Sunday, May 5, 2024
spot_img
HomeChikballapurಸಂತ್ರಸ್ತರಿಗೆ ಹಾಗೂ ಅತೀವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಪರಿಹಾರದ ಚೆಕ್ ವಿತರಣೆ

ಸಂತ್ರಸ್ತರಿಗೆ ಹಾಗೂ ಅತೀವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಪರಿಹಾರದ ಚೆಕ್ ವಿತರಣೆ

ಗುಡಿಬಂಡೆ: ರಾಜ್ಯದಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಬೆಳೆಗಳ ನಷ್ಟ ಅನುಭವಿಸಿದ ರೈತರು, ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವಂತಹ ಹಾಗೂ ಕೋವಿಡ್ ನಿಂದ ಮೃತಪಟ್ಟ 23 ಕುಟುಂಬಗಳನ್ನು  ಗುಡಿಬಂಡೆ ತಾಲೂಕಿನಲ್ಲಿ ಗರ‍್ತಿಸಿದ್ದು ಇದರಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ 19 ಕುಟುಂಬಗಳು ಮತ್ತು ಎಪಿಲ್ 04 ಕುಟುಂಬಗಳನ್ನು ಗರ‍್ತಿಸಿದ್ದು ಈ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ‍್ಕಾರಗಳು ಜಂಟಿಯಾಗಿ ಪರಿಹಾರವನ್ನು ಜಂಟಿಯಾಗಿ ತ್ವರಿತಗತಿಯಲ್ಲಿ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ & ಕುಟುಂಬ ಕಲ್ಯಾಣ ಹಾಗೂ ವೈಧ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಕೋವಿಡ್ 19 ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಚೆಕ್ ವಿತರಣೆ ಮತ್ತು ಅತಿವೃಷ್ಠಿ ಪ್ರವಾಹದಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ಧನ ಕರ‍್ಯಾದೇಶ ಪತ್ರ ವಿತರಣಾ ಕರ‍್ಯಕ್ರಮವು ಗುಡಿಬಂಡೆ ಪಟ್ಟಣದ ಸರ‍್ಕಾರಿ ರ‍್ನಾಟಕ ಪಬ್ಲಿಕ್‌ ಶಾಲಾ ಆವರಣದಲ್ಲಿ ನಡೆದ ಕರ‍್ಯಕ್ರಮದಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್  ಅತೀವೃಷ್ಠಿಯಿಂದ ಮನೆಗಳನ್ನು ಕಲೆದುಕೊಂಡಿರುವ ಸಂತ್ರಸ್ತರಿಗೆ ಪರಿಹಾರವನ್ನು ಂ,ಃ,ಅ ರ‍್ಜೆಗಳಾಗಿ ವಿಂಗಡಿಸಿದ್ದು ಸಂಪರ‍್ಣವಾಗಿ ಮನೆಗಳನ್ನು ಕಳೆದು ಕೊಂಡವರಿಗೆ 5 ಲಕ್ಷ ಹಾಗೂ ಶೇ 75%  ಮನೆ ಕಳೆದುಕೊಂಡಿರುವವರಿಗೆ 3 ಲಕ್ಷ ಕೊಡಲಾಗುವುದೆಂದರು. ಯಾರಾದರೂ ಪರ‍್ತಿ ಮನೆ ಕೆಡವಿ ಹೊಸದಾಗಿ ಮನೆ ಕಟ್ಟಿಕೊಳ್ಳುತ್ತೆವೆಂದರೆ ಅಂತಹವರಿಗೆ ನಮ್ಮ ರ‍್ಕಾರ 5  ಲಕ್ಷ ಪರಿಹಾರ ಕೊದಲಾಗುವುದೆಂದರು. ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ನೀಡಲಾಗುವ ಪರಿಹಾರದ ಹಣವನ್ನು ಸೂಕ್ತ  ರೀತಿಯಲ್ಲಿ ಬಳಸಿಕೊಳ್ಳಬೇಕೆಂದರು. ಹಾಗೂ ಅಂತಹ ಸಂತ್ರಸ್ತ ಕುಟುಂಬಗಳ ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಡಕಾಗದ ಹಾಗೆ ನಮ್ಮ ರ‍್ಕಾರವೇ ಕೋವಿಡ್ ನಿಂದ ತಂದೆ-ತಾಯಿಗಳನ್ನು ಕಳೆದುಕೊಂಡಿರುವ ಮಕ್ಕಳ ವಿಧ್ಯಾಭ್ಯಾಸದ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದೆ ಎಂದರು. ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ರೈತರಿಗೆ ಯಾವುದೇ ರ‍್ಕಾರ ಇಷ್ಟು ತ್ವರಿತವಾಗಿ ಪರಿಹಾರವನ್ನು ಒದಗಿಸಿಲ್ಲ  ಈ ಕೆಲಸವನ್ನು ನಮ್ಮ ಸರ‍್ಕಾರ ಮಾಡಿದೆ ಎಂದರು. ನಂತರ  ಬಾಗೇಪಲ್ಲಿ-ಗುಡಿಬಂಡೆ ಕ್ಷೇತ್ರದ ಶಾಸಕ  ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ ನಮ್ಮ ಭಾಗವು ಅತ್ಯಂತ ಹಿಂದುಳಿದ ತಾಲೂಕಾಗಿದ್ದು ನಮ್ಮ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುಧಾನ ಹಾಗೂ ಯೋಜನೆಗಳನ್ನು ಕೊಟ್ಟು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದರು.ಕರ‍್ಯಕ್ರಮದಲ್ಲಿ ಚಿಕ್ಕಬಳ್ಳಾಪುರ  ಜಿಲ್ಲಾಧಿಕಾರಿಗಳಾದ ಶ್ರೀಮತಿ.ಆರ್.ಲತಾ, ಜಿಲ್ಲಾ ವರಿಷ್ಠಾದಿಕಾರಿಗಳಾದ  ಮಿಥುನ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕರ‍್ಯನರ‍್ವಹಣಾಧಿಕಾರಿ ಪಿ.ಶಿವಶಂಕರ್, ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್, ಗುಡಿಬಂಡೆ ತಹಸೀಲ್ದಾರ್ ಸಿಗ್ಬತುಲ್ಲಾ, ತಾಲ್ಲೂಕು ಪಂಚಾಯ್ತಿ  ಕರ‍್ಯನರ‍್ವಾಹಣಾಧಿಕಾರಿ ರವೀಂದ್ರ ಡಿ ಎನ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಷೀರಾ ರಿಜ್ವಾನ್, ಉಪಾಧ್ಯಕ್ಷ ಅನಿಲ್ ಕುಮಾರ್ ಹಾಗೂ ಎಲ್ಲಾ ಇಲಾಖೆಗಳ ಸಿಬ್ಬಂದಿ ಕರ‍್ಯಕ್ರಮದಲ್ಲಿ ಭಾಗವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments