Tuesday, April 30, 2024
spot_img
HomeRamnagarಅನ್ನ ಹಾಗೂ ವಿದ್ಯಾದಾನ ಶ್ರೇಷ್ಠದಾನ: ಶಿವಕುಮಾರ್

ಅನ್ನ ಹಾಗೂ ವಿದ್ಯಾದಾನ ಶ್ರೇಷ್ಠದಾನ: ಶಿವಕುಮಾರ್

ರಾಮನಗರ: ಶ್ರೀ ಶ್ರೀ ಶ್ರೀ ಡಾ: ಶಿವಕುಮಾರ್ ಸ್ವಾಮೀಜಿ ಅವರು ಮಾನವೀಯ ನೆಲೆಯಲ್ಲಿ ಬಡವರಿಗೆ ಅನ್ನದಾನ ಹಾಗೂ ವಿದ್ಯಾದಾನ ಮಾಡಿ, ಬಡ ಮಕ್ಕಳಿಗೆ ಜ್ಞಾನದ ಜ್ಯೋತಿಯಾದರು. ಸಮಾಜದಲ್ಲಿ ದೇವರಾದರು ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಶಿವಕುಮಾರ್ ಎಂ.ಎಸ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ, ದಾಸೋಹ ದಿನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಶ್ರೀ ಶ್ರೀ ಡಾ;  ಶಿವಕುಮಾರ್ ಸ್ವಾಮೀಜಿ ಹಾಗೂ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಡಾ: ಶಿವಕುಮಾರ್ ಸ್ವಾಮೀಜಿ ಅವರು ಮಾಗಡಿ ತಾಲ್ಲೂಕಿನ ವೀರಪುರದವರು ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ. ಬಸವಣ್ಣ ಅವರು ನೀಡಿದ ತತ್ವ ಮತ್ತು ಆದರ್ಶಗಳನ್ನು ಪಾಲಿಸಿ ಸಮಾಜ ಹಾಗೂ ದೇಶದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದಾರೆ. ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ರೂಪಿಸಿದರು. ಇವರು ಮಾಡಿರುವ ಸಮಾಜ ಸೇವೆ ಪ್ರತಿಯೊಬ್ಬರಿಗೂ ಮಾದರಿ ಎಂದರು.

 ಅಂಬಿಗರ ಚೌಡಯ್ಯ 12ನೇ ಶತಮಾನದ  ಶಿವಶರಣ ಹಾಗೂ ವಚನಕಾರರು. ಜಾತಿ ವ್ಯವಸ್ಥೆ, ಮೂಡನಂಬಿಕೆ, ಮೌಡ್ಯಗಳನ್ನು ಅನುಸರಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ತಿಳಿಸಿದರು. ಜನಸಾಮಾನ್ಯರು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ದುಡಿಮೆಯಲ್ಲಿ ಒಂದು ಭಾಗವನ್ನು ಸಮಾಜ ಸೇವೆಗೆ ಮುಡಿಪಾಗಿಸಬೇಕು ಎಂದರು.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕೆಂಪರಾಜು ಅವರು ಮಾತನಾಡಿ ಅಂಬಿಗರ ಚೌಡಯ್ಯ ಭಿನ್ನ ವ್ಯಕ್ತಿತ್ವವನ್ನು ಹೊಂದಿದ್ದರು. ತಪ್ಪು ಮಾಡಿದವರನ್ನು ಟೀಕಿಸದೆ ಬಿಡುತ್ತಿರಲಿಲ್ಲ. ಇವರನ್ನು ಕೆಚ್ಚೆದೆಯ ವಚನಕಾರರು ಎಂದು ಸಹ ಕರೆಯಲಾಗುತ್ತದೆ.  ಅಂಬಿಗರ ಚೌಡಯ್ಯ ಅವರ ವಚನಗಳು ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುತ್ತದೆ. ಅಂಬಿಗ ವೃತ್ತಿಯಲ್ಲಿ ಜೀವನ ನಡೆಸುತ್ತಿದ್ದ ಇವರು ಸಮಾಜವನ್ನು ತಿದ್ದುವ ಕೆಲಸ ಸಹ ಮಾಡಿದ್ದಾರೆ. ಇವರ ಹಲವಾರು ವಚನಗಳು ಆಧುನಿಕ ಪರಿಕಲ್ಪನೆಯನ್ನು ಹೊಂದಿದೆ. ಅವರ ವಚನಗಳು ಇಂದಿಗೂ ಸಹ ನಮಗೆ ಜೀವನದ ಪಾಠವನ್ನು ಹೇಳುತ್ತದೆ ಎಂದರು.

ನಿವೃತ್ತ ಶಿಕ್ಷಕ ರಾಮು ಮಾತನಾಡಿ ಅಂಬಿಗರಚೌಡಯ್ಯ ಜಯಂತಿ ಹಾಗೂ ಡಾ: ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜು ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಿ ಜನರಿಗೆ ಮಹಾನ್ ವ್ಯಕ್ತಿಗಳ ಜೀವನದ ಪರಿಚಯ ಮಾಡಿಕೊಡುತ್ತಿರುವುದು ಸಂತೋಷದ ವಿಷಯವಾಗಿದೆ. ಅಂಬಿಗರ ಚೌಡಯ್ಯ ಅವರು 12 ಶತಮಾನದಲ್ಲೇ ಜಾತಿ ಮೂಢನಂಬಿಕೆ ನಿರ್ಮೂಲನೆ ಬಗ್ಗೆ ಚಿಂತಿಸಿದರು. ಇದು ಇಂದಿಗೂ ಪ್ರಸ್ತುತ ಎಂದರು.

ಅAಬಿಗರ ಚೌಡಯ್ಯ ಅವರ ಕಾಯಕ ದೋಣಿ ನಡೆಸುವುದು. ಅವರು ತಮ್ಮ ಕಾಯಕದಿಂದ ಬಂದ ಹಣದಲ್ಲಿ ಸಮಾಜಸೇವೆ ಮಾಡುತ್ತಿದ್ದರು. ಕುಷ್ಟರೋಗ ಹಾವು ಕಡಿತ ಹೀಗೆ ಹಲವಾರು ರೋಗಗಳಿಗೆ ಔಷಧಿ ಸಹ ನೀಡುತ್ತಿದ್ದರು ಎಂದರು.

ಸಮುದಾಯದ ಮುಖಂಡರಾದ ಈಶ್ವರ್ ಅವರು ಇದೇ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಚೌ.ಪೂ ಸ್ವಾಮಿ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಡಾ|| ಅಂಕನಹಳ್ಳಿ ಪಾರ್ಥ ಕಾರ್ಯಕ್ರಮವನ್ನು ನಿರೂಪಿಸಿದವರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಎಚ್, ರೇಷ್ಮೆ ಇಲಾಖೆ ಸಂದೀಪ್ ಹಾಗೂ ಕಛೇರಿ ಸಿಬ್ಬಂದಿಗಳು  ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments