದೆ. ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ಪೋಷಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಚಿಕ್ಕತಾಯಮ್ಮ ಕೆಂಪೇಗೌಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಾಹಿತಿ ಕೂಗಿ ಗಿರಿಯಪ್ಪ, ಪ್ರಾಂಶುಪಾಲೆ ಟಿ.ಕುಮಾರಿ ರವರು ಮಾತನಾಡಿ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ನಡೆಸಿ ಜ್ಞಾನಾರ್ಜನೆಗೊಳಿಸುವಂತೆ ಕಿವಿಮಾತು ಹೇಳಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರಾದ ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಕಮಲಮ್ಮ, ನಿವೃತ್ತ ಅಂಗನವಾಡಿ ಸಹಾಯಕಿ ರಾಜಮ್ಮ, ಶಿಕ್ಷಕಿ ಸಾಕಮ್ಮ, ರಾಷ್ಟಿçÃಯ ಕಬ್ಬಡ್ಡಿ ಕ್ರೀಡಾಪಟು ಕು.ನಿಖಿತ, ಅಂಗನವಾಡಿ ಕಾರ್ಯಕರ್ತೆ ಸಾಕಮ್ಮರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾ.ಪಂ. ಮಾಜಿ ಅಧ್ಯಕ್ಷೆಯರಾದ ರಾಜೇಶ್ವರಿ ವೀರಪ್ಪ, ಶಿವಮ್ಮ ನಾಗರಾಜು, ಮಾಜಿ ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ವಿನೋದ್, ವೀರಭದ್ರಯ್ಯ ಗ್ರಾಮಸ್ಥರು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

8 ಕೆಕೆಪಿ 1: ಕನಕಪುರ ತಾಲೂಕು ಶಿವನಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜರುಗಿದ ಅಂತರ ರಾಷ್ಟಿçÃಯ ಮಹಿಳಾ ದಿನಾಚರಣೆಯಲ್ಲಿ ಸಾಧಕಿಯರನ್ನು ಸನ್ಮಾನಿಸಲಾಯಿತು. ದೀಪಹಾವೇರಿ, ಚಿಕ್ಕತಾಯಮ್ಮ, ಟಿ.ಕುಮಾರಿ, ಶಿವಲಿಂಗಯ್ಯ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments