Thursday, May 23, 2024
spot_img
HomeChamarajanagarಮತ್ತಷ್ಟು ಏರಿಕೆ ಕಂಡ ಮತದಾನ, ಮತಪಟ್ಟಿಗೆಗೆ ಭದ್ರತೆ

ಮತ್ತಷ್ಟು ಏರಿಕೆ ಕಂಡ ಮತದಾನ, ಮತಪಟ್ಟಿಗೆಗೆ ಭದ್ರತೆ

ಪಾಲಾರ್ ಪಾತ್ರಿಕೆ | Palar Pathrike 

ಚಾಮರಾಜನಗರ: 2018 ರ ವಿದಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 74.91% ರಷ್ಟು ಮತದಾನವಾಗಿತ್ತು.2023 ರ ಈ‌ ಚುನಾವಣೆಯಲ್ಲಿ ಜಿಲ್ಲೆಯಲ್ಲಿ.81.70% ಮತದಾನವಾಗಿದೆ..ಕಳೆದ ಬಾರಿಗಿಂತ ಈ ಭಾರಿ 06.79%ಮತದಾನ ಏರುಮುಖ ಕಂಡಿದೆ.ಚಾಮರಾಜನಗರದಲ್ಲಿ 179157 ಮತ ಚಲಾವಣೆಯಾಗಿದ್ದ 80.76%, ಗುಂಡ್ಲುಪೇಟೆಯಲ್ಲಿ 166252 ಮತ ಚಲಾವಣೆಯಾಗಿದ್ದು  76.75% ,ಹನೂರಿನಲ್ಲಿ 171682 ಮತ ಚಲಾವಣೆ ಆಗಿದ್ದು‌ 81.95%, ಕೊಳ್ಳೆಗಾಲದಲ್ಲಿ 186744 ಮತ ಚಲಾವಣೆಯಾಗಿದ್ದು 87.33 % ಆಗಿಧ್ದು ಚಾಮರಾಜನಗರ ಜಿಲ್ಲಾದಾದ್ಯಂತ 703835 ಮತ ಚಲಾವಣೆಯಾಗಿದ್ದು 81.70% ರಷ್ಟು ಮತದಾನವಾಗಿದೆ.
ಸ್ಟ್ರಾಂಗ್ ರೂಂನಲ್ಲಿ ಭವಿಷ್ಯ:ವಿಧಾನಸಭಾ ಚುನಾವಣೆ ಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಜಿಲ್ಲೆಯ ನಾಲ್ಕು ಕ್ಷೇತ್ರಗಳ ಮತಪೆಟ್ಟಿಗೆಗಳನ್ನು  ಸ್ಟಾಂಗ್ ರೂಂ ನ ಭದ್ರತೆಯಲ್ಲಿ ಇರಿಸಲಾಗಿದೆ.
ನಗರದ ಹೊರ ವಲಯದ ಬೇಡರಪುರ ಬಳಿ ಇರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಸ್ಟಾಂಗ್‌ರೂಂನಲ್ಲಿ ಬಿಗಿ ಭದ್ರತೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಇವಿಎಂ, ವಿವಿ ಪ್ಯಾಟ್ ಯಂತ್ರಗಳನ್ನು ಇರಿಸಲಾಗಿದ್ದು ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಆ ಮೂಲಕ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಒಟ್ಟು ೬೧ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇತ್ತ ಚುನಾವಣೆ ಘೋಷಣೆಯಾದಾಗಿನಿಂದ ಕ್ಷೇತ್ರಾದ್ಯಂತ ಓಡಾಡಿ ದಣಿದಿದ್ದ ಅಭ್ಯರ್ಥಿಗಳು ಮತದಾನ ಮುಕ್ತಾಯದ ಬಳಿಕ ರಿಲ್ಯಾಕ್ಸ್ ಮೂಡ್‌ ಗೆ ಜಾರಿದ್ದಾರೆ. 

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments