Friday, April 26, 2024
spot_img
HomeChikballapurBagepalliಮಧ್ಯವರ್ತಿಗಳ ಮೇಲೆ ಕೇಸುದಾಖಲಿಸಲು ಕನ್ನಡಪರ : ಹೋರಾಟಗಾರ ಬಾಬಾಜಾನ್ ಒತ್ತಾಯ.

ಮಧ್ಯವರ್ತಿಗಳ ಮೇಲೆ ಕೇಸುದಾಖಲಿಸಲು ಕನ್ನಡಪರ : ಹೋರಾಟಗಾರ ಬಾಬಾಜಾನ್ ಒತ್ತಾಯ.

ಪಾಲಾರ್ ಪತ್ರಿಕೆ | Palar Pathrike

ಬಾಗೇಪಲ್ಲಿ : ಪಟ್ಟಣದ  ಪುರಸಭೆ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ನೀಡುತ್ತಿರುವ ಉಚಿತ ನಿವೇಶನಗಲ್ಲಿ ಎಸ್.ಸಿ ,ಎಸ್.ಟಿ ಜನಾಂಗದವರಿಗೂ, ಸ್ಲಂ ವಾರ್ಡ್ ನಿವಾಸಿಗಳಿಗೂ, ವಿಕಲಚೇತನರಿಗೂ,ಮಾಜಿ ಸೈನಿಕರಿಗೂ, ಹಿರಿಯ ಪತ್ರಕರ್ತರಿಗೂ  ಮೀಸಲಾತಿ ನೀಡಲು ಮತ್ತು ಈಗಾಗಲೇ ಸಿದ್ದಪಡಿಸಿರುವ ಉಚಿತ ನಿವೇಶನ ಪಟ್ಡಿಯನ್ನು ಪುನರ್ ಪರಿಶೀಲನೆ ಮಾಡಲು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವಂತೆ ಕನ್ನಡಪರ ಹೋರಾಟಗಾರ ಬಾಬಾಜಾನ್ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತ್ತು.
ಈ ವೇಳೆಯಲ್ಲಿ ಕನ್ನಡಪರ ಹೋರಾಟಗಾರ ಬಾಬಾಜಾನ್ ಮಾತನಾಡಿ, ಬಾಗೇಪಲ್ಲಿ ಪಟ್ಡಣದ ಪುರಸಭೆಯ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ವಿವಿಧ ಯೋಜನೆಯ ಅಡಿಯಲ್ಲಿ  ಉಚಿತ ನಿವೇಶನ ನೀಡುತ್ತಿರುವ ಅರ್ಹರ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದವರಿಗೂ, ಅಲ್ಪಸಂಖ್ಯಾತರಿಗೂ, ಹಿಂದುಳಿದ ವರ್ಗಗಳ ಜನರಿಗೂ,  ಸ್ಲಂ ವಾರ್ಡ್ ಗಳ ಜನರಿಗೆ ಹೆಚ್ಚು  ಮೀಸಲಾತಿ ನೀಡಬೇಕು.ಜೊತೆಗೆ ವಿಕಲಚೇತನರಿಗೆ, ಮಾಜಿ ಸೈನಿಕರಿಗೂ ,ಹಿರಿಯ ಪತ್ರಕರ್ತರಿಗೂ ಆಶ್ರಯ ಯೋಜನೆ ಅಡಿಯಲ್ಲಿ ಮೀಸಲಾತಿ ನೀಡಬೇಕು.ಮುಖ್ಯವಾಗಿ ನಿಜವಾದ ನಿವೇಶನ ರಹಿತರಿಗೆ, ಅರ್ಹರಿಗೆ ಉಚಿತ ನಿವೇಶನಗಳನ್ನು ನೀಡಬೇಕು. ಈಗಾಗಲೇ ಆಶ್ರಯ ಯೋಜನೆ ಅಡಿಯಲ್ಲಿ ಸಿದ್ಧಪಡಿಸಿರುವ ಪಟ್ಟಿಯನ್ನು ಪುನರ್ ಪರಿಶೀಲನೆ ಮಾಡಿ,ಈ ಮೇಲ್ಕಂಡ ಜನಾಂಗದವರಿಗೆ  ಮೀಸಲಾತಿಯನ್ನು ನೀಡಬೇಕು. ಹಾಗಯೇ   ನಿಜವಾದ ನೈಜ ,ಅರ್ಹತೆ ಹೊಂದಿರುವವರನ್ನು ಪಟ್ಟಿಯಿಂದ ಕೈ  ಬಿಟ್ಟಿರುವುದು ವಿಷಾದನೀಯ ( ಮಧ್ಯ ವರ್ತಿಗಳು ತೆಗೆಸಿರುವುದು  ಮೇಲ್ನಟಕ್ಕೆ ಕಂಡು ಬರುತ್ತಿದೆ) ಈ ಉಚಿತ ನಿವೇಶನಗಳ ಪಟ್ಟಿಯಲ್ಲಿ ಹೆಸರು ಸೇರಿಸುತ್ತೆವೆ ಎಂದು ಕೆಲವು ಮಧ್ಯವರ್ತಿಗಳು ಸಾಮಾನ್ಯ ಜನರ ಹತ್ತಿರ 40 ಸಾವಿರದಿಂದ 50 ಸಾವಿರ ರೂಪಾಯಿಗಳನ್ನು ಕೇಳುತ್ತಿದ್ದರೆ ಎಂದು ಆರೋಪಗಳು ಹೆಚ್ಚು ಕೇಳಿ ಬರುತ್ತಿವೆ. ಅದ್ದರಿಂದ ಮಧ್ಯ ವರ್ತಿಗಳ ಹಾವಳಿಯನ್ನು ತಪ್ಪಿಸಬೇಕು. ಇದಕ್ಕಾಗಿ ಸಾಮಾನ್ಯ ಜನರಿಂದ ಮಧ್ಯವರ್ತಿಗಳು ಹಣ ಪಡದಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಾಗ ಅಂತಹ ಮಧ್ಯವರ್ತಿಗಳ ಮೇಲೆ ಕಾನೂನಿನ ಕ್ರಮ ಜರುಗಿಸಿ, ಕೇಸು ದಾಖಲಿಸಬೇಕು,  ಎಂದು ಅದಕ್ಕಾಗಿ ಸಾಂಕೇತಿಕವಾಗಿ ಮನವಿ ಪತ್ರವನ್ನು ನೀಡುತ್ತಿದ್ದು, ಈ ಮೇಲ್ಕಂಡ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು.ಈ ಮನವಿ ಪತ್ರವನ್ನು ಸ್ವೀಕರಿಸಿದ ಪುರಸಭೆಯ ಮುಖ್ಯಾಧಿಕಾರಿ ಮಧುಕರ್ ಮಾತನಾಡಿ, ಉಚಿತ ನಿವೇಶನ ಗಳ ಪಟ್ಟಿಯನ್ನು ಪುನರ್ ಪರಿಶೀಲನೆ ಮಾಡುವಂತೆ ನೀಡಿರುವ ಮನವಿ ಪತ್ರವನ್ನು ಆಶ್ರಯ ಸಮಿತಿ ಅಧ್ಯಕ್ಷರಾದ  ಹಾಗೂ  ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿರವರ ಗಮನಕ್ಕೆ ತರುತ್ತೆನೆ,ಜೊತೆಗೆ ಮಧ್ಯವರ್ತಿಗಳ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದ್ದರೆ, ಅವರ ವಿರುದ್ಧ ಯಾವುದೇ ಮುಲಾಜುಯಿಲ್ಲದೇ  ಕೇಸು ದಾಖಲಿಸಿ, ಕಾನೂನಿನ ಕ್ರಮ ಕೈಗೊಳ್ಳುತ್ತೆನೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಸೂರ್ಯನಾರಯಣ ರೆಡ್ಡಿ, ರವೀಂದ್ರ, ಕರಾಟೆ ರಿಯಾಜ್, ಬುಜೇಂದ್ರ, ಜಿ.ವಿ.ವೆಂಕಟಶಿವಪ್ಪ, ಷೇಕ್ ಹಿದಾಯಿತ್ತುಲ್ಲಾ, ಮಂಜುನಾಥ, ಸುಬನ್ನ, ಇದ್ರಿಸ್ ವುಲ್ಲಾ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments