Sunday, April 28, 2024
spot_img
HomeBangaloreಕಾಂಗ್ರೆಸ್‌ನ ನಮ್ಮ ನೀರು-ನಮ್ಮ ಹಕ್ಕು ಮೇಕೆದಾಟು ಯೋಜನೆ ಪಾದಯಾತ್ರೆ ಮಾಡುವುದು ತಪ್ಪೇನಿಲ್ಲ ದಿಶಾ ಸಭೆಯಲ್ಲಿ ಸಂಸದ...

ಕಾಂಗ್ರೆಸ್‌ನ ನಮ್ಮ ನೀರು-ನಮ್ಮ ಹಕ್ಕು ಮೇಕೆದಾಟು ಯೋಜನೆ ಪಾದಯಾತ್ರೆ ಮಾಡುವುದು ತಪ್ಪೇನಿಲ್ಲ ದಿಶಾ ಸಭೆಯಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಅಭಿಮತ

ದೇವನಹಳ್ಳಿ: ಕಾಂಗ್ರೆಸ್‌ನ ನಮ್ಮ ನೀರು-ನಮ್ಮ ಹಕ್ಕು ಮೇಕೆದಾಟು ಯೋಜನೆ ಪಾದಯಾತ್ರೆ ಮಾಡುತ್ತಿರುವುದು ತಪ್ಪೇನಿಲ್ಲ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಅಭಿಮತ ವ್ಯಕ್ತಪಡಿಸಿದರು.

ದೇವನಹಳ್ಳಿ ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ 2021-22ನೇ ಸಾಲಿನ ತ್ರೆöÊಮಾಸಿಕ ದಿಶಾ ಸಭೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಹಕ್ಕು ನಾವು ಪಡೆದುಕೊಳ್ಳಲು ಪಕ್ಷಾತೀತವಾಗಿ ಯಾರು ಬೇಕಾದರೂ ಹೋರಾಟ ಮಾಡಬಹುದು. ಮೇಕೆ ದಾಟು ಯೋಜನೆ ಪಾದಯಾತ್ರೆ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ ಅದಕ್ಕೆ ಸಂಸದನಾಗಿ ನನ್ನ ಅಭ್ಯಂತರವೇನು ಇಲ್ಲ. ಅದು ಅವರವರ ವಿವೇಚನೆಗೆ ಬಿಟ್ಟಿದ್ದು. ದಿಶಾ ಸಭೆಯಲ್ಲಿ ದಿಶಾ ಸದಸ್ಯರಿಗೆ ಗುರುತಿನ ಚೀಟಿ ನೀಡುವುದರ ಮೂಲಕ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕೋವಿಡ್ 3ನೇ ಅಲೆ ಈಗಾಗಲೇ ವಿಶ್ವದಾದ್ಯಂತ ಆವರಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕಂದಾಯ ಇಲಾಖಾಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಬಂದಿರುವ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಬAಧಪಟ್ಟ ಇಲಾಖೆಗಳಿಂದ ಸರಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವಂತಾಗಬೇಕು. ಕೋವಿಡ್‌ನಿಂದ ಮೃತಪಟ್ಟಂತಹ ಕುಟುಂಬದವರಿಗೆ ಸರಕಾರದಿಂದ ಸಿಗುವ ಪರಿಹಾರವನ್ನು ನೀಡಬೇಕು. ಇತ್ತಿಚೆಗೆ ಕಲ್ಭುರ್ಗಿಯಲ್ಲಿ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 36ನೇ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ್‌ಬೊಮ್ಮಾಯಿ ಅವರು ಪತ್ರಕರ್ತರಿಗೆ ಮುಂದಿನ ಬಜೆಟ್‌ನಲ್ಲಿ ಆರೋಗ್ಯ ಕಾರ್ಡು ಮತ್ತು ಬಸ್ ಪಾಸ್, ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿರುವುದು ಅಭಿನಂದನಾರ್ಹ ಎಂದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಇಲಾಖಾವಾರು ಮಾಹಿತಿಯನ್ನು ಪಡೆದುಕೊಂಡರು. ನನ್ನ ಸಂಸದ ನಿಧಿಯಲ್ಲಿ 1ರೂ. ಸಹ ಉಳಿಸಿಲ್ಲ. ಎಲ್ಲವನ್ನು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಮನಾಗಿ ಹಂಚಿಕೆ ಮಾಡಿದ್ದೇನೆ. ಊಹಾಪೋಹ ಮಾತುಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು.

ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ರೇವಣಪ್ಪ, ಕೃಷಿ ಇಲಾಖಾ ಉಪನಿರ್ದೇಶಕರು, ಜಿಲ್ಲಾಮಟ್ಟದ ಅಧಿಕಾರಿಗಳು, ದಿಶಾ ಸದಸ್ಯರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments