Tuesday, April 30, 2024
spot_img
HomeMandyaಕಬ್ಬಿನ ಬೆಳೆಯ ಸುಧಾರಿತ ತಾಂತ್ರಿಕ ಬೇಸಾಯ ಕ್ರಮಗಳನ್ನು ಕುರಿತು ಒಂದು ದಿನದ ತರಬೇತಿ ಶಿಬಿರ: ರಾಘವೇಂದ್ರ...

ಕಬ್ಬಿನ ಬೆಳೆಯ ಸುಧಾರಿತ ತಾಂತ್ರಿಕ ಬೇಸಾಯ ಕ್ರಮಗಳನ್ನು ಕುರಿತು ಒಂದು ದಿನದ ತರಬೇತಿ ಶಿಬಿರ: ರಾಘವೇಂದ್ರ ತೆಗ್ಗಿ


ಪಾಲಾರ್ ಪತ್ರಿಕೆ | Palar Patrike

ಮಂಡ್ಯ:- ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮದ ಕಬ್ಬು ಬೆಳೆಗಾರರಿಗೆ ಮಂಡ್ಯದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಕಬ್ಬು ಸಂಶೋಧನಾ ಕೇಂದ್ರದ ವತಿಯಿಂದ ಕಬ್ಬಿನ ಬೆಳೆಯ ಸುಧಾರಿತ ತಾಂತ್ರಿಕ ಬೇಸಾಯ ಕ್ರಮಗಳು ಕುರಿತು ಒಂದು ದಿನದ ತರಬೇತಿ ಶಿಬಿರ.

ರೈತರು ಕಬ್ಬಿನ ಬೆಳೆಯಲ್ಲಿ ತಂತ್ರಜ್ಞಾನದ ಮೂಲಕ ಸುಧಾರಿತ ಬೇಸಾಯ ಪದ್ದತಿಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕಬ್ಬು ನಾಟಿಮಾಡಲು ೮-೧೦ ತಿಂಗಳ ತನು ಕಬ್ಬನ್ನು ಬಿತ್ತನೆಗೆ ಉಪಯೋಗಿಸುವುದರಿಂದ, ಕಬ್ಬಿನ ಬಿತ್ತನೆಯಲ್ಲಿ ತೇವಾಂಶ, ಸಾರಜನಕ ಮತ್ತು ಗ್ಲೂಕೋಸ್ ಪ್ರಮಾಣ ಹೆಚ್ಚಾಗಿದ್ದು, ಪೈರುಚೆನ್ನಾಗಿ ಬಂದು ಹೆಚ್ಚಿನ ಇಳುವರಿ ಪಡೆಯಲು ಅನುಕೂಲವಾಗುತ್ತದೆ ಎಂದು ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ರಾಘವೇಂದ್ರ ತೆಗ್ಗಿರವರು ತಿಳಿಸಿದರು.

ನಾಟಿ ಪದ್ದತಿಯಲ್ಲಿ ಒಂದು ಕಣ್ಣಿನ ಬಿತ್ತನೆಯನ್ನು ಉಪಯೋಗಿಸುವುದರಿಂದ ಎಕರೆಗೆ ೮೦೦ ಕೆಜಿ ಯಿಂದ ೧೦೦೦ ಕೆಜಿ ಬಿತ್ತನೆಕಬ್ಬು ಸಾಕಾಗುತ್ತದೆ. ಇದರಿಂದ ರೈತರಿಗೆ ಬಿತ್ತನೆಕಬ್ಬಿನ ವೆಚ್ಚದಲ್ಲಿ ಉಳಿತಾಯವಾಗುತ್ತದೆ ಎಂದು ತಿಳಿಸಿದರು.

ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕೀಟ ಶಾಸ್ತçಜ್ಞರಾದ ಡಾ|| ಮಂಜುನಾಥ್ ಚೌರಡ್ಡಿ ರವರು ರೈತರ ಕಬ್ಬಿನ ಬೆಳೆಗೆ ತಗಲುವ ಕೀಟಗಳಾದ ಆದಿಸುಳಿಕೊರಕ, ಬಿಳಿ ಉಣ್ಣೆಹೇನು ಹಾಗೂ ಬೇರು ಹುಳುಗಳು ಬೆಳೆಗೆ ಉಂಟು ಮಾಡುವ ನಷ್ಟ ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ವಿಸ್ತಾರವಾಗಿ ತಿಳಿಸಿದರು.

ಆದಿಸುಳಿ ಕೊರಕ, ಕೀಟಗಳನ್ನು ನಿಯಂತ್ರಿಸಲು ಫಿಪ್ರೋನಿಲ್ ಕೀಟನಾಶಕವÀನ್ನು ಹಾಗೂ ಟ್ರೆöÊಕೋಗ್ರಾಮಾ ಪರತಂತ್ರ ಜೀವಿಗಳನ್ನು ಬಳಸುವ ಬಗೆ,್ಗ ಬೇರು ಹುಳುವಿನ ಜೀವನ ಕ್ರಮದ ವಿವಿಧ ಹಂತಗಳನ್ನು ವಿವರಿಸಿ ಅವುಗಳನ್ನು ನಿಯಂತ್ರಿಸಲು ಮೆಟಾರೈಜಿಯಮ್, ಕ್ಲೋರೋಫೈರಿಫಾಸ್, ಬಿವೇರಿಯಾಗಳನ್ನು ಉಪಯೋಗಿಸಬಹುದು ಎಂದು ತಿಳಿಸಿದರು.

ಬೇಸಿಗೆಯ ಮೊದಲ ಮಳೆಯಾದಾಗ ಭೂಮಿಯಿಂದ ಹೊರ ಬರುವ ದುಂಬಿಗಳನ್ನು ಜಮೀನಿನಲ್ಲಿ ವಿದ್ಯುತ್ ಬಲ್ಬ್ಗಳನ್ನು ಆಳವಡಿಸಿ ಅದರ ಕೆಳಗಡೆ ಕೀಟನಾಶಕ ಮಿಶ್ರಿತ ನೀರಿನ ಪಾತ್ರೆಯನ್ನು ಇಟ್ಟು ದುಂಬಿಗಳನ್ನು ಆಕರ್ಷಿಸಿ ಸಾಯಿಸುವ ಮೂಲಕ ಬೇರು ಹುಳುಗಳನ್ನು ನಿಯಂತ್ರಣದಲ್ಲಿ ಇಡಬಹುದೆಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments