Friday, April 26, 2024
spot_img
HomeChikballapurಔಷಧಿ ತಯಾರಕರ ಮಾಫಿಯ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ

ಔಷಧಿ ತಯಾರಕರ ಮಾಫಿಯ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ

ಚಿಂತಾಮಣಿ: ಕರೊನಾ ವ್ಯಾಪಕವಾಗಿ ಹರಡುತ್ತಿದೆ ಎಂಬ ಸರ್ಕಾರ ಮತ್ತು ಟಿ.ವಿ.ಮಾಧ್ಯಮಗಳ ನಿರಂತರ ಪ್ರಚಾರಕ್ಕೆ ಕಂಗೆಟ್ಟಿರುವ ಜನತೆಗೆ ವಾಸ್ತವಾಂಶವನ್ನು ತಿಳಿಸುವ ಪ್ರಯತ್ನ ಮಾಡಿದ ಖ್ಯಾತ ವೈದ್ಯರಿಗೆ ಸರ್ಕಾರ ಎಚ್ಚರಿಕೆ ನೀಡಿರುವುದು ಅತ್ಯಂತ ಹಾಸ್ಯಾಸ್ಪದ ಮತ್ತು ಮೂಲಭೂತ ಹಕ್ಕುಗಳನ್ನು ದಮನಮಾಡುವ ಯತ್ನವಾಗಿದೆ ಎಂದು ಮಾಜಿ ನಗರಸಭಾ ಸದಸ್ಯ ಎಸ್. ಸುಬ್ರಮಣ್ಯಂ ಆರೋಪಿಸಿದ್ದಾರೆ.

ಕರೊನಾ ವಾಸ್ತವಾಂಶಗಳನ್ನು ರಾಜ್ಯ ಜನತೆಗೆ ತಿಳಿಸಲು ಮುಂದಾಗಿರುವ ವೈದ್ಯರ ತಂಡವು ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದು ಹಣ ಗಳಿಸುವ ದುರುದ್ದೇಶಗಳಿಂದ ದೂರವಿದ್ದಾರೆ.  ಇವರು ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆಂಬ ಸರ್ಕಾರದ ವಾದದಲ್ಲಿ ಹುರುಳಿಲ್ಲ.  ಕರೋನಾ ಮುಂಜಾಗ್ರತೆಗಳನ್ನು ಪಾಲಿಸಬೇಡಿ ಎಂದಾಗಲೀ ಚಿಕಿತ್ಸೆ ಪಡೆಯಬೇಡಿ ಎಂದಾಗಲೀ  ವೈದ್ಯರು ಹೇಳಿಲ್ಲ.  ಔಷಧಿ ತಯಾರಕರ ಮಾಫಿಯ ವ್ಯ÷ವಸ್ಥಿತವಾಗಿ ಕೆಲಸ ಮಾಡುತ್ತಿದ್ದು ಇವರೊಂದಿಗೆ ಶಾಮೀಲಾಗಿರುವ ಹಲವಾರು ಟಿ.ವಿ.ಮಾದ್ಯಮಗಳು ಪ್ರಸಾರದ ನಿಯಮ ಮತ್ತು ನೀತಿ ಸಂಹಿತೆಗಳನ್ನು ಉಲ್ಲಂಘಿಸಿ ಅಧಿಕೃತವಲ್ಲದ ಅಂಕಿ ಅಂಶಗಳನ್ನು ನಿರಂತರವಾಗಿ ಬಿತ್ತರಿಸುತ್ತಿರುವುದು ಕಳವಳಕಾರಿಯಾಗಿದೆ. ಔಷಧಿ ತಯಾರಕರ ಲಾಬಿಗೆ ಸರ್ಕಾರ ಮಣಿದು ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳಲು ಹೊರಟಿದೆಯೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದ್ದು.  ಕರೋನಾ ಬಂದ ಲಾಗಾಯ್ತು ವ್ಯಾಪಕವಾಗಿ ಉಪಯೋಗ ವಾಗುತ್ತಿರುವ ಡೊಲೊ ಮೊದಲಾದ ಔಷಧಿಗಳಲ್ಲಿ ಗುಣಮಟ್ಟ ಮತ್ತು ಸಾಚಾತನ ಎಷ್ಟಿದೆಯೆಂದು ಪತ್ತೆಮಾಡಲು ಹರಸಾಹಸ ಪಡಬೇಕಾಗಿದೆ.  ಈ ಹಿಂದೆ ಮೂರು ಅಥವಾ ನಾಲ್ಕು ಮಾತ್ರೆಗಳಿಂದ ನಿಯಂತ್ರಣಕ್ಕೆ ಬರುತ್ತಿದ್ದ ರೋಗವು ಈಗ ಹತ್ತು-ಇಪ್ಪತ್ತು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೂ ನಿಯಂತ್ರಣಕ್ಕೆ ಬರದೇ ಇರುವುದು ಸಾಮಾನ್ಯವಾಗಿದೆ. ಇದು ಅತ್ಯಂತ ಪ್ರಮಾದಕರ ವಿಷಯವಾಗಿದ್ದು ಸರ್ಕಾರ ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸುವುದು ಒಳಿತು ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments