Saturday, April 27, 2024
spot_img
HomeChikballapurನಗರಕ್ಕೆ ಓಮಿಕ್ರಾನ್ ಬರದಂತೆ ತಡೆಗಟ್ಟಿ: ನಗರಸಭೆ ಅಧ್ಯಕ್ಷ ಆನಂದ ರೆಡ್ಡಿ

ನಗರಕ್ಕೆ ಓಮಿಕ್ರಾನ್ ಬರದಂತೆ ತಡೆಗಟ್ಟಿ: ನಗರಸಭೆ ಅಧ್ಯಕ್ಷ ಆನಂದ ರೆಡ್ಡಿ

ಚಿಕ್ಕಬಳ್ಳಾಪುರ: ಕೋವಿಡ್ 19ರ ರೂಪಾಂತರಿ “ಒಮಿಕ್ರಾನ್” ವೈರಾಣುವನ್ನು ಚಿಕ್ಕಬಳ್ಳಾಪುರ  ನಗರಕ್ಕೆ  ಬರದಂತೆ  ತಡೆಗಟ್ಟಲು, ಕೋವಿಡ್ ಲಸಿಕಾಕರಣ ಮತ್ತು ಸರ್ಕಾರ ಹೊರಡಿಸಿರುವ ಕೋವಿಡ್ ನಿಯಂತ್ರಣ  ಮಾರ್ಗಸೂಚಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಕುರಿತು ನಗರದ ಜನತೆಗೆ ಅರಿವು ಮೂಡಿಸುವ ಸಲುವಾಗಿ ಜನದಟ್ಟಣೆ ಆಗಲಿರುವ  ಸ್ಥಳಗಳಿಗೆ   ಮಾರ್ಷಲ್ ಗಳನ್ನು ನೇಮಕ ಮಾಡಲಾಗಿದೆ ಎಂದು ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ  ಡಿ.ಎಸ್.ಆನಂದ ರೆಡ್ಡಿ (ಬಾಬು) ಅವರು ಹೇಳಿದರು. 

ಅವರು  ಸೋಮವಾರ  ಚಿಕ್ಕಬಳ್ಳಾಪುರ  ನಗರಸಭೆಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಗರಸಭೆ ಕೌನಿಲ್ಸ್ ಏರ್ಪಡಿಸಿದ್ದ ತುರ್ತುಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸುಮಾರು 70 ರಿಂದ 75 ಸಾವಿರ ಜನಸಂಖ್ಯೆಯಿದ್ದು, ಜನಸಂದಣಿ ಇರುವ ಎ.ಪಿ.ಎಂ.ಸಿ ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾರ್ಷಲ್ ಗಳನ್ನು ನೇಮಿಸಿದ್ದು, ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ ಎಂದರು. 

ಕೋವಿಡ್ ಲಸಿಕೆಯ ಮೊದಲನೇ  ಡೋಸ್ ಪಡೆದ ಪ್ರತಿಯೊಬ್ಬರೂ ಸಹ ಎರಡನೇ ಡೋಸನ್ನು ಹಾಕಿಸಿಕೊಳ್ಳಬೇಕು. 15 ರಿಂದ 18 ವರ್ಷದೊಳಗಿನ ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳುವಂತೆ ಪೋಷಕರು ತಿಳಿ ಹೇಳಬೇಕು. ಸರ್ಕಾರ ಸೂಚಿಸಿರುವ ಕೋವಿಡ್ ನಿಯಂತ್ರಣ ಮುನ್ನಚ್ಚೆರಿಕೆ ಕ್ರಮಗಳನ್ನು ಜನರು ಪಾಲಿಸಿ ಸಹಕರಿಸಿದ್ದೇ ಆದಲ್ಲಿ ವೈರಾಣನ್ನು ತಡೆಗಟ್ಟಬಹುದು ಎಂದು ಹೇಳಿದರು.

 ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ  ಮುಖಗವಸು ಧರಿಸದೇ ಇರುವವರಿಗೆ ದಂಡವಿಧಿಸಲಾಗುತ್ತದೆ. ಜೊತೆಗೆ ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆಯಿದ್ದು, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಹೋಟೆಲ್ ನ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷರು ತಿಳಿಸಿದರು. 

ಚಿಕ್ಕಬಳ್ಳಾಪುರ ತಾಲ್ಲೂಕಿನ ಆರೋಗ್ಯಾಧಿಕಾರಿ ಡಾ.ಮಂಜುಳಾ ಅವರು ಮಾತನಾಡಿ, ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬರೂ ಸಹ ಹಾಕಿಸಿಕೊಳ್ಳಬೇಕು. ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ಪ್ರೇರಿತರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಕೊಳ್ಳಬೇಕು. ಜೊತೆಗೆ ಸ್ವ ಇಚ್ಚೆಯಿಂದ ಮನೆಯಲ್ಲಿಯೇ ಐಸೋಲೇಷನ್ ಆಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರಸಭೆಯ ಪೌರಾಯುಕ್ತ ಮಹಾಂತೇಶ್ ಅವರು ಮಾತನಾಡಿ, ಚಿಕ್ಕಬಳ್ಳಾಪುರ  ನಗರದಲ್ಲಿ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸುವುದು, ಸಾಮಾಜಿಕ ಅಂತರ ಕಾಯ್ದಿಕೊಳ್ಳುವುದು ಮತ್ತು ಮುಖಗವಸು ಧರಿಸದೇ ಇದ್ದಲ್ಲಿ ದಂಡವಿಧಿಸಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರದ  ಕೋವಿಡ್ ನಿಯಂತ್ರಣ ಮುನ್ನೆಚ್ಚರಿಕೆಯ ಕ್ರಮಗಳನ್ನು ಚಾಚುತಪ್ಪದೇ ಪಾಲಿಸಬೇಕು ಎಂದರು. 

ಸಭೆಯಲ್ಲಿ   ಚಿಕ್ಕಬಳ್ಳಾಪುರ  ನಗರಸಭೆಯ  ಸದಸ್ಯರು, ವಿವಿಧ  ಇಲಾಖೆಯ  ಅಧಿಕಾರಿಗಳು  ಮತ್ತು  ಸಿಬ್ಬಂದಿ  ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments