Thursday, March 28, 2024
spot_img
HomeBangaloreಕಾಜಲ್ ಅಗರ್ವಾಲ್ ಅವರು ಟಿ.ಎ.ಸಿ. ಅಲ್ಲಿ ಹೂಡಿಕೆ ಮಾಡಿದ್ದಾರೆ – ದಿ ಆಯುರ್ವೇದ ಕಂಪನಿ

ಕಾಜಲ್ ಅಗರ್ವಾಲ್ ಅವರು ಟಿ.ಎ.ಸಿ. ಅಲ್ಲಿ ಹೂಡಿಕೆ ಮಾಡಿದ್ದಾರೆ – ದಿ ಆಯುರ್ವೇದ ಕಂಪನಿ

ಪಾಲಾರ್ ಪತ್ರಿಕೆ | Palar Patrike

ಬೆಂಗಳೂರು : ಡಿ2 ಸಿ ಒಮ್ನಿಚಾನೆಲ್ ಆಯುರ್ವೇದ ಬ್ರಾಂಡ್, ದಿ ಆಯುರ್ವೇದ ಕಂಪನಿ ಅವರು ಈ ಆವೃತ್ತಿಯಲ್ಲಿ ಕಾಜಲ್ ಅಗರ್ವಾಲ್ (ಟಾಲಿವುಡ್ ಮತ್ತು ಬಾಲಿವುಡ್‌ ನಲ್ಲಿ ಮುಂಚುಣಿಯಲ್ಲಿರುವ ನಟಿ) ಅವರನ್ನು ತಮ್ಮ ಮೊದಲ ಹೂಡಿಕೆದಾರರನ್ನಾಗಿ ಮಾಡುವ ಮೂಲಕ ತಮ್ಮ ಎ ಸರಣಿಯ ಹೂಡಿಕೆಯ ಅವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ. ಅಜಿಮ್‌ ಪ್ರೇಮ್‌ಜಿ ಅವರ ವಿಪ್ರೊ ಗ್ರಾಹಕರ ಸೇವಾ ವೆಂಚರ್ಸ್‌ ಮತ್ತು ಎಚ್,ಎನ್,ಐ‌ ಅವರ ಮುಂದಾಳತ್ವದಲ್ಲಿ ಮೊದಲನೇ ಆವೃತ್ತಿಯಲ್ಲಿ ಅತ್ಯದ್ಬುತವಾದ ಬೆಳವಣಿಗೆಯನ್ನು ನೀಡುವ ಮೂಲಕ, ಟಿ.ಎ.ಸಿ ಈಗ ಕಾಜಲ್‌ ಅವರ ಹೂಡಿಕೆಯ ಜೊತೆಗೆ, ಟಿ.ಎ.ಸಿ ನ ಬೆಳವಣಿಗೆಯ ಹಾದಿಯಲ್ಲಿ ಅವರನ್ನು ದೀರ್ಘಕಾಲದ ಪಾಲುದಾರನ್ನಾಗಿ ನೇಮಿಸುವ ಮೂಲಕ, ಎ ಸರಣಿಯ ಮೂಲಕ $15 ಮಿಲಿಯನ್‌ ಹೂಡಿಕೆಗೆ ಅಹ್ವಾನಿಸಿದ್ದಾರೆ. ಟಿ.ಎ.ಸಿ. ಜೊತೆಗಿನ ಸಂಬಂದದ ಬಗ್ಗೆ ಮಾತನಾಡುವಾಗ, ನಟಿ ಮತ್ತು ಹೂಕೆದಾರರಾದ ಕಾಜಲ್ ಅಗರವಾಲ್ ಅವರು ಈ ಉತ್ಪನ್ನವನ್ನು ಹುಡುಕುವ ತಮ್ಮ ಪಯಣವನ್ನು ವಿವರಿಸಿದರು. ”ನಾನು ನನ್ನ ಮಗನಾದ ನೀಲ್ ಹುಟ್ಟುವಿಕೆಯನ್ನು ಕಾಯುತ್ತಿರುವಾಗ, ಎಲ್ಲಾ ಅಮ್ಮರಂತೆ ನನ್ನ ಮಗುವಿಗೆ ಸುರಕ್ಷಿತವಾದ, ಶುದ್ದವಾದ ಮತ್ತು ನೈಸರ್ಗಿಕವಾದ ಬಟ್ಟೆಯೂ ಸೇರಿದಂತೆ ಇನ್ನಿತರೆ ಪ್ರತಿನಿತ್ಯ ಬಳಕೆಯ ವಸ್ತುಗಳನ್ನು ಬಯಸುತ್ತಿದ್ದೆ. ಆಗಲೇ ನನಗೆ ಟಿ.ಎ.ಸಿ. ಯ ದಶಪುಷ್ಪದಿ ಸರಣಿಯ ಬಗ್ಗೆ ತಿಳಿಯಿತು ಮತ್ತು ಅದನ್ನು ನನ್ನ ಮಗನ ಮೇಲೆ ಉಪಯೋಗಿಸುವ ಮಾಡುವ ಮೊದಲು ಅದನ್ನು ನನ್ನ ಮೇಲೆ ಉಪಯೋಗಿಸಿದೆ. ಪ್ರಾಮಾಣಿಕ, ನೈತಿಕ ಮತ್ತು ಆಯ್ಕೆ ಮಾಡಲಾದ ಆಯುರ್ವೇದಿಕ್ ಸೂತ್ರವನ್ನು ಹೊಂದಿರುವುದರಿಂದ ಈ ಉತ್ಪನ್ನವು ಎದ್ದು ಕಾಣುತ್ತದೆ. ಈ ಜಗತ್ತನ್ನು ಇನ್ನು ಉತ್ತಮಗೊಳಿಸುವ, ಒಳ್ಳೆಯ ಸ್ಥಳವಾಗಿಸುವ ಸಾಮರ್ಥ್ಯವನ್ನು ಆಯುರ್ವೇದವು ಹೊಂದಿದೆ ಎಂದು ನಾನು ನಂಬುತ್ತೇನೆ, ಅದಕ್ಕಾಗಿಯೇ ಟಿ.ಎ.ಸಿ. ಅವರ ‘ಜಗತ್ತನ್ನು ಆಯುರ್ವೇದದ ಮೂಲಕ ಚಿಕಿತ್ಸಿಸೋಣ’ ಎಂಬ ಗುರಿಗೆ ನಾನು ಜೊತೆಗೂಡಿದೆ.” 2021 ರಲ್ಲಿ ಮೊದಲ ಆನ್ಲೈನ್ ಬ್ರಾಂಡ್ ಆಗಿ ಬಿಡುಗಡೆಯಾದ ಟಿ.ಎ.ಸಿ. ಮಾರ್ಚ್ ನಿಂದ ಅಕ್ಟೋಬರ್ 2022 ವರೆಗಿನ ಮೇಲ್ಮೈ ಆದಾಯದಲ್ಲಿ ಶೇಕಡಾ 500 ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಹೇಳಲಾಗಿದೆ ಮತ್ತು ಮಾರ್ಚ್ 2022 ರಿಂದ 2023 ಒಳಗೆ ಇದು 10 ರಷ್ಟು ಬೆಳವಣಿಗೆಯನ್ನು ಕಾಣುವ ಸಾಧ್ಯತೆಯಿದೆ. ಗ್ರಾಹಕರ ಆಸಕ್ತಿಯ ಸೆಳೆತ ಈ ಬೆಳವಣಿಗೆಗೆ ಕಾರಣವಾಗಿದೆ.. ಪರಮ್ ಭಾರ್ಗವ, ದಿ ಆಯುರ್ವೇದ ಕಂಪನಿಯ ಸಂಸ್ಥಾಪಕರ ಹೇಳಿಕೆ “ಟಿ.ಎ.ಸಿ ಆಯುರ್ವೆದವನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡು ಆನ್ಲೈನ್ ನಲ್ಲಿನ ಧೃಡವಾದ ಸಮುದಾಯವನ್ನು ಆನಂದಿಸುತ್ತದೆ. ಆಯುರ್ವೇದಿಕ್ ಪರ್ಯಾಲೋಚನೆಯ ಆಧಾರದ ಖರೀದಿಯ ಮೂಲಕ ನಮ್ಮ ವೆಬ್ಸೈಟ್ (www.theayurvedaco.com) ಮತ್ತು ಅಮೆಜಾನ್, ಮಿಂತ್ರಾ, ನೈಕಾ, ಫ್ಲಿಪ್ಕಾರ್ಟ್, ಫಸ್ಟ್ ಕ್ರಿ, ಬ್ಲಿನ್ಕಿಟ್, ಇನ್ನಿತರೆ 30 ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ನಮ್ಮ ಇಕಾಮರ್ಸ್ ವ್ಯಾಪಾರವು ಬಲವಾದ ಮಾರಾಟದ ಎಳೆತವನ್ನು ಪಡೆದಿದೆ.   ಭಾರತೀಯರು (ಮತ್ತು ಬಹುತೇಕ ಜನರು) ಅವರ ಚರ್ಮ, ಆರೋಗ್ಯ ಮತ್ತು ಕ್ಷೇಮಕ್ಕಾಗಿ ಅನುಭವದ ಮತ್ತು ಕೃತಕವಾದ ಖರೀದಿಯ ಮೇಲೆ ಅವಲಂಬನೆಯಾಗಿದ್ದಾರೆ. ಆಕಾಂಷೆ, ಕೈಗೆಟಕುವ ಮತ್ತು ಲಭ್ಯತೆಯ ತುದಿಯಲ್ಲಿ, 6 ತಿಂಗಳ ಒಳಗೆ, ಭಾರತಾದ್ಯಂತ ಟಿ.ಎ.ಸಿ. ಅತ್ಯದ್ಬುತವಾದ ವ್ಯಾಪಾರ, ವಿಸ್ತರಣೆ ಮತ್ತು ಬೆಳವಣಿಗೆಯನ್ನು ಕಂಡಿದೆ. ಆನ್ಲೈನ್-ಫರ್ಸ್ಟ್ ಇಂದ ಹಿಡಿದು ಟಿ.ಎ.ಸಿ. ಯು ಭಾರತದ ದೊಡ್ಡ ದೊಡ್ಡ ಮಾಲ್ ಗಳಲ್ಲಿನ 20 ಎಬಿಓ/ನೆರವುದಾಣ ಗಳಲ್ಲಿ ಲಭ್ಯವಿದೆ. ಜಮ್ಮು ಇಂದ ತ್ರಿವೆಂಡ್ರಮ್ ವರೆಗೆ, ವಾಪಿ ಇಂದ ದಿಮಾಪುರ್ ವರೆಗೆ, ಟಿ.ಎ.ಸಿ 1000 ಕ್ಕೂ ಹೆಚ್ಚು ಕೌಂಟರ್ ಗಳಲ್ಲಿ ಭಾರತದಲ್ಲಿನ ಧೃಡವಾದ ಜಾಲದ ಮೂಲಕ ಸೇವೆಯನ್ನು ಸಲ್ಲಿಸಿದೆ ಮತ್ತು ಇದು ಮುಂದಿನ ಆರು ತಿಂಗಳೊಳಗೆ 10000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಲಭ್ಯವಾಗಲಿದೆ. ಆರಂಭಗೊಂಡ 15 ತಿಂಗಳೊಳಗೆ (2021 ರ ಮಧ್ಯಂತರ), ಟಿ.ಎ.ಸಿ ಅವರು ಮುಖ, ದೇಹ, ಆರೋಗ್ಯ, ಮಗು, ಅಲಂಕಾರ ಮತ್ತು ಆರೋಗ್ಯಕರ ವರ್ಗಗಳಲ್ಲಿ ಗ್ರಾಹಕರ ಪ್ರೀತಿಯನ್ನು, ನಿಷ್ಠೆಯನ್ನು ಮತ್ತು ಬೆಳವಣಿಗೆಯನ್ನು ಸಂಗ್ರಹಿಸಿದ್ದಾರೆ. ಶ್ರೀದ ಸಿಂಗ್, ಸಹ-ಸಂಸ್ಥಾಪಕರು ಮತ್ತು ಸಿಇಓ, ಅವರು ಕಾಜಲ್ ಅವರ ಟಿ.ಎ.ಸಿ. ಜೊತೆಗಾರಿಕೆಯ ಬಗ್ಗೆ ನೀಡಿದ ಹೇಳಿಕೆ, “ನಾವು ಸಹಸ್ರವರ್ಷದಷ್ಟು ಬೆಳೆಯುವಾಗ ಆಯುರ್ವೆದದೊಂದಿಗೆ ದೂರದ ಸಂಬಂದವನ್ನು ಹೊಂದಿದ್ದೆವು. ಈಗ ಮುಂದಿನ ಪೀಳಿಗೆಗೆ ಗುಣಮಟ್ಟ ವರ್ಧಿತ ಜೀವನಕ್ಕಾಗಿ ಮತ್ತು ಸಮರ್ಥವಾದ ಈ ಸಂಪ್ರದಾಯದ ವ್ಯವಸ್ಥೆಯನ್ನು ಭಾರತದ ಮತ್ತು ಜಗತ್ತಿನ ಎಲ್ಲಾ ಮನೆಗೆ ತೆಗೆದುಕೊಂಡು ಹೋಗಲು ಅವರಿಗೆ ಜೀವನ ಬದಲಾಯಿಸುವ ಅಭ್ಯಾಸಗಳನ್ನು ಮತ್ತು ಈ ಆಯುರ್ವೇದದಿಂದ ಆಗುವ ಉಪಯೋಗಗಳನ್ನು ಪರಿಚಯಿಸುವ ಸಮಯವಾಗಿದೆ, ನಾವು ನಮ್ಮ ಧ್ಯೇಯವನ್ನು ನಂಬುವವರ ಮೂಲಕ ಈ ಕಥನವನ್ನು ಹೇಳಬೇಕಾಗಿತ್ತು. ಪಾಲುದಾರಿಕೆ ಮತ್ತು ಸಂಬಂದಗಳು ನಮಗೆ ತುಂಬಾ ಮುಖ್ಯ ಮತ್ತು ಕಾಜಲ್ ಅವರು ವೈಯಕ್ತಿಕವಾಗಿ ಈ ಗುಣವನ್ನು ಹೊಂದಿದ್ದಾರೆ. ಇವರು ನೈಸರ್ಗಿಕ ಮತ್ತು ಸಮಗ್ರವಾದ ಜೀವನವನ್ನು ಅತ್ಯಾಸಕ್ತಿಯಿಂದ ಪ್ರಚಾರ ಮಾಡುವ ವ್ಯಕ್ತಿಯಾಗಿದ್ದಾರೆ, ಆಗಾಗಿ ಭವಿಷ್ಯದಲ್ಲಿ ವ್ಯಾಪಕವಾದ ಸಂಯೋಜನೆಯನ್ನು ಹೊಂದುವುದರ ಜೊತೆಗೆ ಯುವ ಜನರಿಗೆ ಕೇಂದ್ರಿಕೃತ ಸರಣಿಗಾಗಿ ನಾವು ಇವರನ್ನು ನಮ್ಮ ಪಾಲುದಾರರನ್ನಾಗಿ ನೇಮಕ ಮಾಡಿದ್ದೇವೆ.” ವಾಣಿಜ್ಯೋದ್ಯಮಿ ಮತ್ತು ಹೂಡಿಕೆದಾರ, ಕಾಜಲ್ ಅವರ ಗಂಡರಾದ ಗೌತಮ್ ಕಿಚ್ಲು ಅವರ ಹೇಳಿಕೆ, “ನಾನು ಆರಂಭಿಕ ಕಂಪನಿಗಳಲ್ಲಿ ಮೊದಲು ಹೂಡಿಕೆ ಮಾಡಿದ ಕಂಪನಿ ಇದಾಗಿದೆ ಮತ್ತು ಇದು ತುಂಬಾ ಬರವಸೆದಾಯಕವಾಗಿದೆ. ಟಿ.ಎ.ಸಿ ಬೆಳವಣಿಗೆಯ ಪಥವು ದ್ವಿಗುಣವಾಗುತ್ತದೆ ಮತ್ತು ಗ್ರಾಹಕ ಉತ್ಪನ್ನ ಮಾರುಕಟ್ಟೆಯಲ್ಲಿ ಆಸ್ಪೋಟಿಸಿ ಮುಂದಿನ 3 ರಿಂದ 5 ವರ್ಷಗಳಲ್ಲಿ ಆಯುರ್ವೇದದ ಮಾರುಕಟ್ಟೆಯಲ್ಲಿ ಮುಖ್ಯ ಬ್ರಾಂಡ್‌ ಆಗುತ್ತದೆ.” ಪರಮ್ ಭಾರ್ಗವ್ ಅವರ ಹೇಳಿಕೆ “ಟಿ.ಎ.ಸಿ ಕಂಪನಿಯಲ್ಲಿ ಕಾಜಲ್ ಮತ್ತು ಗೌತಮ್ ಅವರನ್ನು ಹೊಂದಲು ನಮಗೆ ಸಂತೋಷವಾಗುತ್ತಿದೆ. ಅವರ ನಂಬಿಕೆಗಳು ಆಯುರ್ವೇದವನ್ನು ದೇಶ ಮತ್ತು ಜಗತ್ತಿನಾದ್ಯಂತ ಎಲ್ಲರ ಮನೆಗೆ ಕೊಂಡೊಯ್ಯುವ ನಮ್ಮ ಗುರಿಯೊಂದಿಗೆ ಸರಿಹೊಂದಿಕೊಳ್ಳುತ್ತವೆ. ಇಲ್ಲಿಂದ ಮುಂದೆ ನಮ್ಮ ಪಯಣವು ಇನ್ನು ಹೆಚ್ಚು ಬೆಳೆಯುತ್ತದೆ. ಸಂಗ್ರಹಣೆ ಮಾಡಲಾದ ಹಣವನ್ನು ನಾವು ಡಿಜಿಟಲ್ ಮತ್ತು ರಿಟೇಲ್ ಮಾರುಕಟ್ಟೆಗಾಗಿ ಬಳಸಲಾಗುತ್ತದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments