Friday, April 19, 2024
spot_img
HomeChikballapur30 ವರ್ಷಗಳಿಂದಲೂ ಜಿಲ್ಲೆಯಲ್ಲಿ ನೀರಾವರಿ ಹೋರಾಟ ನಡೆಯುತ್ತಲೆ ಇದೆ

30 ವರ್ಷಗಳಿಂದಲೂ ಜಿಲ್ಲೆಯಲ್ಲಿ ನೀರಾವರಿ ಹೋರಾಟ ನಡೆಯುತ್ತಲೆ ಇದೆ

ಪಾಲಾರ್ ಪತ್ರಿಕೆ | Palar Pathrike

ಚಿಕ್ಕಬಳ್ಳಾಪುರ : ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುತ್ತಿರುವ ಕೆಸಿ ಮತ್ತು ಹೆಚ್ ಎನ್ ವ್ಯಾಲಿ ತಾಜ್ಯ ನೀರನ್ನ ಮೂರನೆ ಹಂತದ ಶುದ್ದೀಕರಣಕ್ಕೆ ನಿನ್ನೆ ಮಂಡಿಸಿದ ರಾಜ್ಯ ಬಡ್ಜೆಟ್ ನಲ್ಲಿ ಒತ್ತು ನೀಡಿರುವುದು ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟಗಾರರಿಗೆ ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.ಆದ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಕೆರೆಗಳಿಗೆ ನೀರಿನ ಸೆಲೆಗಳು ಕಾಲುವೆಗಳ ದುರಸ್ತಿಗೆ ಹಣ ನೀಡದೆ ಇರುವುದು ಸರ್ಕಾರದ ಇಚ್ಚಾಶಕ್ತಿಯ ಕೊರತೆಯನ್ನು ತೋರಿಸುತ್ತದೆಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಬಡ್ಜೆಟ್ ವಿಮರ್ಶೆಯಲ್ಲಿ ಮಾತನಾಡಿದರು. 
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಪದಾದಿಕಾರಿಗಳು  ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರುಹಲವಾರು ವರ್ಷಗಳಿಂದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುತ್ತಿರುವ ಕೆ ಸಿ ಮತ್ತು ಹೆಚ್ ಎನ್ ವ್ಯಾಲಿ ನೀರನ್ನು ಮೂರನೆ ಹಂತದ ಶುದ್ದೀಕರಣ ಮಾಡುವುದಾಗಿ ಬಡ್ಜೆಟ್ ನಲ್ಲಿ  ಪ್ರಸ್ತಾಪ ಮಾಡಿರುವುದು ನೀರಾವರಿ ಹೋರಾಟಗಾರರಿಗೆ ಒಂದಿಷ್ಟು ಸಂತಸ ಪಡುವಂತ ಸುದ್ದಿಯಾಗಿದೆ ಎಂದು ಜಿಲ್ಲಾಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.
ಕೋಲಾರ-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 5400 ಕೆರೆಗಳಿವೆ.ಈ ಕೆರೆಗಳಿಗೆ ನೀರಿನ ಪೂರೈಕೆ ಮಾಡುವ ಕಾಲುವೆಗಳ ತೆಗೆಯುವ ಘೋಷಣೆ ಆಗಿಲ್ಲ ,ಕೆ ಸಿ ವ್ಯಾಲಿ ಗೆ 410 ಹೆಚ್ ಎನ್ ವ್ಯಾಲಿ 210 ಎಂ ಎಲ್ ಡಿ ನೀರು ಟ್ರೀಟ್ ಮೆಂಟ್ ಗೆ ಹಣ ಮೀಸಲಿಟ್ಟಿಲ್ಲ, ಇದರ ಜತೆಗೆ ಮತ್ತೊಂದು ಅಪಾಯಕಾರಿ ಘಟನೆ ಗೋಚರವಾಗಿದ್ದು ಇಂದು ನಾವು ಕುಡಿಯುವ  ನೀರಿನಲ್ಲಿ ಯುರೇನಿಯಂ ಅಫಾಯಕಾರಿ ಅಂಶಗಳು  ಗೋಚರ ವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಎತ್ತಿನ ಹೊಳೆಯಿಂದ ಮೇಲ್ಕಂಡ ಮೂರು ಜಿಲ್ಲೆಗಳಿಗೆ ಒಂದು ಹನಿ ನೀರು ಸಿಗೊಲ್ಲ ಎಂದು 2012 ರಲ್ಲಿಯೇ ನೀರಾವರಿ ತಜ್ಞರು ಸಂಶೋಧನೆಯಲ್ಲಿ ಹೇಳಿದ್ದಾರೆ .ಆದರೆ ಕಳೆದ ಮೂರು ಚುನಾವಣೆಗಳಲ್ಲಿ ಎತ್ತಿನಹೊಳೆ  ಯೋಜನೆಯನ್ನ ರಾಜಕೀಯ ಪಕ್ಷಗಳು ಎಟಿಎಂ ಆಗಿ ಬಳಸಿಕೊಳ್ಳುತಿದ್ದಾರೆ.
ಕೃಷ್ಣಾನದಿ ನೀರನ್ನ ಪೆನ್ನಾರ್ ಬೇಸಿನ್ ಭಾಗಕ್ಕೆ ಮಾತ್ರ ಕುಡಿಯಲು ಕೇಳುವ ಹಕ್ಕಿದೆ ಅದನ್ನ ಸರ್ಕಾರ ಪರಿಗಣಿಸಿಲ್ಲ ಎಂದು ಇದೇ ವೇಳೆ ಅವರು ಪ್ರಸ್ತಾಪಿಸಿದರು. 
ಸುದ್ದಿಗೋಷ್ಟಿಯಲ್ಲಿ ಕಾಮ್ರೇಡ್ ಲಕ್ಷ್ಮಯ್ಯ,ಜಿಜೆ ಹಳ್ಳಿ ನಾರಾಯಣಸ್ವಾಮಿ, ಸುಷ್ಮಾಶ್ರೀನಿವಾಸ್,ನಾಗನಾಳ ನಾರಾಯಣಸ್ವಾಮಿ, ಆನೂರು ದೇವರಾಜ್ ಪ್ರಭಾ ನಾರಾಯಣಗೌಡ  ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments