Wednesday, May 8, 2024
spot_img
HomeRamnagarಗ್ರಾಮ ಒನ್ ಸೇವೆಗಳಲ್ಲಿ ಯಾವುದೇ ಲೋಪದೋಷ ಕಂಡುಬಂದಲ್ಲಿ ಜಿಲ್ಲಾ ಕಾರ್ಯಪಡೆ ಗಮನಕ್ಕೆ ತನ್ನಿ; ಡಾ. ರಾಕೇಶ್...

ಗ್ರಾಮ ಒನ್ ಸೇವೆಗಳಲ್ಲಿ ಯಾವುದೇ ಲೋಪದೋಷ ಕಂಡುಬಂದಲ್ಲಿ ಜಿಲ್ಲಾ ಕಾರ್ಯಪಡೆ ಗಮನಕ್ಕೆ ತನ್ನಿ; ಡಾ. ರಾಕೇಶ್ ಕುಮಾರ್. ಕೆ

ರಾಮನಗರ: ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಬೆಂಗಳುರು-೧. ಕರ್ನಾಟಕ-೧ ಮಾದರಿಯಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಪ್ರತಿ ಗ್ರಾಮದಲ್ಲೂ ಗ್ರಾಮ-೧ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ೧೨೭ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟಾರೆ ೧೭೮ ಸೇವಾ ಕೇಂದ್ರöಗಳು ಅಗತ್ಯವಿದ್ದು, ಈಗಾಗಲೇ ೧೩೮ ಕೇಂದ್ರಗಳು ಸೇವೆಗೆ ಸಿದ್ದವಾಗಿವೆ. ಈ ಕೇಂದ್ರಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡುಬAದಲ್ಲಿ ಅದನ್ನು ಗ್ರಾಮ ಒನ್ ಕಾರ್ಯಪಡೆ ಸರಿಪಡಿಸಬೇಕು ಅಥವಾ ಜಿಲ್ಲಾಡಳಿತ ಕಾರ್ಯಪಡೆ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್.ಕೆ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಗ್ರಾಮ ಒನ್ ಜಿಲ್ಲಾಮಟ್ಟದ ಕಾರ್ಯಪಡೆ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳ ಪಿಂಚಣಿ, ಆರ್.ಟಿ.ಸಿ ಸಕಾಲ ಹಾಗೂ ಸೇವಾ ಸಿಂಧು ಯೋಜನೆಗಳ ಸೇವೆ, ಸಾರ್ವಜನಿಕ ಕುಂದು ಕೊರತೆಗಳ ಸ್ವೀಕಾರ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಆನ್ ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
 ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಮಾತನಾಡಿ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಮುಂದಿನ ದಿನಗಳಲ್ಲಿ ೭೫೦ ಕ್ಕೂ ಹೆಚ್ಚು ಸೇವಾ ಸೌಲಭ್ಯಗಳನ್ನು ನಾಗರಿಕರು ಪಡೆಯಬಹುದಾಗಿದೆ. ಎಲ್ಲಾ ಇಲಾಖೆಗಳು ಸಂಬAಧಿಸಿದ ಸೇವೆಗಳನ್ನು ಕುರಿತು ಜನರಿಗೆ ಮಾಹಿತಿ ನೀಡಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಸರ್ಕಾರದ ವಿವಿಧ ಇಲಾಖೆ ಸೇವೆಗಳನ್ನು ಗ್ರಾಮ ಒನ್‌ನಲ್ಲಿ ನೀಡಲಾಗುತ್ತಿದ್ದು, ಕೇಂದ್ರಗಳಲ್ಲಿ ಸೇವೆಗೆ ಅಗತ್ಯ ಹಣಕ್ಕಿಂತ ಹೆಚ್ಚು ನೀಡುವಂತೆ ಒತ್ತಾಯ ಮಾಡುವುದು, ಅತೃಪ್ತ ಸೇವೆ, ಸಾರ್ವಜನಿಕರ ದೂರು, ಸರ್ಕಾರಿ ಸಕಾಲ ಸೇವೆ ನಾಗರಿಕರಿಗೆ ತಲುಪದೇ ಇದ್ದಲ್ಲಿ ಜಿಲ್ಲಾ ಕಾರ್ಯಪಡೆ ಸಮಿತಿ ಗಮನಕ್ಕೆ ತರಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್ ಹಾಗೂ ಗ್ರಾಮ ಒನ್ ಕಾರ್ಯಪಡೆ ಸಮಿತಿಯ ಸಿಬ್ಬಂದಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments