Thursday, May 2, 2024
spot_img
HomeChamarajanagarಶಿವರಾತ್ರಿ ಹಬ್ಬದ ಅಂಗವಾಗಿ  ವಿಶೇಷ ಪೂಜೆ ಅಲಂಕಾರ ನಡೆದವು

ಶಿವರಾತ್ರಿ ಹಬ್ಬದ ಅಂಗವಾಗಿ  ವಿಶೇಷ ಪೂಜೆ ಅಲಂಕಾರ ನಡೆದವು

ಪಾಲಾರ್ ಪತ್ರಿಕೆ | Palar Pathrike

ಚಾಮರಾಜನಗರ : ಪಟ್ಟಣದ ವಿವಿದ ದೇವಾಲಯಗಳಲ್ಲಿ ಇಂದು ಶಿವರಾತ್ರಿ ಹಬ್ಬದ ಅಂಗವಾಗಿ  ವಿಶೇಷ ಪೂಜೆ ಅಲಂಕಾರ ನಡೆದವು.ಚಾಮರಾಜನಗರ ವೀರಭದ್ರೆಶ್ವರ, ಚಾಮರಾಜೇಶ್ವರ , ಮಹದೇಶ್ವರ ಸೇರಿದಂತೆ ವಿವಿದ ದೇವಾಲಯಗಳಲ್ಲಿ ಭಕ್ತರ ದಂಡು ಸೇರಿದ್ದವು.
ಶಿವರಾತ್ರಿ ಅಂಗವಾಗಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ವಿಶೇಷ ಕಾಳಜಿ ವಹಿಸಿ, ಬೇರೆ ಊರು, ಇತರೆ ಜಿಲ್ಲೆಗಳಿಂದ ಬರುವ ಭಕ್ತರಿಗೆ ಮಾದಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.
ಇಂದು ಬೆಳಗ್ಗೆಯಿಂದಲೇ ಮಾದಪ್ಪನಿಗೆ ಬಿಲ್ವಾ ರ್ಚನೆ, ಪುಷ್ಪಾರ್ಚನೆ ಮಾಡಿ, ಶಿವಲಿಂಗಕ್ಕೆ ಶಿವನ ಮುಖವಾಡ ಧರಿಸಿ, ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಜೊತೆಗೆ ದೇವಾಲಯದೊಳಗೆ ಬಗೆ ಬಗೆಯ ತರಕಾರಿಗಳು, ಹಣ್ಣುಗಳು ಹಾಗೂ ಆಕರ್ಷಕ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿತ್ತು.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಇಂದು ಬೆಳಗ್ಗೆಯಿಂದಲೇ ಶ್ರೀ ಚಾಮರಾಜೇಶ್ವರಸ್ವಾಮಿಗೆ ಬಿಲ್ವಾರ್ಚನೆ, ಪುಷ್ಪಾ ರ್ಚನೆ ಮಾಡಿ, ಶಿವಲಿಂಗಕ್ಕೆ ಶಿವನ ಬೆಳ್ಳಿಯ ಮುಖವಾಡ ಧರಿಸಿ, ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments