ಪಾಲಾರ್ ಪತ್ರಿಕೆ | Palar Pathrike
ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಖಾಸಗೀಗೆ ಜನಪ್ರತಿನಿಗಳು ಬಳಸಿಕೊಳ್ಳುವಂತಿಲ್ಲವಾದರೂ ಜಿಲ್ಲಾ ಉಸ್ತುವಾರಿ ಹಂಗಾಮಿ ಸಚಿವರ ಮನೆಗೆ ದಿನಕ್ಕೆರಡು ಬಾರಿ ಫಾಗಿಂಗ್ ಮಾಡಿಸುತ್ತಿದ್ದು ಅದಿಕಾರಿಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಂಶ ಕಂಡು ಬಂದಿದೆ.ಚಾಮರಾಜನಗರ ಶಂಕರಪುರ ಬಡಾವಣೆಯಲ್ಲಿರುವ ಸೋಮಣ್ಣ ಅವರ ತಾತ್ಕಾಲಿಕ ನಿವಾಸದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕೆ ನಗರಸಬಾ ಅದಿಕಾರಿಗಳಾದ ಕಮಿಷನರ್ ಸೇರಿದಂತೆ ಹಲವಾರು ಸಿಬ್ಬಂದಿಗಳನ್ನ ಬಳಸಿಕೊಳ್ಳುತ್ತಿದ್ದು ನೀತಿ ಸಂಹಿತೆ ಉಲ್ಲಂಘನೆಗೆ ಸಾಕ್ಷಿಯಾದಂತಾಗಿದೆ. ಈಗಾಗಲೆ ಚಾಮರಾಜನಗರ ೩೧ ವಾರ್ಡ್ ಗಳಲ್ಲೂ ಶುಚಿತ್ವವಿಲ್ಲದ, ಅನೈರ್ಮಲೀಕರಣ ಪ್ರದೇಶ ಇದ್ದರೂ ಅಲ್ಲಿಗೆ ಬಳಕೆಯಾಗದೆ ಫಾಗಿಂಗ್ ಯಂತ್ರೋಪಕರಣಗಳು ಇದೀಗ ಜನಪ್ರತಿನಿದಿಗಳ ನಿವಾಸಕ್ಕೆ ವೈಯುಕ್ತಿಕ ಬಳಕೆ ಮಾಡಲು ಅದಿಕಾರಿಗಳಿಗೆ ಪ್ರೇರಪಣೆ,ಒತ್ತಡ ಹೇರುತ್ತಿರುವ ಅಂಶವನ್ನ ಚುನಾವಣಾದಿಕಾರಿಗಳು ಗಮನಿಸಿ ಲೋಪವೆಸಗಿದ ಅದಿಕಾರಿಗಳ ಮೇಲೆ ಕ್ರಮವಹಿಸಬೇಕಾಗಿದೆ.