Friday, April 19, 2024
spot_img
HomeBangalore Ruralಭ್ರಷ್ಟ ಬಿಜೆಪಿಯನ್ನು ರಾಜ್ಯ ಮತ್ತು ಕೇಂದ್ರದಿoದ ಕಿತ್ತೊಗೆಯುವ ಕೆಲಸವಾಗಬೇಕು : ಜಿಪಂ ಮಾಜಿ ಅಧ್ಯಕ್ಷೆ ಅನಂತಕುಮಾರಿ...

ಭ್ರಷ್ಟ ಬಿಜೆಪಿಯನ್ನು ರಾಜ್ಯ ಮತ್ತು ಕೇಂದ್ರದಿoದ ಕಿತ್ತೊಗೆಯುವ ಕೆಲಸವಾಗಬೇಕು : ಜಿಪಂ ಮಾಜಿ ಅಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ

ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ: ಭ್ರಷ್ಟ ಬಿಜೆಪಿಯನ್ನು ರಾಜ್ಯ ಮತ್ತು ಕೇಂದ್ರದಿAದ ಕಿತ್ತೊಗೆಯುವ ಕೆಲಸವನ್ನು ಪ್ರತಿ ಕಾಂಗ್ರೆಸ್ಸಿಗರು ಮಾಡುವಂತಾಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ತಿಳಿಸಿದರು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಖಾದಿಬೋರ್ಡ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕಾಂಗ್ರೆಸ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸುವುದರ ಮೂಲಕ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಉತ್ತಮ ಆಡಳಿತ ನೀಡಿದ ಸರಕಾರವಾಗಿ ಹೊರಹೊಮ್ಮಿದೆ. ಇಂದಿನ ಬಿಜೆಪಿ ಸರಕಾರದ ಆಡಳಿತದಲ್ಲಿ ಭ್ರಷ್ಟತೆ ತಾಂಡವಾಡುತ್ತಿದೆ. ಕಾಂಗ್ರೆಸ್ ಸರಕಾರ ಬರಲು ಈ ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಲು ಜನರೇ ಮುಂದಾಗುತ್ತಿದ್ದಾರೆ. ಯಾವುದೇ ಕಾಂಗ್ರೆಸ್ ಕಾರ್ಯಕ್ರಮಗಳಾದರೂ ಜನರು ತುಂಬಿ ತುಳುಕುತ್ತಿರುತ್ತಾರೆ. ನಮ್ಮ ರಾಷ್ಟಿçÃಯ ನಾಯಕಿ ಪ್ರಿಯಾಂಕಗಾAಧಿ ಅವರು ಈಗಾಗಲೇ ಘೋಷಿಸಿರುವಂತೆ ಪ್ರತಿ ಕುಟುಂಬದ ಹಿರಿಯ ಸದಸ್ಯೆಗೆ 2ಸಾವಿರ ರೂ. ತಿಂಗಳಿಗೊಮ್ಮೆ ನೀಡುವುದಾಗಿ ಮತ್ತು 200ಯುನಿಟ್‌ಗಳಷ್ಟು ವಿದ್ಯುತ್ ಉಚಿತವಾಗಿ ನೀಡುವ ಭರವಸೆಯನ್ನು ನೀಡಿದ್ದಾರೆ. ಈ ಹಿಂದೆ ನೀಡಿದ ಭರವಸೆಗಳು ಈಡೇರಿವೆ ಅದರಂತೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಭರವಸೆಗಳು ಈಡೇರಲಿವೆ. ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲು ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ ಎಂದರು.

ಪುರಸಭಾ ಮಾಜಿ ಅಧ್ಯಕ್ಷೆ ರೇಖಾ ವೇಣುಗೋಪಾಲ್ ಮಾತನಾಡಿ, ಚುನಾವಣೆ ಸಮೀಪಿಸುತ್ತಿದೆ. ಕಾಲಹರಣ ಮಾಡದೆ, ಪ್ರತಿ ಮನೆಮನೆಗೆ ಕಾಂಗ್ರೆಸ್ ಬೆಂಬಲಿತ ಮಹಿಳೆಯರು ತೆರಳಿ ಕಾಂಗ್ರೆಸ್ ಆಡಳಿತದಲ್ಲಿ ಆಗಿರುವ ಯಶಸ್ವಿ ಕಾರ್ಯಕ್ರಮಗಳು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರದ ಆಡಳಿತವಧಿಯಲ್ಲಿ ನೀಡಿರುವ ಜನಪ್ರಿಯ ಯೋಜನೆಗಳನ್ನು ಮನೆಮನೆಗೆ ತಲುಪಿಸಬೇಕು. ಮುಂಬರುವ ವಿಧಾನಸಭಾ ಚುನಾವಣಗೆ ಈಗಿನಿಂದಲೇ ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಸಕ್ರಿಯರಾಗಬೇಕು ಎಂದು ಕರೆ ನೀಡಿದರು.

ಈ ವೇಳೆ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಮಹಿಳಾ ತಾಲೂಕು ಅಧ್ಯಕ್ಷೆ ರಾಧರೆಡ್ಡಿ, ಕೊಯಿರ ಗ್ರಾಪಂ ಅಧ್ಯಕ್ಷೆ ಆಂಜಿನಮ್ಮ, ಸದಸ್ಯೆ ಮಮತಾಶಿವಾಜಿ, ಆಲೂರುದುದ್ದನಹಳ್ಳಿ ಗ್ರಾಪಂ ಸದಸ್ಯೆ ಮೀನಾಕ್ಷಿ ಕೃಷ್ಣಮೂರ್ತಿ, ಮಾಧವಿ ಕಾಂತರಾಜ್, ಮಹಬೂಬ್‌ಜಾನ್, ಪಾರ್ವತಿ, ಮಹಿಳಾ ಪದಾಧಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments